21,153 ಕೋಟಿ ರು ಬಾಕಿ ಉಳಿಸಿಕೊಂಡ ನೋಕಿಯಾ

Nokia's I-T dues: Rs 21,153 cr
ನವದೆಹಲಿ, ಡಿ.10: ಪ್ರಮುಖ ಮೊಬೈಲ್ ಫೋನ್ ಉತ್ಪಾದಕ ಸಂಸ್ಥೆ ನೋಕಿಯಾ ಸುಮಾರು ಏಳು ವರ್ಷಗಳಲ್ಲಿ ಒಟ್ಟು 21,153 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಆದಾಯ ತೆರಿಗೆ ಇಲಾಖೆ ದೆಹಲಿ ಹೈಕೋರ್ಟಿಗೆ ಸೋಮವಾರ ತಿಳಿಸಿದೆ.

ನೋಕಿಯಾ ಕಂಪನಿ 2006-2013ರ ಅವಧಿಯಲ್ಲಿ ಹಾಲಿ ತೆರಿಗೆ ಮತ್ತು ದಂಡ ಸೇರಿ ಒಟ್ಟು 21,153 ಕೋಟಿ ರೂ. ಮೊತ್ತದ ತೆರಿಗೆ ಉತ್ತರದಾಯಿತ್ವವನ್ನು ಹೊಂದಿದೆ ಎಂದು ಇಲಾಖೆಯು ನ್ಯಾಯಾಲಯಕ್ಕೆ ತಿಳಿಸಿದೆ.

ಕಂಪನಿಯು ರಾಯಲ್ಟಿ ಪಾವತಿಗೆ ಸಂಬಂಧಿಸಿದಂತೆ ಟಿಡಿಎಸ್ ಪಾವತಿಸಿಲ್ಲ. ವಿಶೇಷ ವಿತ್ತ ವಲಯ(SEZ)ದಲ್ಲಿರುವುದರಿಂದ ತೆರಿಗೆ ಕಾನೂನಿನ ಅಡಿಗಳಲ್ಲಿ ಯಾವುದೇ ಕಡಿತಕ್ಕೆ ಸಾಧ್ಯತೆ ಇಲ್ಲ ಎಂದು ಇಲಾಖೆ ಹೇಳಿದೆ.

ಒಂದು ವೇಳೆ ಟಿಡಿಎಸ್ ಅನ್ನು ಕಂಪನಿ ಪಾವತಿಸಿದರೆ, ದಂಡ ಸೇರಿ ಒಟ್ಟು ಉತ್ತರದಾಯಿತ್ವ 14,200 ಕೋಟಿ ರೂ.ಗಳಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆ ಜತೆ 7.2 ಯುಎಸ್ ಡಾಲರ್ ಡೀಲ್ ಮಾಡಿಕೊಂಡಿರುವ ನೋಕಿಯಾ ಸಂಸ್ಥೆ ಭಾರತದಲ್ಲಿರುವ ತನ್ನ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಸಲ್ಲಿಸಿದ್ದ ಅರ್ಜಿಗೆ ಪೂರಕವಾಗಿ ಆದಾಯ ತೆರಿಗೆ ಇಲಾಖೆಯವರು ಈ ಮಾಹಿತಿಯನ್ನು ಕೋರ್ಟಿಗೆ ನೀಡಿದ್ದಾರೆ.

'ನಮಗೆ ಈವರೆಗೂ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. ಹಾಗಾಗಿ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಭಾರತದಲ್ಲಿನ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳುವುದರಲ್ಲಿ ಸಂಸ್ಥೆ ಮಗ್ನವಾಗಿದೆ' ಎಂದು ನೋಕಿಯಾ ಸಂವಹನ ವಿಭಾಗದ ನಿರ್ದೇಶಕಿ ಪೂನಮ್ ಕೌಲ್ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಚೆನ್ನೈನಲ್ಲಿರುವ ನೋಕಿಯಾ ಇಂಡಿಯಾದ ಮೊಬೈಲ್ ಉತ್ಪಾದನಾ ಘಟಕದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ಆದಾಯ ತೆರಿಗೆ ಇಲಾಖೆ ಹಾಗೂ ಸಂಸ್ಥೆ ನಡುವಿನ ಕಾನೂನು ಸಮರ ಜಾರಿಯಲ್ಲಿದ್ದರೂ ಕೆಲಸ ಬಿಡಲು ಯಾರೂ ಸಿದ್ದರಿಲ್ಲ ಎಂದು ತಿಳಿದು ಬಂದಿದೆ.

ಉದ್ಯೋಗಿಗಳ ಹಿತಾಸಕ್ತಿ ಕಾಯಲು ನೋಕಿಯಾ ಹಾಗೂ ಮೈಕ್ರೋಸಾಫ್ಟ್ ನಡುವಿನ 7.2 ಬಿಲಿಯನ್ ಯುಎಸ್ ಡಾಲರ್ ಒಪ್ಪಂದ ಬಗ್ಗೆ ಕೋರ್ಟ್ ಗಮನ ಹರಿಸಬೇಕು ಎಂದು ಉದ್ಯೋಗಿಗಳು ಕೇಳಿ ಕೊಂಡಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+