Patanjali: ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಮಾಣಪತ್ರ, ಹೊಸ ಇತಿಹಾಸ ಸೃಷ್ಟಿಸಿದ ಪತಂಜಲಿ ಸಂಸ್ಥೆ
ಭಾರತ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಭಾರತೀಯರು ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಖುಷಿಯ ವಾರ್ಷಿಕೋತ್ಸವ ಆಚರಿಸಿದ್ದಾರೆ. ಹಾಗೇ ಭಾರತೀಯರ ಮನ & ಮನಗಳಲ್ಲಿ ಇದೀಗ ಸ್ವದೇಶಿ ಜಾಗೃತಿ ಕ್ರಾಂತಿ ಮೂಡಿಸಿದ್ದು, ಭಾರತೀಯರ ನಂಬಿಕೆಯ ಪತಂಜಲಿ ಫುಡ್ಸ್ ಲಿಮಿಟೆಡ್ ಈಗ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ವರ್ಲ್ಡ್ ಕಸ್ಟಮ್ಸ್ ಆರ್ಗನೈಜೇಷನ್ ಮತ್ತು ಭಾರತದ ಸರ್ಕಾರದ ಹಣಕಾಸು ಸಚಿವಾಲಯ ಸೇರಿದಂತೆ, ಭಾರತೀಯ ಕಸ್ಟಮ್ಸ್ ಪತಂಜಲಿಗೆ ಇದೀಗ ಪತಂಜಲಿ ಸಂಸ್ಥೆಗೆ ಎಇಒ ಎಂದರೆ ಅಧಿಕೃತ ಆರ್ಥಿಕ ಸಂಚಾಲಕ ಟೈರ್-2 ಪ್ರಮಾಣಪತ್ರ ಪ್ರದಾನ ಮಾಡಿದೆ. ಈ ಮೂಲಕ ಪತಂಜಲಿ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

ಈ ಪ್ರಮಾಣಪತ್ರವು ಜಾಗತಿಕ ವ್ಯಾಪಾರದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸರಬರಾಜು ಸರಪಣಿಯ ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಪ್ರತಿಬಿಂಬಿಸುತ್ತದೆ.
ಭಾರತದ ಪ್ರಮುಖ ಕಂಪನಿಗಳಲ್ಲಿ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಈ ಮಾನ್ಯತೆ ಪಡೆದಿವೆ, ಮತ್ತು ಎಫ್ಎಂಸಿಜಿ ಕ್ಷೇತ್ರದಲ್ಲಿ ಅತಿ ಕೆಲವೇ ಕಂಪನಿಗಳು ಈ ಪ್ರತಿಷ್ಠಿತ ಪ್ರಮಾಣಪತ್ರ ಪಡೆಯಲು ಯಶಸ್ವಿ ಆಗಿವೆ. ಇದೀಗ ಪತಂಜಲಿ ಸಂಸ್ಥೆ ಕೂಡ ದೊಡ್ಡ ಸಾಧನೆ ಮಾಡಿದಂತೆ ಆಗಿದ್ದು, ಇತಿಹಾಸ ಸೃಷ್ಟಿ ಮಾಡಿದೆ.
ಈ ಪಟ್ಟಿಗೆ ಇದೀಗ ಪತಾಂಜಲಿ ಸಂಸ್ಥೆಯ ಹೆಸರು ಸುವರ್ಣಾಕ್ಷರದಲ್ಲಿ ಸೇರ್ಪಡೆ ಆದಂತೆ ಆಗಿದೆ.
ಈ AEO ಟೈರ್-2 ಪ್ರಮಾಣಪತ್ರದೊಂದಿಗೆ, ಪತಂಜಲಿ ಫುಡ್ಸ್ ಸಂಸ್ಥೆಗೆ ಸುಂಕ ಮುಂಗಡ ಪಾವತಿ, ಬ್ಯಾಂಕ್ ಗ್ಯಾರಂಟಿ ವಿನಾಯಿತಿ, ಡೈರೆಕ್ಟ್ ಪೋರ್ಟ್ ಡೆಲಿವರಿ (DPD), 24x7 ಕ್ಲಿಯರೆನ್ಸ್ ಸೌಲಭ್ಯ ಸೇರಿ ಇತ್ಯಾದಿ ಪ್ರಮುಖ ಅಂತರರಾಷ್ಟ್ರೀಯ ವ್ಯಾಪಾರದ 28ಕ್ಕೂ ಹೆಚ್ಚು ರೀತಿ ಪ್ರಯೋಜನ ದೊರೆಯಲಿದೆ ಎಂಬುದನ್ನು ಉಲ್ಲೇಖಿಸಬಹುದಾಗಿದೆ.
ಈ ಪ್ರಮಾಣಪತ್ರ ಏಕೆ ವಿಶಿಷ್ಠ?
ಇದು ಯಾವುದೇ ಕಂಪನಿಯ ಗುಣಮಟ್ಟ, ಪ್ರಾಮಾಣಿಕತೆ, ಪಾರದರ್ಶಕ ಕಾರ್ಯವ್ಯವಸ್ಥೆ ಮತ್ತು ರಾಷ್ಟ್ರಹಿತಕ್ಕೆ ನೀಡಿದ ಕೊಡುಗೆಯ ಸಾಕ್ಷಿಯಾಗಿದೆ.
ಪತಂಜಲಿ ತನ್ನ ಗುಣಮಟ್ಟ, ನೈಜತೆ, ಸಮರ್ಪಣೆ ಮತ್ತು ಸ್ವದೇಶಿ ಮನೋಭಾವದ ಆಧಾರದ ಮೇಲೆ ಈ ವಿಶೇಷ ಮಾನದಂಡವನ್ನು ಸಾಧಿಸಿದೆ ಎಂಬುದು ಗಮನಾರ್ಹ ಸಂಗತಿ.
ಇದು ಕೇವಲ ಪ್ರಮಾಣಪತ್ರವಲ್ಲ, ಭಾರತದ ಆರ್ಥಿಕ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವ ಗೌರವವಾಗಿದೆ ಎನ್ನುತ್ತಿದ್ದಾರೆ ತಜ್ಞರು.
ಪತಂಜಲಿ ಸಂಸ್ಥೆಯ ಈ ಸಾಧನೆ ಕುರಿತು ಮಾತನಾಡಿರುವ ಬಾಬಾ ರಾಮ್‌ದೇವ್ ಅವರು, ಇಂದು ಪತಂಜಲಿ ಕುಟುಂಬದ ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನ. ವಿಶ್ವಾಸಾರ್ಹತೆ, ಪ್ರಮಾಣಿಕತೆ, ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟ ಕ್ಷೇತ್ರಗಳಲ್ಲಿ ಪತಂಜಲಿ ಪ್ರತಿದಿನವೂ ಹೊಸ ವೇಗದಲ್ಲಿ ಮುಂದುವರೆದಿದೆ. ವ್ಯವಹಾರ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದ್ದು, ಭಾರತವನ್ನು ಆರ್ಥಿಕವಾಗಿ ಇಡೀ ಜಗತ್ತನ್ನೇ ಮುನ್ನಡೆಸುವ ದೇಶವೆಂದು ಇದನ್ನು ಕಂಡುಕೊಳ್ಳಬೇಕು. ಈ ಪ್ರಮಾಣಪತ್ರ ನಮ್ಮ ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಗೌರವವು ನಮ್ಮ ಪಠಣ, ಗುಣಮಟ್ಟ ಮತ್ತು ಪ್ರಾಮಾಣಿಕತೆಗೆ ನೀಡಲಾದ ಒಪ್ಪಿಗೆಯಾಗಿದೆ. ನಾವು 'ಸ್ವದೇಶಿ ಸೆ ಸ್ವಾಭಿಮಾನ' ಎಂಬ ದಾರಿಯಲ್ಲಿ ವೇಗವಾಗಿ ಮುನ್ನಡೆಯುವುದನ್ನು ಮತ್ತು 'ಮೇಕ್ ಇನ್ ಇಂಡಿಯಾ' ಅನ್ನು ಜಾಗತಿಕ ಶಿಖರಕ್ಕೆ ತಲುಪಿಸುವ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಆಚಾರ್ಯ ಬಾಲಕೃಷ್ಣ ಅವರು ಮಾತನಾಡಿ, ಈ ಸಾಧನೆಯು ಪೂರ್ತಿ ಪತಂಜಲಿ ಕುಟುಂಬ, ನೌಕರರು ಮತ್ತು ಗ್ರಾಹಕರ ಸಮೂಹ ಶ್ರಮದ ಫಲವಾಗಿದೆ. AEO ಟಿಯರ್-2 ಪ್ರಮಾಣಪತ್ರವು ನಮ್ಮ ಕೆಲಸದ ಪಾರದರ್ಶಕತೆ, ಗುಣಮಟ್ಟ ಮತ್ತು ಅಂತರಾಷ್ಟ್ರೀಯ ಮಾನದಂಡ ಸಾಕ್ಷಿಯಾಗಿದೆ ಎಂದಿದ್ದಾರೆ. ಇದು ರಫ್ತು ಚಟುವಟಿಕೆಗಳನ್ನು ಹೆಚ್ಚಿಸಿ ದೇಶದ ಆರ್ಥಿಕತೆ ಬಲಪಡಿಸುತ್ತದೆ. ಈ ಗೌರವ ದೇಶದ ಗಡಿಯೊಳಗೆ ಮಾತ್ರವಲ್ಲ ಜಗತ್ತಿನ ಪ್ರತಿ ಮೂಲೆಯಲ್ಲೂ ನಮ್ಮನ್ನು ಹೆಮ್ಮೆಯಿಂದ ತುಂಬುತ್ತದೆ. ಇದು ಸಂಸ್ಕೃತಿ, ಆಯುರ್ವೇದ ಮತ್ತು ಸ್ವದೇಶಿ ಉತ್ಪನ್ನಗಳ ಉತ್ತೇಜನಕ್ಕೆ ಸಹಾಯಕ. ನಾವು ಪತಂಜಲಿಯನ್ನು ಜಗತ್ತಿನ ಪ್ರಮುಖ FMCG ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಸ್ಥಾಪಿಸಿ, ಭಾರತದ ರಫ್ತು ಕ್ಷೇತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರತಿಜ್ಞೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications