• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಡೀ ದೇಶದಲ್ಲಿಯೇ ಈ ರಾಜ್ಯದಲ್ಲಿ ಪೆಟ್ರೋಲ್ ದರ ಕಡಿಮೆ: ಕಾರಣ ಏನು ಗೊತ್ತೇ?

|

ಪಟ್ನಾ, ಫೆಬ್ರವರಿ 20: ಇಡೀ ದೇಶದ ಜನತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಸತತ 12ನೆಯ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಯಾವ ರಾಜ್ಯವೂ ಹೊರತಾಗಿಲ್ಲ. ಆದರೆ ದೇಶದ ಒಂದು ರಾಜ್ಯದಲ್ಲಿ ಇತರೆ ರಾಜ್ಯಗಳಿಗಿಂತ ಪೆಟ್ರೋಲ್ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.

ಈ ರಾಜ್ಯದಲ್ಲಿ ಅಧಿಕೃತವಾಗಿ ಪೆಟ್ರೋಲ್ ಬೆಲೆ ಈಗಾಗಲೇ ಲೀಟರ್‌ಗೆ 90 ರೂ ಗಡಿ ದಾಟಿದೆ. ಆದರೂ ಅಲ್ಲಿನ ಜನರು ಕಡಿಮೆ ದರದಲ್ಲಿ ಸಿಗುವ ಪೆಟ್ರೋಲ್ ಹುಡುಕಿಕೊಂಡು ಹೋಗುತ್ತಿದ್ದಾರೆ. ಈ ಪೆಟ್ರೋಲ್ ಲಭ್ಯವಾಗುತ್ತಿರುವುದು ಕಾಳಸಂತೆಯಲ್ಲಿ. ಅಂದಹಾಗೆ ಪೆಟ್ರೋಲ್ ಈ ರಾಜ್ಯಕ್ಕೆ ಬರುತ್ತಿರುವುದು ಕಳ್ಳಸಾಗಣೆ ಮೂಲಕ!

ಸತತ 12ನೇ ದಿನ ತೈಲ ಬೆಲೆ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್ 1.30 ರೂ ಹೆಚ್ಚಳ

ನಿಜ. ಬಿಹಾರದ ಕೆಲವು ಭಾಗಗಳಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್ ಲಭ್ಯವಾಗುತ್ತಿದೆ. ಇದರ ಮೂಲ ನೆರೆಯ ನೇಪಾಳ ದೇಶ. ನೇಪಾಳದ ಗಡಿ ಭಾಗದಲ್ಲಿರುವ ಬಿಹಾರದ ಅರಾರಿಯಾ ಮತ್ತು ಕಿಶನ್‌ಗಂಜ್‌ಗಳ ಜನರು ಗಡಿ ದಾಟಿ ನೇಪಾಳಕ್ಕೆ ಹೋಗಿ ಬರುತ್ತಿದ್ದಾರೆ. ಹೀಗೆ ಹೋಗಿ ಬರುವಾಗ ಕ್ಯಾನ್‌ಗಳಲ್ಲಿ ಪೆಟ್ರೋಲ್‌ಗಳನ್ನು ತುಂಬಿಸಿಕೊಂಡು ಬರುತ್ತಿದ್ದಾರೆ. ಏಕೆಂದರೆ ಬಿಹಾರಕ್ಕೆ ಹೋಲಿಸಿದರೆ ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 22 ರೂಪಾಯಿಯಷ್ಟು ಕಡಿಮೆ ಇದೆ. ಮುಂದೆ ಓದಿ.

ಭಾರತಕ್ಕಿಂತ ಕಡಿಮೆ ದರ

ಭಾರತಕ್ಕಿಂತ ಕಡಿಮೆ ದರ

ನೇಪಾಳಕ್ಕೆ ಪೆಟ್ರೋಲ್ ಪೂರೈಸುವುದು ಭಾರತ. ಭಾರತೀಯ ತೈಲ ನಿಗಮವು (ಐಒಸಿ) ಗಲ್ಫ್ ದೇಶಗಳಿಂದ ನೇಪಾಳಕ್ಕಾಗಿ ಪೆಟ್ರೋಲ್ ಆಮದು ಮಾಡಿಕೊಳ್ಳುತ್ತಿದೆ. ಅದನ್ನು ವೆಚ್ಚದ ಬೆಲೆಗೇ ಮಾರಾಟ ಮಾಡುತ್ತಿದೆ. ಅದಕ್ಕೆ ಪರಿಷ್ಕರಣೆಯ ಶುಲ್ಕವನ್ನು ಮಾತ್ರ ಪಡೆದುಕೊಳ್ಳುತ್ತಿದೆ. ಆದರೆ ಭಾರತಕ್ಕಿಂತಲೂ ನೇಪಾಳದಲ್ಲಿ ತೈಲ ಬೆಲೆ ಬಹಳ ಅಗ್ಗ. ಬಿಹಾರದ ಅರಾರಿಯಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 93.50 ರೂ ಇದ್ದರೆ, ನೇಪಾಳದಲ್ಲಿ ಲೀಟರ್‌ಗೆ 70.62 ರೂ. ಇದೆ.

Explained: ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ ಏಕೆ?

ಪೆಟ್ರೋಲ್ ಪಂಪ್‌ಗಳಿಗೆ ನಷ್ಟ

ಪೆಟ್ರೋಲ್ ಪಂಪ್‌ಗಳಿಗೆ ನಷ್ಟ

ಗಡಿಯಲ್ಲಿರುವ ಸಣ್ಣ ಮಾರ್ಗದ ಮೂಲಕ ಎರಡೂ ದೇಶಗಳ ಜನರು ಓಡಾಡುತ್ತಾರೆ. ಪೆಟ್ರೋಲ್, ಡೀಸೆಲ್‌ಗಳನ್ನು ಕ್ಯಾನ್‌ನಲ್ಲಿ ನೇಪಾಳದಿಂದ ಕಳ್ಳ ಸಾಗಣೆ ಮಾಡಿ ಬಿಹಾರದ ಸಣ್ಣ ಪುಟ್ಟ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಈ ಚಟುವಟಿಕೆ ಹೆಚ್ಚಾಗಿದ್ದು, ಗಡಿ ಭಾಗದಲ್ಲಿನ ಪೆಟ್ರೋಲ್ ಪಂಪ್‌ಗಳಿಗೆ ತೀವ್ರ ಹೊಡೆತ ಬೀಳುತ್ತಿದೆ.

ಕೆಲವರ ಬಂಧನ

ಕೆಲವರ ಬಂಧನ

ನೇಪಾಳದಿಂದ ಪೆಟ್ರೋಲಿಯಂ ಉತ್ಪನ್ನಗಳು ಕಳ್ಳಸಾಗಣೆಯಾಗುತ್ತಿರುವುದರಿಂದ ತಮಗೆ ಭಾರಿ ನಷ್ಟ ಉಂಟಾಗುತ್ತಿದೆ ಎಂದು ರಕ್ಷೌಲ್, ಅದಾಪುರ್, ಚೌರಾಡನೊ, ಘೋರಸಹನ್ ಮತ್ತು ಕುಂಡ್ವಾ-ಚೈನ್‌ಪುರ ಪೆಟ್ರೋಲ್ ಸ್ಟೇಷನ್‌ಗಳ ಮಾಲೀಕರು ಆರೋಪಿಸಿದ್ದಾರೆ. ಹೀಗೆ ಕಳ್ಳಮಾರ್ಗದ ಮೂಲಕ ಪೆಟ್ರೋಲ್ ತರುತ್ತಿರುವ ಅನೇಕ ಜನರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ನದಿ ಮೂಲಕ ರವಾನೆ

ನದಿ ಮೂಲಕ ರವಾನೆ

ನೇಪಾಳದ ತ್ರಿಬೇಣಿ, ರಾಣಿನಗರ ಮತ್ತು ರತನ್‌ಗಂಜ್‌ಗಳಲ್ಲಿ ಪೆಟ್ರೋಲ್ 69 ರೂನಂತೆ ಲಭ್ಯವಾಗುತ್ತಿದ್ದು, ಅಲ್ಲಿಂದ ಗಂಡಕ್ ನದಿ ಮೂಲಕ ದೋಣಿಗಳಲ್ಲಿ ಚುಂಬಟ್ಟಾ, ಚಕ್ದಹಾ ಮತ್ತು ಸಸ್ತಾಗಳಲ್ಲಿಗೆ ತರಲಾಗುತ್ತಿದೆ. ಹೀಗೆ ತರಲಾಗುವ ಪೆಟ್ರೋಲ್ ಅನ್ನು ಪೆಟ್ರೋಲ್ ಪಂಪ್‌ಗಳಲ್ಲಿ ಸಿಗುವ ದರಕ್ಕಿಂತ ಕಡಿಮೆ ಬೆಲೆಗೆ ಮಾರುತ್ತಿರುವುದರಿಂದ ಸ್ಥಳೀಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಕೈಲಾಗದವರು ಮೈ ಪರಚಿಕೊಂಡರು: ಪ್ರಧಾನಿ ಮೋದಿಗೆ ದಿನೇಶ್ ಗುಂಡೂರಾವ್ ವ್ಯಂಗ್ಯ

ಪ್ರತಿ ದಿನ ಸಾವಿರಾರು ರೂ ಆದಾಯ

ಪ್ರತಿ ದಿನ ಸಾವಿರಾರು ರೂ ಆದಾಯ

ಸ್ಥಳೀಯರು ತಂಡಗಳನ್ನು ಕಟ್ಟಿಕೊಂಡು ಈ ಬಿಜಿನೆಸ್ ನಡೆಸುತ್ತಿದ್ದಾರೆ. ಪ್ರತಿದಿನ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಭಾರತಕ್ಕೆ ಕಳ್ಳಮಾರ್ಗದಲ್ಲಿ ತೈಲ ಸಾಗಣೆ ಆಗುತ್ತಿರುವುದನ್ನು ತಡೆಯಲು ನೇಪಾಳ ಪೊಲೀಸರು ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಪರ್ಸಾ ಜಿಲ್ಲೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿ ಅವರ ಬಳಿ ಇದ್ದ ತೈಲ ಟ್ಯಾಂಕರ್ ಒಂದರಿಂದ 1060 ಲೀಟರ್ ಡೀಸೆಲ್ ವಶಪಡಿಸಿಕೊಂಡಿದ್ದಾರೆ.

English summary
Petrol and Diesel smuggling from Nepal to its bordering areas of Bihar as Nepal sells fuel for cheaper price compare to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X