ಇನ್ನುಮುಂದೆ ಆನ್‌ಲೈನ್ ಮಳಿಗೆಯಲ್ಲೂ ಪತಂಜಲಿ ಉತ್ಪನ್ನ ಲಭ್ಯ
ನವದೆಹಲಿ, ಜನವರಿ 16: ಪತಂಜಲಿ ಮಳಿಗೆಗಳು, ಇನ್ನಿತರ ಮಳಿಗೆಗಳಲ್ಲಷ್ಟೆ ದೊರಕುತ್ತಿದ್ದ ಪತಂಜಲಿ ಉತ್ಪನ್ನಗಳು ಇನ್ನು ಮುಂದೆ ಆನ್‌ಲೈನ್ ಮಳಿಗೆಗಳಲ್ಲೂ ಲಭ್ಯವಾಗುತ್ತವೆ.
ಆನ್‌ಲೈನ್ ಶಾಪಿಂಗ್ ದಿಗ್ಗಜರಾದ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ ತನ್ನ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮಾತ್ರವಲ್ಲದೆ ಪೇಟಿಎಂ ಮಾಲ್, ಶಾಪ್‌ಕ್ಲೂಸ್, ಗ್ರೋಪರ್ಸ್, ನೀಟ್‌ಮೆಡ್ಸ್, 1ಎಂಜಿ ಇ-ಮಳಿಗೆಗಳಲ್ಲೂ ಪತಂಜಲಿ ಉತ್ಪನ್ನಗಳು ಇನ್ನು ಮುಂದೆ ದೊರಕಲಿವೆ.
ಪತಂಜಲಿ ಉತ್ಪನ್ನಗಳನ್ನು ಪ್ರತಿ ಮನೆಗೆ ತಲುಪಬೇಕೆಂಬ ಉದ್ದೇಶದಿಂದ ಇ-ಮಳಿಗೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾಗಿ ಹೇಳಿರುವ ಪತಂಜಲಿ ಸಂಸ್ಥಾಪಕ ಬಾಬಾ ರಾಮ್‌ದೇವ್, 'ಹರಿದ್ವಾರ್‌ಸೆ ಹರ್ ದ್ವಾರ್ ತಕ್' (ಪ್ರತಿ ಮನೆ ಬಾಗಿಲಿಗೂ) ಎಂಬುದೇ ನಮ್ಮ ಉದ್ದೇಶ ಎಂದಿದ್ದಾರೆ.

'ನಾನು ಮತ್ತು ಪತಂಜಲಿ ಕಾರ್ಯನಿರ್ವಾಹಕ ಆಚಾರ್ಯ ಬಾಲಕೃಷ್ಣ ಇಬ್ಬರೂ ರೈತರ ಮಕ್ಕಳು ಹಾಗಾಗಿ ನಾವು ಪೃಕೃತಿ ಜನ್ಯ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ, ಆ ಮೂಲಕ ರೈತರಿಗೆ ಲಾಭ ಸೇರುವಂತೆ ಮಾಡುತ್ತಿದ್ದೇವೆ' ಎಂದರು.
ಪತಂಜಲಿ ಕಾರ್ಯನಿರ್ವಾಹಕ ಬಾಲಕೃಷ್ಣ ಮಾತನಾಡಿ 'ಒಂದೇ ದಿನದಲ್ಲಿ 10 ಲಕ್ಷ ಪತಂಜಲಿ ಉತ್ಪನ್ನಗಳಿಗೆ ಆರ್ಡರ್ ಬಂದರೂ ಸಹ ವಿತರಣೆ ಮಾಡುವಂತೆ ವ್ಯವಸ್ಥೆ ರೂಪಿಸಿಕೊಂಡಿದ್ದೇವೆ, ಇ-ಮಳಿಗೆಗಳ ಸಹಾಯದಿಂದ ನಾವು ಇನ್ನೂ ಹೆಚ್ಚು ಗ್ರಾಹಕರನ್ನು ತಲುಪಲಿದ್ದೇವೆ' ಎಂದು ಹೇಳಿದರು.












Click it and Unblock the Notifications