ಅಬಕಾರಿ ಸುಂಕ ಇಳಿಕೆ, ತೈಲ ಕಂಪನಿಗಳ ಷೇರುಗಳು ಕುಸಿತ
ಬೆಂಗಳೂರು, ಅಕ್ಟೋಬರ್ 04: 'ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ' ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸುತ್ತಿದ್ದಂತೆ ಷೇರು ಪೇಟೆಯಲ್ಲಿ ಸಂಚಲನ ಮೂಡಿತು. ತೈಲ ಕಂಪನಿಗಳ ಷೇರುಗಳು ಕುಸಿಯಲು ಆರಂಭಿಸಿತು.
ಅಬಕಾರಿ ಸುಂಕ ಒಂದೂವರೆ ರುಪಾಯಿ ಕಡಿತ ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 1 ರುಪಾಯಿ ದರ ಇಳಿಕೆ ಮಾಡುವುದರಿಂದ ಒಟ್ಟಾರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 2.50 ರುಪಾಯಿ ಕಡಿತಗೊಳ್ಳಲಿದೆ ಎಂದು ಜೇಟ್ಲಿ ಹೇಳಿದರು.
ಸೆಪ್ಟೆಂಬರ್ ತಿಂಗಳ ಮೊದಲಿನಿಂದ ನಾಲ್ಕು ರುಪಾಯಿ ಪ್ರತಿ ಲೀಟರ್ ನಂತೆ ಬೆಲೆ ಏರಿಕೆಯಾಗಿದೆ. ಸದ್ಯ ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರು ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗುತ್ತಿತ್ತು.

ಇಂದು ಇಳಿಕೆಯಾದ ತೈಲ ಕಂಪನಿಗಳ ಷೇರುಗಳು(ಬಿಎಸ್ ಇ)
ಒಎನ್ ಜಿಸಿ: 164.00 ರು ನಂತೆ -17.60ರು ಕಳೆದುಕೊಂಡು (-9.69%)
ಆಯಿಲ್ ಇಂಡಿಯಾ ಲಿಮಿಟೆಡ್ 203.90 -17.40 (-7.86%)
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
- 310.95 -66.50 (-17.62%)
ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ - 197.50 -53.85 (-21.42%)












Click it and Unblock the Notifications