ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ತೈಲ ಬೆಲೆಯಲ್ಲಿ ಸ್ಥಿರತೆ: ಯಾವ ನಗರದಲ್ಲಿ ಎಷ್ಟು ದರ?

|
Google Oneindia Kannada News

ನವದೆಹಲಿ, ಫೆಬ್ರವರಿ 24: ಸತತ ಬೆಲೆ ಏರಿಕೆಯ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ತಲಾ 35 ಪೈಸೆ ಹೆಚ್ಚಳವಾಗಿತ್ತು. ಆದರೆ ಬುಧವಾರವೂ ಪೆಟ್ರೋಲ್ ದರ ಲೀಟರ್‌ಗೆ 90.93 ರೂ ಮತ್ತು ಡೀಸೆಲ್ ಲೀಟರ್‌ಗೆ 81.32 ರೂ. ದರದಲ್ಲಿಯೇ ಉಳಿದುಕೊಂಡಿದ್ದು, ಬದಲಾವಣೆಯಾಗಿಲ್ಲ.

ನದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾ, ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಈ ಸ್ಥಿರತೆ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 50 ಪೈಸೆಯಷ್ಟು ಹೆಚ್ಚಳವಾಗಿದೆ.

ತೈಲ ಬೆಲೆ ಏರಿಕೆಗೆ ಎರಡು ಕಾರಣ ನೀಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ತೈಲ ಬೆಲೆ ಏರಿಕೆಗೆ ಎರಡು ಕಾರಣ ನೀಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮಂಗಳವಾರದಷ್ಟೇ ಲೀಟರ್‌ಗೆ 97.34 ರೂ,ನಲ್ಲಿ ಉಳಿದುಕೊಂಡಿದೆ. ಡೀಸೆಲ್ ಬೆಲೆ 88.44 ರೂ.ದರದಲ್ಲಿ ಇದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ದಾಖಲೆಗಳು ತಿಳಿಸಿವೆ.

ಬೆಂಗಳೂರು, ಚೆನ್ನೈ ದರ

ಬೆಂಗಳೂರು, ಚೆನ್ನೈ ದರ

ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವು ಪ್ರತಿ ಲೀಟರ್‌ಗೆ ತಲಾ 93.98 ರೂ ಹಾಗೂ 86.21 ರೂ ಇದ್ದು, ಮಂಗಳವಾರದ ದರವನ್ನೇ ಕಾಯ್ದುಕೊಂಡಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 92.90 ಮತ್ತು ಡೀಸೆಲ್ ದರ 86.31 ರೂ ಇದೆ.

ನೂರು ರೂ. ದಾಟಿದ ಬೆಲೆ

ನೂರು ರೂ. ದಾಟಿದ ಬೆಲೆ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಕಳೆದ ವಾರ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತ್ತು. ಈಗಲೂ ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 101.59 ಇದ್ದರೆ, ಡೀಸೆಲ್ ದರ ಲೀಟರ್‌ಗೆ 93.61 ರೂ ಇದೆ. ಹಾಗೆಯೇ ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್ ದರ 101.34 ರೂ ಇದ್ದರೆ, ಡೀಸೆಲ್ 91.81 ರೂ.ಗೆ ಮಾರಾಟವಾಗುತ್ತಿದೆ.

ಆಂಧ್ರ ಪ್ರದೇಶ:ಒಂಟೆ ಏರಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಮಾಜಿ ಸಂಸದಆಂಧ್ರ ಪ್ರದೇಶ:ಒಂಟೆ ಏರಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಮಾಜಿ ಸಂಸದ

ಪ್ರಮುಖ ನಗರಗಳಲ್ಲಿ ಬೆಲೆ

ಪ್ರಮುಖ ನಗರಗಳಲ್ಲಿ ಬೆಲೆ

ಕೋಲ್ಕತಾ: 91.12 (ಪೆಟ್ರೋಲ್), 84.20 (ಡೀಸೆಲ್)

ಹೈದರಾಬಾದ್: 94.54 (ಪೆಟ್ರೋಲ್), 88.69 (ಡೀಸೆಲ್)

ಪಟ್ನಾ: 93.25 (ಪೆಟ್ರೋಲ್), 86.57 (ಡೀಸೆಲ್)

ಜೈಪುರ: 97.47 (ಪೆಟ್ರೋಲ್), 89.82 (ಡೀಸೆಲ್)

ಲಕ್ನೋ: 89.13 (ಪೆಟ್ರೋಲ್), 81.70 (ಡೀಸೆಲ್)

ತಿರುವನಂತಪುರಂ: 92.81 (ಪೆಟ್ರೋಲ್), 87.38 (ಡೀಸೆಲ್)

ಪ್ರಮುಖ ರಾಜ್ಯಗಳಲ್ಲಿ ಎಷ್ಟಿದೆ?

ಪ್ರಮುಖ ರಾಜ್ಯಗಳಲ್ಲಿ ಎಷ್ಟಿದೆ?

ಆಂಧ್ರಪ್ರದೇಶ- 87.24 (ಪೆಟ್ರೋಲ್), 80.21 (ಡೀಸೆಲ್)

ಅಸ್ಸಾಂ- 87.51 (ಪೆಟ್ರೋಲ್), 81.79 (ಡೀಸೆಲ್)

ಛತ್ತೀಸಗಡ- 89.39 (ಪೆಟ್ರೋಲ್), 88.08 (ಡೀಸೆಲ್)

ಕೇರಳ- 91.40 (ಪೆಟ್ರೋಲ್), 86.07 (ಡೀಸೆಲ್)

ಉತ್ತರ ಪ್ರದೇಶ- 89.05 (ಪೆಟ್ರೋಲ್), 81.59 (ಡೀಸೆಲ್)

ಪಶ್ಚಿಮ ಬಂಗಾಳ- 91.12 (ಪೆಟ್ರೋಲ್), 84.20 (ಡೀಸೆಲ್)

ತೆಲಂಗಾಣ- 94.54 (ಪೆಟ್ರೋಲ್), 88.69 (ಡೀಸೆಲ್)

ಪಂಜಾಬ್- 87.24 (ಪೆಟ್ರೋಲ್), 82.29 (ಡೀಸೆಲ್)

'ರಾಜಧರ್ಮ' ಪಾಲಿಸಿ: ಮೋದಿಗೆ ಸೋನಿಯಾ ಗಾಂಧಿ ಪತ್ರ?'ರಾಜಧರ್ಮ' ಪಾಲಿಸಿ: ಮೋದಿಗೆ ಸೋನಿಯಾ ಗಾಂಧಿ ಪತ್ರ?

English summary
Petrol and diesel prices remain unchanged on Wednesday in few cities. Check here the price details in states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X