ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ವಹಿವಾಟು ಅಮಾನತು

|
Google Oneindia Kannada News

ನವದೆಹಲಿ, ನವೆಂಬರ್ 26: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಲಕ್ಷ್ಮೀ ವಿಲಾಸ್ ಬ್ಯಾಂಕ್‌ ಅನ್ನು ಡಿಬಿಎಸ್‌ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಬುಧವಾರ(ನವೆಂಬರ್ 25) ಅನುಮೋದನೆ ನೀಡಿದ ಬೆನ್ನಲ್ಲೇ ಬ್ಯಾಂಕ್‌ ಮೇಲಿನ ಷೇರು ಹೂಡಿಕೆದಾರರಿಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಗುರುವಾರದಿಂದ ಜಾರಿಗೆ ಬರುವಂತೆ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್‌ವಿಬಿ) ಷೇರುಗಳ ವಹಿವಾಟನ್ನು ಸ್ಥಗಿತಗೊಳಿಸುವುದಾಗಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಹೇಳಿದೆ. ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಬ್ಯಾಂಕ್ ವಿಲೀನಗೊಳ್ಳಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

 ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ್ನ, ಡಿಬಿಎಸ್‌ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ್ನ, ಡಿಬಿಎಸ್‌ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ

ಬ್ಯಾಂಕಿನ ನಿಷೇಧದ ಅವಧಿ ಗುರುವಾರ ಕೊನೆಗೊಳ್ಳಲಿದ್ದು, ನವೆಂಬರ್ 27 ರಿಂದ, 94 ವರ್ಷದ ಹಳೆಯ ಬ್ಯಾಂಕ್‌ ಎಲ್‌ವಿಬಿ ಅಧಿಕೃತವಾಗಿ ಅಸ್ತಿತ್ವದಲ್ಲಿರುವುದಿಲ್ಲ ಮತ್ತು ಸಿಂಗಾಪುರದ ಡಿಬಿಎಸ್ ಬ್ಯಾಂಕಿನ ಅಂಗಸಂಸ್ಥೆಯಾದ ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನೊಂದಿಗೆ ವಿಲೀನಗೊಳ್ಳುವುದು.

NSE, BSE suspend trading of Lakshmi Vilas Bank shares after Union govt approves merger with DBS Bank

ಎನ್‌ಎಸ್‌ಇ ಜೊತೆಗೆ ಮುಂಬೈ ಷೇರುಪೇಟೆ ಬಿಎಸ್‌ಇ ಕೂಡ ಬ್ಯಾಂಕಿನ ಷೇರುಗಳ ವಹಿವಾಟನ್ನು ಸ್ಥಗಿತಗೊಳಿಸಿತು. "ಎಕ್ಸ್‌ಚೇಂಚ್ ಟ್ರೇಡಿಂಗ್ ಸದಸ್ಯರಿಗೆ ಈ ಮೂಲಕ ತಿಳಿಸುವುದೇನೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಮಾಲೋಚಿಸಿದ ನಂತರ ಭಾರತ ಸರ್ಕಾರವು ಸೂಚಿಸಿದಂತೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್ (ಟ್ರಾನ್ಸ್‌ಫರ್ ಬ್ಯಾಂಕ್) ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ಗೆ ಸೇರಿಸಿದೆ "ಎಂದು ವಿನಿಮಯವು ಸುತ್ತೋಲೆಯಲ್ಲಿ ತಿಳಿಸಿದೆ.

" ಈ ಮೇಲಿನ ಮಾಹಿತಿಯ ದೃಷ್ಟಿಯಿಂದ, ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ನ ಈಕ್ವಿಟಿ ಷೇರುಗಳು w.e.f. 2020 ರ ನವೆಂಬರ್ 26 ರ ಗುರುವಾರದಿಂದ ಟ್ರೇಡಿಂಗ್‌ಗೆ ಲಭ್ಯವಿರುವುದಿಲ್ಲ (ಡಿಆರ್ -167/2020 - 2021). ಎಕ್ಸ್‌ಚೇಂಜ್‌ನ ವ್ಯಾಪಾರ ಸದಸ್ಯರು ಮತ್ತು ಮಾರುಕಟ್ಟೆಯಲ್ಲಿ ಭಾಗವಹಿಸುವವರು ಇದನ್ನು ಗಮನಿಸಲು ವಿನಂತಿಸಲಾಗಿದೆ, "ಎಂದು ಅದು ಹೇಳಿದೆ.

ಆರ್‌ಬಿಐ ಟ್ವೀಟ್‌ನಲ್ಲಿ ತಿಳಿಸಿರುವಂತೆ ನವೆಂಬರ್ 27ರಿಂದ ಎಲ್ಲಾ ಲಕ್ಷ್ಮಿ ವಿಲಾಸ್ ಬ್ಯಾಂಕ್ ಬ್ರ್ಯಾಂಚ್‌ಗಳು, ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ ಆಗಿ ಕಾರ್ಯ ನಿರ್ವಹಿಸಲಿದೆ.

English summary
The National Stock Exchange (NSE) has said that it will suspend trading on the shares of the Lakshmi Vilas Bank (LVB) with effect from Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X