ಇನ್ನು ಉದ್ಯೋಗದ ಜತೆಗೆ ಪಿಎಫ್‌ ಖಾತೆ ಅಟೊಮ್ಯಾಟಿಕ್ ವರ್ಗಾವಣೆ

Subscribe to Oneindia Kannada

ಹೊಸದಿಲ್ಲಿ, ಆಗಸ್ಟ್ 11: ಇನ್ನು ಮುಂದೆ ಉದ್ಯೋಗ ಬದಲಿಸಿದವರು ಭವಿಷ್ಯ ನಿಧಿ ಖಾತೆ ವರ್ಗಾವಣೆಗೆ ಕಷ್ಟಪಡಬೇಕಾಗಿಲ್ಲ. ಹೊಸ ಉದ್ಯೋಗಕ್ಕೆ ಸೇರುತ್ತಿದ್ದಂತೆ ಪಿಎಫ್ ಖಾತೆಯೂ ಸ್ವಯಂಚಾಲಿತವಾಗಿ ಅಲ್ಲಿಗೇ ವರ್ಗಾವಣೆಯಾಗಲಿದೆ.

ನಿವೃತ್ತಿ ದಿನವೇ ಉದ್ಯೋಗಿಗಳ ಕೈಗೆ ಪಿಂಚಣಿ ಮೊತ್ತ

ಸೆಪ್ಟೆಂಬರ್ ತಿಂಗಳಿನಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದೀಗ ಪಿಎಫ್‌ ಸೇರ್ಪಡೆಗೆ ಆಧಾರ್‌ ಕಡ್ಡಾಯ ಗೊಳಿಸಲಾಗಿದೆ. ಹೀಗಾಗಿ ಕಾರ್ಮಿಕರು ಅದೇ ಖಾತೆಯನ್ನು ಉಳಿಸಿಕೊಳ್ಳಬಹುದು' ಎಂದು ಭವಿಷ್ಯ ನಿಧಿ ಮುಖ್ಯ ಆಯುಕ್ತ ವಿ.ಪಿ. ಜಾಯ್‌ ತಿಳಿಸಿದ್ದಾರೆ.

PF Account Automatically Transfer With New Employment

ಒಬ್ಬ ವ್ಯಕ್ತಿ ಉದ್ಯೋಗ ಬದಲಿಸಿದಾಗ ಯಾವುದೇ ಅರ್ಜಿಯ ಅಗತ್ಯವಿಲ್ಲದೆ ಕೇವಲ ಮೂರೇ ದಿನಗಳಲ್ಲಿ ಖಾತೆಯ ವರ್ಗಾವಣೆಯಾಗಲಿದೆ. ಆಧಾರ್‌ ಐಡಿ ಮತ್ತು ದೃಢೀಕೃತ ಐಡಿ ಹೊಂದಿದ್ದರೆ ಸಾಕು, ಆತ ದೇಶದ ಯಾವುದೇ ಭಾಗಕ್ಕೆ ಹೋದರೂ ಖಾತೆ ವರ್ಗಾವಣೆಯಾಗುತ್ತದೆ.

Paternity Leave Gaining Prevalence in India: Now Fathers Can Get 3 Months leave | Oneindia Kannada

ಪಿಎಫ್‌ ಹಣವನ್ನು ಮನೆ ಖರೀದಿ ಅಥವಾ ನಿರ್ಮಾಣ, ಮಕ್ಕಳ ಶಿಕ್ಷಣ, ಆಸ್ಪತ್ರೆ ಶುಲ್ಕ ಪಾವತಿ ಮೊದಲಾದ ಪ್ರಮುಖ ಉದ್ದೇಶಗಳಿಗೆ ಮಾತ್ರ ಹಿಂಪಡೆದುಕೊಳ್ಳುವಂತೆ ಪಿಎಫ್‌ ಖಾತೆದಾರರಿಗೆ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಿದ್ದೇವೆ ಎಂದು ಜಾಯ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Those who change their jobs are not required to transfer the Provident Fund accounts in future. The PF account will automatically be transferred to the new job. The system will be implemented from September.
Please Wait while comments are loading...