• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಶೀಘ್ರವೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ?

|
Google Oneindia Kannada News

ಒಂದೆಡೆ ದಿನದಿಂದ ದಿನಕ್ಕೆ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಜಾಗತಿಕವಾಗಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಜೊತೆಗೆ ಕೋವಿಡ್ 19 ಹೊಸ ರೂಪಾಂತರದ ಹಾವಳಿ ಹೆಚ್ಚಳ ಎಲ್ಲಾ ಅಂಶಗಳನ್ನು ಪರಿಗಣಿಸಿ ಶೀಘ್ರವೇ ತೈಲ ಬೆಲೆ ಹೆಚ್ಚಳ ಸಾಧ್ಯತೆಯಿದೆ. ಆದರೆ, ಕೇಂದ್ರ ಬಜೆಟ್ 2022 ಹಾಗೂ ಐದು ರಾಜ್ಯಗಳ ಚುನಾವಣೆ ಮುಂದಿಟ್ಟುಕೊಂಡು ತೈಲ ಬೆಲೆ ಏರಿಕೆ ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕುವುದಿಲ್ಲ, ಬಜೆಟ್ ಮುಗಿದ ಬಳಿಕ ಫೆಬ್ರವರಿ ಮೊದಲ ವಾರ ಇಂಧನ ದರ ಏರಿಕೆಗೆ ಮುಂದಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಇಂಧನ ಕ್ಷೇತ್ರವು ಹೆಚ್ಚಿನ ಅನುದಾನ, ತೆರಿಗೆ ಹೆಚ್ಚಳದ ನಿರೀಕ್ಷೆ ಹೊಂದಿದೆ. ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರುವುದು ಸೂಕ್ತವೇ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ, ಆದರೆ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುವ ಆತುರದಲ್ಲಿಲ್ಲ. ಕಚ್ಚಾತೈಲ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ಇಂಧನ ದರದಲ್ಲಿ ಸ್ಥಿರತೆ ಹೊಂದಲಾಗಿದೆ.

ಓಮಿಕ್ರಾನ್ ಸೋಂಕು ಏರಿಕೆ; ಪೆಟ್ರೋಲ್, ಡೀಸೆಲ್ ಮಾರಾಟ ಇಳಿಕೆಓಮಿಕ್ರಾನ್ ಸೋಂಕು ಏರಿಕೆ; ಪೆಟ್ರೋಲ್, ಡೀಸೆಲ್ ಮಾರಾಟ ಇಳಿಕೆ

ಕಳೆದ 75 ದಿನಗಳಿಂದ ಭಾರತದಲ್ಲಿ ಇಂಧನ ದರ ಬದಲಾಗಿಲ್ಲ, ಆದರೆ, ಎಟಿಎಫ್, ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಉಂಟಾಗಿದೆ. ಆದರೆ, ಈಗ ಒಪೆಕ್ ರಾಷ್ಟ್ರಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆಯಿದೆ. ಜೊತೆಗೆ ಕಚ್ಚಾತೈಲ ಬೆಲೆ 2014ರ ಅವಧಿಯ ಅತ್ಯಧಿಕ ಮಟ್ಟಕ್ಕೇರಿದೆ.

ರಾಯಿಟರ್ಸ್‌ ವರದಿಯ ಪ್ರಕಾರ, ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ $87 ಅನ್ನು ಮುಟ್ಟಿದೆ, ಕಳೆದ ವಾರದಲ್ಲಿ ಸರಾಸರಿ $86.92 ನಂತೆ ಇತ್ತು. ಈ ಮುಂಚೆ ಅಕ್ಟೋಬರ್ 2014 ರಲ್ಲಿ ಈ ರೀತಿ ಟ್ರೆಂಡ್ ಕಂಡು ಬಂದಿತ್ತು.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೇಲೆ ಯಮೆನ್‌ನ ಹೌತಿ ಬಂಡುಕೋರರ ಗುಂಪಿನ ಡ್ರೋನ್ ದಾಳಿಯಿಂದಾಗಿ ಪೂರೈಕೆ-ಬದಿಯ ವ್ಯತ್ಯಯದಿಂದಾಗಿ ಬೆಲೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ. ಮಧ್ಯಪ್ರಾಚ್ಯದ ಎರಡು ಶಕ್ತಿ ಕೇಂದ್ರಗಳಾದ ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ಹೆಚ್ಚು ತಿಕ್ಕಾಟವಾದಂತೆ ಭಾರತ ಉಪಖಂಡದಲ್ಲಿ ತೈಲಬೆಲೆ ಏರಿಕೆ ಅನಿವಾರ್ಯವಾಗಲಿದೆ.

ಬಂಡುಕೋರರು ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿ, ಮೂರು ಜನರನ್ನು ಕೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮೃತ ಮೂವರಲ್ಲಿ ಇಬ್ಬರು ಭಾರತೀಯರು. ಹೌತಿ ಬಂಡುಕೋರರು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಯುಎಇ ಈ 'ಭಯೋತ್ಪಾದಕ ದಾಳಿ'ಗಳನ್ನು ಎದುರಿಸಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Oil Likely To Get Costlier As Crude oil Prices Rise To Highest Levels Since 2014

ಯುಎಇಯ ಮುಸ್ಸಾಫಾ ಇಂಧನ ಡಿಪೋದಲ್ಲಿ ಈ ಘಟನೆ ನಡೆದಿದೆ. ಇಂಧನ ಸಂಸ್ಥೆ, ADNOC, ತಮ್ಮ ಗ್ರಾಹಕರಿಗೆ ನಿರಂತರ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ.

ಇನ್ನೊಂದೆಡೆ ಉತ್ತರ ಗೋಳಾರ್ಧದಲ್ಲಿ ಶೀತ ಚಳಿಗಾಲದ ಕಾರಣ ತೈಲದ ಬೇಡಿಕೆಯೂ ಹೆಚ್ಚಾಗಿದೆ. ಪೂರೈಕೆ-ಬೇಡಿಕೆ ಅಸಮತೋಲನವು ತೈಲ ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಭಾರತದಲ್ಲಿ ಕಳೆದ ತಿಂಗಳ ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಲಾಗಿತ್ತು. ಪೆಟ್ರೋಲ್ ಮೇಲೆ 5 ರು ಹಾಗೂ ಡೀಸೆಲ್ ಮೇಲೆ 10 ರು ನಷ್ಟು ತೆರಿಗೆ ತಗ್ಗಿಸಲಾಗಿತ್ತು. ಇದಾದ ಬಳಿಕ ವಿವಿಧ ರಾಜ್ಯಗಳಲ್ಲಿನ ಸೆಸ್, ಸುಂಕ ತಗ್ಗಿಸಲಾಗಿತ್ತು. ಇದರಿಂದ ಇಂಧನ ದರ ಭಾರಿ ಇಳಿಕೆ ಕಂಡಿತ್ತು. ಇದಾದ ಬಳಿಕ ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

   ಅಬ್ಬಾ!ಏನ್ ಜಂಪ್ ಗುರೂ ಇದು..ಹೈ ಜಂಪ್ ನಲ್ಲಿ ಗೋಲ್ಡ್ ಮೆಡಲ್ ಫಿಕ್ಸ್ | Oneindia Kannada

   ಕಳೆದ ತಿಂಗಳು ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್​ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಜನವರಿ 19ರ ಈ ಸಮಯಕ್ಕೆ ಶೇ 1.53ರಷ್ಟು ಏರಿಕೆಯಾಗಿ 88.94 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ(1 USD=74.63 ರುಪಾಯಿ) ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಭಾರತದ ಪ್ರಮುಖ ನಗರಗಳಲ್ಲಿನ ಇಂದಿನ ಇಂಧನ ದರ ತಿಳಿಯಲು ಕ್ಲಿಕ್ ಮಾಡಿ (https://kannada.goodreturns.in/petrol-price.html)

   English summary
   Oil prices are most likely to rise as Crude oil Prices Rise, geopolitical tensions, causing supply-side disruptions. According to a report by Reuters
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion