ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್‌ನ್ಯೂಸ್‌: 150 ಜಿಬಿ ಉಚಿತ ಡೇಟಾ ಪಡೆಯುವುದು ಹೇಗೆ?

|
Google Oneindia Kannada News

ನವದೆಹಲಿ, ಫೆಬ್ರವರಿ 09: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ (ವಿಐ), ಭಾರ್ತಿ ಏರ್‌ಟೆಲ್‌ ತಮ್ಮ ಗ್ರಾಹಕರನ್ನು ಸೆಳೆಯಲು ವಿವಿಧ ಕೊಡುಗೆಗಳನ್ನು ನೀಡುತ್ತಿವೆ. ದೇಶದಲ್ಲಿ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿರುವುದರಿಂದ ಪ್ರಮುಖ ಟೆಲಿಕಾಂ ಕಂಪನಿಯೊಂದು 150 ಜಿಬಿ ಉಚಿತ ಇಂಟರ್ನೆಟ್ ಡೇಟಾವನ್ನು ನೀಡುತ್ತಿದೆ.

ಈ ಕಂಪನಿಯು ನೇರವಾಗಿ ಗ್ರಾಹಕರಿಗೆ ಈ ಉಚಿತ ಡೇಟಾ ಒದಗಿಸದೆ, ಬದಲಿಗೆ ಯೋಜನೆಯೊಂದಿಗೆ 150 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ, ಇದಕ್ಕಾಗಿ ನಿಮಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ.

 ಪೊಕೊ ಎಂ 3 ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು? ಪೊಕೊ ಎಂ 3 ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು?

150 ಜಿಬಿ ಹೆಚ್ಚುವರಿ ಡೇಟಾ

150 ಜಿಬಿ ಹೆಚ್ಚುವರಿ ಡೇಟಾ

ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ ಹೊಸ ಗ್ರಾಹಕರಿಗೆ 150 ಜಿಬಿ ಹೆಚ್ಚುವರಿ ಡೇಟಾವನ್ನು ವಿಐ ನೀಡುತ್ತಿದೆ. ವಿಐ ತನ್ನ 399 ರೂಪಾಯಿಗಳ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ 150 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. Myvi.in ವೆಬ್‌ಸೈಟ್ ಮೂಲಕ ಯೋಜನೆಯನ್ನು ಖರೀದಿಸುವ ಗ್ರಾಹಕರಿಗೆ ಈ ಪ್ರಯೋಜನವು ಲಭ್ಯವಿರುತ್ತದೆ.

ಬಳಕೆಯಾಗದ ಡೇಟಾ ಮುಂದಿನ ತಿಂಗಳು ಬಳಸಬಹುದು!

ಬಳಕೆಯಾಗದ ಡೇಟಾ ಮುಂದಿನ ತಿಂಗಳು ಬಳಸಬಹುದು!

Vi ಯ 399 ರೂ ಪೋಸ್ಟ್‌ಪೇಯ್ಡ್ ಯೋಜನೆಯು 200GB ರೋಲ್‌ಓವರ್ ಡೇಟಾದೊಂದಿಗೆ ಅನಿಯಮಿತ ಎಸ್‌ಟಿಡಿ ಮತ್ತು ಸ್ಥಳೀಯ ಕರೆ ಸೌಲಭ್ಯಗಳು ಮತ್ತು 40GB ಡೇಟಾವನ್ನು ನೀಡುತ್ತದೆ. ಡೇಟಾ ರೋಲ್‌ಓವರ್ ಎಂದರೆ ನೀವು ಮುಂದಿನ ತಿಂಗಳು ಬಳಕೆಯಾಗದ ಡೇಟಾವನ್ನು ಬಳಸಬಹುದು. ಉದಾಹರಣೆಗೆ, ನೀವು 4 ಜಿಬಿ ಡೇಟಾವನ್ನು ಹೊಂದಿದ್ದೀರಿ ಮತ್ತು ನೀವು ತಿಂಗಳಲ್ಲಿ ಕೇವಲ 3 ಜಿಬಿ ಮಾತ್ರ ಬಳಸಿದ್ದೀರಿ, ನಂತರ ಮುಂದಿನ ತಿಂಗಳು ನೀವು ಒಟ್ಟು 5 ಜಿಬಿ ಡೇಟಾವನ್ನು ಪಡೆಯುತ್ತೀರಿ.

ರಿಯಲ್‌ಮಿ X7 5G ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ಇಲ್ಲಿದೆರಿಯಲ್‌ಮಿ X7 5G ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ಇಲ್ಲಿದೆ

ಆರು ತಿಂಗಳು ಡೇಟಾ ಸಿಗಲಿದೆ

ಆರು ತಿಂಗಳು ಡೇಟಾ ಸಿಗಲಿದೆ

ನೀವು 6 ತಿಂಗಳು 150 ಜಿಬಿ ಉಚಿತ ಡೇಟಾವನ್ನು ಬಳಸಬಹುದು. ಈ ಯೋಜನೆಯಲ್ಲಿ ನೀವು 200 ಜಿಬಿ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಪಡೆಯುತ್ತಿದ್ದರೂ, ಅದರಲ್ಲಿ ಉಚಿತ ಡೇಟಾವನ್ನು ಸೇರಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ನೀವು 6 ತಿಂಗಳೊಳಗೆ ಈ ಉಚಿತ ಡೇಟಾವನ್ನು ಬಳಸಬೇಕಾಗುತ್ತದೆ. ಈ ಯೋಜನೆಯಲ್ಲಿ ನೀವು ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಪ್ರವೇಶವನ್ನು ಪಡೆಯುವುದಿಲ್ಲ. ವಿಐ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ, ಒಟಿಟಿ ಪ್ರಯೋಜನಗಳು 499 ರೂಗಳಿಂದ ಪ್ರಾರಂಭವಾಗುತ್ತವೆ.

Vi ಹೆಚ್ಚುವರಿ ಡೇಟಾ ಯೋಜನೆ

Vi ಹೆಚ್ಚುವರಿ ಡೇಟಾ ಯೋಜನೆ

Vi ತನ್ನ ಯಾವುದೇ ಯೋಜನೆಗಳೊಂದಿಗೆ ಹೆಚ್ಚುವರಿ ಉಚಿತ ಡೇಟಾವನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ತನ್ನ ಆಯ್ದ ಗ್ರಾಹಕರಿಗೆ 50 ಜಿಬಿ ಹೆಚ್ಚುವರಿ ಡೇಟಾವನ್ನು 2595 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ನೀಡುತ್ತಿತ್ತು. 2595 ರೂ.ಗಳ ಯೋಜನೆಯ ವ್ಯಾಲಿಡಿಟಿ ಒಂದು ವರ್ಷವಾಗಿದ್ದು, ಇದರಲ್ಲಿ ನೀವು ಪ್ರತಿದಿನ 100 ಎಸ್‌ಎಂಎಸ್ ಮತ್ತು ಅನಿಯಮಿತ ಕರೆಗಳೊಂದಿಗೆ 2 ಎಸ್‌ಎಂಎಸ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯು ಒಂದು ವರ್ಷದ ಜಿ 5 ಪ್ರೀಮಿಯಂ ಮತ್ತು ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜನಗಳೊಂದಿಗೆ ವಿ ಮೂವೀಸ್ ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ.

English summary
The Vi postpaid plan offers 40GB data with unlimited STD and local calls for Rs 399 with 200GB rollover data. Now, the plan will also give 150GB data within the first six months .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X