ಮೇ 31ರಂದು ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ
ನವದೆಹಲಿ, ಮೇ 31: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಸೋಮವಾರ (ಮೇ 31)ದಂದು ಪರಿಷ್ಕರಣೆ ಮಾಡಿಲ್ಲ. ಮೇ 29ರಂದು ದರ ಏರಿಕೆ ಮಾಡಲಾಗಿತ್ತು, ಮೇ 30ರಂದು ದರ ಏರಿಕೆಯಾಗಿರಲಿಲ್ಲ ಈ ತಿಂಗಳಲ್ಲಿ ಮೇ 4ರಿಂದ ಇಲ್ಲಿತನಕ ಒಟ್ಟಾರೆ 16ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ.
ಮೇ 31ರಂದು ದೇಶದೆಲ್ಲೆಡೆ ಪೆಟ್ರೋಲ್ ಸರಾಸರಿ 29ಪೈಸೆ ಹಾಗೂ ಡೀಸೆಲ್ ಸರಾಸರಿ 26 ಪೈಸೆ ಪ್ರತಿ ಲೀಟರ್‌ನಂತೆ ಏರಿಕೆಯಾಗಿತ್ತು.
ದೆಹಲಿಯಲ್ಲಿ ದರ ರವಿವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 94.23ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 85.15ರು ಆಗಿದೆ. ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 100.47ರು ಪ್ರತಿ ಲೀಟರ್, ಡೀಸೆಲ್ 92.45ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆಯಿಂದ ಮಾಹಿತಿ ಸಿಕ್ಕಿದೆ.
ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಅಲ್ಲದೇ ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 104.78 ರು ನಷ್ಟಿದೆ, ಡೀಸೆಲ್ ಬೆಲೆ 97.65 ರು ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡು 69.14 ಯುಎಸ್ ಡಾಲರ್(1 USD=72.43ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್ ಹಾಗೂ ಏಪ್ರಿಲ್ ತಿಂಗಳಲ್ಲಿ 66 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ನಗರ-ಇಂಧನ ದರ ಪ್ರತಿ ಲೀಟರ್ ರುಗಳಲ್ಲಿ
ನವದೆಹಲಿ: ಪೆಟ್ರೋಲ್ 94.23ರು- ಡೀಸೆಲ್ 85.15ರು
ಕೋಲ್ಕತಾ: ಪೆಟ್ರೋಲ್ 94.25ರು- ಡೀಸೆಲ್ 88.00ರು
ಮುಂಬೈ: ಪೆಟ್ರೋಲ್ 100.47ರು- ಡೀಸೆಲ್ 92.45ರು
ಚೆನ್ನೈ: ಪೆಟ್ರೋಲ್ 95.76ರು- ಡೀಸೆಲ್ 89.90ರು
ಬೆಂಗಳೂರು: ಪೆಟ್ರೋಲ್ 97.37ರು- ಡೀಸೆಲ್ 90.27ರು
ಪಾಟ್ನ: ಪೆಟ್ರೋಲ್ 96.55ರು- ಡೀಸೆಲ್ 90.58ರು
ಹೈದರಾಬಾದ್: ಪೆಟ್ರೋಲ್ 97.93ರು- ಡೀಸೆಲ್ 92.83ರು
ನೋಯ್ಡಾ: ಪೆಟ್ರೋಲ್ 91.81ರು- ಡೀಸೆಲ್ 85.73ರು

ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಎಷ್ಟು
ಮೇ 2020ರಿಂದ ಇಂದಿನ ತನಕ ಪೆಟ್ರೋಲ್ ದರ 20 ರು ಹೆಚ್ಚಾಗಿದೆ. ಕಚ್ಚಾತೈಲ ಬೆಲೆ ಮೇ 2020ರಲ್ಲಿ 31 ಯುಎಸ್ ಡಾಲರ್ ಇದ್ದಿದ್ದು ಈಗ ಸರಾಸರಿ 66ಡಾಲರ್ ಆಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರ ಕೂಡಾ ಪೆಟ್ರೋಲ್ ಮೇಲೆ 13, ಡೀಸೆಲ್ ಮೇಲೆ 16 ರು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ಮೇ 1, 2020ರಂದು ದೆಹಲಿಯಲ್ಲಿ ಪೆಟ್ರೋಲ್ ದರ 69.59ರು ಇತ್ತು, ಡೀಸೆಲ್ ರೀಟೈಲ್ ದರ 62.29 ರು ಇತ್ತು. ಜೊತೆಗೆ ತೆರಿಗೆ ರಹಿತ ದರ 27.95 ಪ್ರತಿ ಲೀಟರ್, ಡೀಸೆಲ್ 24.85ಪ್ರತಿ ಲೀಟರ್ ನಷ್ಟಿತ್ತು.

ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಏಪ್ರಿಲ್ ತಿಂಗಳಲ್ಲಿ ಎಷ್ಟು ಪ್ರಮಾಣದಲ್ಲಿ ಏರಿಕೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ದರ ಪರಿಷ್ಕರಣೆ ಮಾಡದಿರುವುದರಿಂದ ಪ್ರಮುಖ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ನಷ್ಟ ಅನುಭವಿಸಿವೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 77 ಪೈಸೆ ಹಾಗೂ 74 ಪೈಸೆ ಪ್ರತಿ ಲೀಟರ್‌ಗೆ ಏರಿಕೆ ಕಂಡಿದೆ. ಮೇ ತಿಂಗಳಲ್ಲಿ ಚುನಾವಣೆ ಬಳಿಕ ಸತತವಾಗಿ ಬೆಲೆ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿನ ನಷ್ಟ ಸರಿದೂಗಿಸಲು ಪೆಟ್ರೋಲ್ ದರ 5ರು ಪ್ರತಿ ಲೀಟರ್ ಹಾಗೂ ಡೀಸೆಲ್ 3 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡುವುದು ಅನಿವಾರ್ಯ ಎಂದು ತೈಲ ಕಂಪನಿಗಳು ಹೇಳಿವೆ. ಅದರಂತೆ ಪೈಸೆ ಲೆಕ್ಕದಲ್ಲಿ ಹಂತ ಹಂತವಾಗಿ ದರ ಏರಿಕೆ ಕಂಡು ಬರುತ್ತಿದೆ.












Click it and Unblock the Notifications