ನೋಕಿಯಾ 3,5,6 ಬಿಡುಗಡೆಗೆ ಸಜ್ಜು, ಬೆಲೆ ಎಷ್ಟು?
ಜೂನ್ 13ರಂದು ನೋಕಿಯಾ ಸ್ಮಾರ್ಟ್ ಫೋನ್ ಗಳು ಅಧಿಕೃತವಾಗಿ ಎಂಟ್ರಿ ಕೊಡಲಿವೆ ಎಂದು ಎಚ್ಎಂಡಿ ಪ್ರಕಟಿಸಿದೆ.
ಬೆಂಗಳೂರು, ಜೂನ್ 12: ಭಾರತೀಯರ ಬಹುನೆಚ್ಚಿನ ಬ್ರ್ಯಾಂಡ್ ನೋಕಿಯಾ ಮತ್ತೊಮ್ಮೆ ಮೊಬೈಲ್ ಫೋನ್ ಮಾರುಕಟ್ಟೆಗೆ ಭರ್ಜರಿಯಾಗಿ ಪ್ರವೇಶಿಸುತ್ತಿದೆ. ಜೂನ್ 13ರಿಂದ ನೋಕಿಯಾ ಬ್ರ್ಯಾಂಡ್ ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಜೂನ್ 13ರಂದು ನೋಕಿಯಾ 6, 5 ಮತ್ತು 3 ನಾಳೆ ಭಾರತದಲ್ಲಿ ಬಿಡುಗಡೆಯಾಗಲಿವೆ. ನೋಕಿಯಾ 3310 ಈಗಾಗಲೇ ಬಿಡುಗಡೆಗೊಂಡು ತಕ್ಕಮಟ್ಟಿನ ಸದ್ದು ಮಾಡಿದೆ.

ಆದರೆ, ಸ್ಮಾರ್ಟ್ ಫೋನ್ ಗಳ ಪೈಪೋಟಿಗೆ ನೋಕಿಯಾ ನೇರವಾಗಿ ಇಳಿಯಲಿದ್ದು, ಹೊಸ ಹ್ಯಾಂಡ್ ಸೆಟ್ ಗಳ ಬೆಲೆಗಳ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.
ನೋಕಿಯಾ ಫೋನ್ ಗಳ ಬೆಲೆ ಹೀಗಿವೆ:
* ನೋಕಿಯಾ-3 ಫೋನ್ ನ ಬೆಲೆ ಅಂದಾಜು 9,990 ರೂ.,
* ನೋಕಿಯಾ-5 ಬೆಲೆ ಸರಿಸುಮಾರು 12,990 ರೂ.
* ನೋಕಿಯಾ 6 ಫೋನ್ ಗೆ 15,990 ರೂಪಾಯಿ
* ಆನ್ ಲೈನ್ ನಲ್ಲಿ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ
* ಜೂನ್ 13 ರಿಂದ ಪ್ರೀ ಬುಕ್ಕಿಂಗ್ ಆರಂಭವಾಗಲಿದ್ದು, ಜೂನ್ 20ರ ವೇಳೆಗೆ ನಿಮ್ಮ ಕೈ ಸೇರಲಿದೆ.
* ಎಲ್ಲಾ ನೋಕಿಯಾ ಫೋನ್ ಗಳು ಆಂಡ್ರಾಯ್ಡ್ ಹೊಸ ಆಪರೇಟಿಂಗ್ ಸಿಸ್ಟಮ್ (O) ಗೆ ಅಪ್ ಗ್ರೇಡ್ ಆಗಲಿವೆ ಎಂದು ಎಚ್ಎಂಡಿ ಸಂಸ್ಥೆ ಹೇಳಿದೆ.
ಸ್ಯಾಮ್ ಸಂಗ್, ಕ್ಸಿಯೋಮಿ, ಮೋಟೋರೊಲಾ, ಜಿಯೋನಿ, ಒಪ್ಪೊ, ಒನ್ ಪ್ಲಸ್ ಪೈಪೋಟಿ ನಡುವೆ ನೋಕಿಯಾ ತನ್ನ ಬೇಡಿಕೆ ಉಳಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications