ಸತತ ಎರಡನೇ ಏರಿಕೆ ನಂತರ ಇಳಿಕೆಯಾದ ಇಂಧನ ದರ

ನವದೆಹಲಿ, ಡಿಸೆಂಬರ್ 21: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ದಿನ ಏರಿಕೆಯಾದ ಬಳಿಕ ಶುಕ್ರವಾರದಂದು ಕೊಂಚ ಇಳಿಮುಖವಾಗಿದೆ. ಸರಿ ಸುಮಾರು 20 ಪೈಸೆ ತನಕ ಇಂಧನ ಬೆಲೆ ಇಳಿಕೆ ಕಂಡಿದೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 20 ಪೈಸೆ ಏರಿಕೆ ಕಂಡು ಲೀಟರ್ ಗೆ 70.46 ರೂಪಾಯಿಯಾಗಿದೆ. ದೆಹಲಿಯಲ್ಲಿ ಡೀಸೆಲ್ ಪ್ರತಿ ಲೀಟರ್ ಗೆ 64.39 ರೂಪಾಯಿಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ. ಎರಡು ತಿಂಗಳಿನಿಂದಲೂ ಇಳಿಕೆ ಕಾಣುತ್ತಲೇ ಸಾಗಿದ್ದ ಇಂಧನ ಬೆಲೆಯು ಕಳೆದ ಎರಡು ದಿನಗಳಲ್ಲಿ ಕೊಂಚ ಏರಿಕೆ ಕಂಡಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ.ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಇಂದು ಡಾಲರ್ ಎದುರು ರುಪಾಯಿ ಮೌಲ್ಯ 70.12ರು ನಷ್ಟಿದೆ.

Petrol, diesel prices slashed by up to 20 paise per litre on Friday. Check rates here

ಅಕ್ಟೋಬರ್ ನಿಂದ ಈವರೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 30ರಷ್ಟು ಇಳಿಕೆ ಕಂಡಿತ್ತು. ಇದಕ್ಕೆ ಬೇಡಿಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿದ್ದು ಮುಖ್ಯ ಕಾರಣವಾಗಿತ್ತು. ಇದಾದ ಬಳಿಕ, ತೈಲ ತಯಾರಿಕಾ ಕಂಪನಿಗಳು ತೈಲ ಉತ್ಪಾದನೆ ಪ್ರಮಾಣದಲ್ಲಿ ಇಳಿಕೆ ಮಾಡಿವೆ. ದಿನಕ್ಕೆ 1.2 ಮಿಲಿಯನ್ ಬ್ಯಾರಲ್ ಉತ್ಪಾದನೆ ಕಡಿಮೆ ಮಾಡುವ ನಿರ್ಧಾರ ಕೈಗೊಂಡಿವೆ.

ಬೆಂಗಳೂರಿನಲ್ಲೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಪೆಟ್ರೋಲ್ 14 ಪೈಸೆ ಇಳಿಕೆ ಕಂಡು ಲೀಟರ್ ಗೆ 71.06ಪೈಸೆಯಾಗಿದೆ. ಡೀಸೆಲ್ 13 ಪೈಸೆ ಇಳಿಕೆ ಕಂಡು ಲೀಟರ್ ಗೆ 64.77 ರೂಪಾಯಿಯಾಗಿದೆ. ಸೋಮವಾರದಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+