9.5 ಲಕ್ಷ ರು ತನಕ ತೆರಿಗೆ ಉಳಿಸಬಹುದು : ಪಿಯೂಶ್ ಗೋಯೆಲ್

ನವದೆಹಲಿ, ಫೆಬ್ರವರಿ 13: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಶುಭ ಸುದ್ದಿ ಸಿಕ್ಕಿತ್ತು. ವಾರ್ಷಿಕ ಆದಾಯ 5 ಲಕ್ಷ ರೂ. ವರೆಗೆ ತೆರಿಗೆ ಕಟ್ಟಬೇಕಿಲ್ಲ ಜತೆಗೆ ತೆರಿಗೆ ರಿಬೇಟ್ 2500 ರೂ. ನಿಂದ 12,500 ರೂ.ಗೆ ಏರಿಸಲಾಗಿದೆ ಎಂಬ ವಿಷಯ ಸಂತಸ ತಂದಿತ್ತು. ಈಗ ಸಚಿವ ಪಿಯೂಶ್ ಗೊಯೆಲ್ ಅವರು ಈ ಸಂತಸವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಪ್ರಸ್ತಾಪನೆಯುಳ್ಳ ಹಣಕಾಸು ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.

ವಾರ್ಷಿಕ ರೂ. 9 ಲಕ್ಷದಿಂದ ರೂ. 9.5 ಲಕ್ಷದವರೆಗೆ ಆದಾಯ ಹೊಂದಿರುವ ಮಧ್ಯಮ ವರ್ಗದವರು ಉಳಿತಾಯ ಯೋಜನೆಗಳ ಲಾಭ ಪಡೆಯುವ ಮೂಲಕ ವೈಯಕ್ತಿಕ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಮಂಗಳವಾರ ಹೇಳಿದ್ದಾರೆ.

People with income up to Rs 9.5 L can escape tax liability: FM Piyush Goyal

ಹಣಕಾಸು ವಿಧೇಯಕ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದಕೇಂದ್ರ ವಿತ್ತ ಸಚಿವ ಪಿಯೂಶ್ ಗೊಯೆಲ್, ವಾರ್ಷಿಕ 9 ಲಕ್ಷ ರೂ.ನಿಂದ 9.5 ಲಕ್ಷ ರೂ. ವರೆಗೂ ಆದಾಯ ಹೊಂದಿರುವ ಮಧ್ಯಮ ವರ್ಗದವರು ಉಳಿತಾಯ ಯೋಜನೆಗಳ ಲಾಭ ಪಡೆಯುವ ಮೂಲಕ ವೈಯಕ್ತಿಕ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ ಎಂದರು.

ದೇಶದ ಆರ್ಥಿಕತೆಗೆ, ಜನಸಾಮಾನ್ಯರು ಮತ್ತು ಮಧ್ಯಮ ವರ್ಗದವರಿಗೆ ಹೊಸ ತೆರಿಗೆ ನೀತಿಯಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಹಣಕಾಸು ವಿಧೇಯಕ 2019ರಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 40 ಸಾವಿರ ರುನಿಂದ 50 ಸಾವಿರ ರುಗಳಿಗೆ ಏರಿಕೆಯಾಗಿದೆ. ಹೀಗಾಗಿ, ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲವಾಗಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+