ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಪೀಳಿಗೆಯ ಕನಸಿನ ಹೋಂಡಾ ಸಿಬಿ ಹಾರ್ನೆಟ್ 160ಆರ್

By Prasad
|
Google Oneindia Kannada News

ಅಡ್ಡಾಡಲು ಕಾರು, ಬಸ್ಸು, ಆಟೋಗಳೇನೇ ಇರಲಿ, ಕಣ್ಣಿಗೊಂದು ಕೂಲಿಂಗ್ ಗ್ಲಾಸ್ ಹಾಕಿಕೊಂಡು, ತಲೆಗೆ ಹೆಲ್ಮೆಟ್ ಏರಿಸಿಕೊಂಡು ಬೈಕ್ ಮೇಲೆ ಕುಳಿತಾಗ ಸಿಗುವ ಆನಂದವೇ ಬೇರೆ. ಮಾರುಕಟ್ಟೆಗೆ ಹೊಸ ಬೈಕ್ ಬಂದಾಗ ಮೀಸೆ ತಿರುವುವ ಅಥವಾ ಕೊಳ್ಳಬೇಕೆಂಬ ಕನಸು ಕಟ್ಟಿಕೊಂಡಿರುವ ಗಂಡುಗಳಿಗೆ ತಳಮಳ ಆರಂಭವಾಗುತ್ತದೆ.

ಇತ್ತೀಚೆಗೆ ಗಂಡುಗಳಷ್ಟೇ ಏಕೆ ಪ್ಯಾಂಟು ಏರಿಸಿಕೊಂಡ ಹುಡುಗಿಯರು ಕೂಡ ಬೈಕ್ ಹತ್ತಿ ಗಂಡಸರಿಗೆ ಟಕ್ಕರ್ ನೀಡಲು ಶುರು ಮಾಡಿದ್ದಾರೆ. ಇಂದಿನ ಯಂಗ್ ಪೀಳಿಗೆಯನ್ನು ಸೆಳೆಯುವಂಥ ಹೊಚ್ಚಹೊಸ ಬೈಕ್ ಬಂದರೆ ಕೇಳಬೇಕೆ? ಜಾಸ್ತಿ ಸಮಯ ಕಳೆಯದೆ ಮುಂದೆ ಓದಲು ಶುರು ಮಾಡಿ.

ಇತ್ತೀಚೆಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೋಂಡಾದ ನೂತನ ಸಿಬಿ ಹಾರ್ನೆಟ್ 160ಆರ್ ಬೈಕ್ ಖರೀದಿಗೆ ಯೋಗ್ಯವೇ ಅಥವಾ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆಯೇ ಎಂಬುದರ ಬಗ್ಗೆ ಹಲವಾರು ಅನುಮಾನಗಳು ನಿಮ್ಮಲ್ಲೂ ಮೂಡಬಹುದು. ಈ ನಿಟ್ಟಿನಲ್ಲಿ ಪ್ರಸ್ತುತ ಲೇಖನ ಈ ಬೈಕ್ ಕೊಳ್ಳಬೇಕೆಂಬುವವರಿಗೆ ಉಪಯುಕ್ತವೆನಿಸಲಿದೆ.

ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ ಚೂಪಾದ ಹಾಗೂ ಶಕ್ತಿಯುತ ವಿನ್ಯಾಸವನ್ನು ಪಡೆದುಕೊಂಡಿದೆ. ಮುಂದುಗಡೆ ಕೋನೀಯ ಹೆಡ್ ಲ್ಯಾಂಪ್ ಹಾಗೂ ಮಸಲರ್ ಇಂಧನ ಟ್ಯಾಂಕ್, 'ಎಕ್ಸ್' ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್, 5 ಸ್ಪೋಕ್ ಅಲಾಯ್ ವೀಲ್ ಮತ್ತು ಸಿಲ್ವರ್ ಫಿನಿಶ್ಡ್ ಮಫ್ಲರ್ ಪ್ರಮುಖ ಆಕರ್ಷಣೆಯಾಗಿದೆ. [ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]

ಭಾರತ್ ಸ್ಟೇಜ್ IV ಎಮಿಷನ್ ಗುಣಮಟ್ಟ

ಭಾರತ್ ಸ್ಟೇಜ್ IV ಎಮಿಷನ್ ಗುಣಮಟ್ಟ

ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ 162.7 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 14.76 ಎನ್‌ಎಂ ತಿರುಗುಬಲದಲ್ಲಿ 15.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಭಾರತ್ ಸ್ಟೇಜ್ IV ಎಮಿಷನ್ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಹಾಗೆಯೇ ಹಿಂದಿನ ಚಕ್ರಗಳಿಗೆ 5 ಸ್ಪೀಡ್ ಗೇರ್ ಬಾಕ್ಸ್ ಮುಖಾಂತರ ಪವರ್ ವಿತರಣೆಯಾಗಲಿದೆ.

ಬೈಕ್ ನಲ್ಲಿ ಟ್ವಿನ್ ಪೆಡಲ್ ಡಿಸ್ಕ್

ಬೈಕ್ ನಲ್ಲಿ ಟ್ವಿನ್ ಪೆಡಲ್ ಡಿಸ್ಕ್

ಬ್ರೇಕಿಂಗ್ ನಿಖರತೆಗಾಗಿ ನೂತನ ಹೋಂಡಾ ಸಿಬಿ ಹಾರ್ನೆಟ್ ಬೈಕ್ ನಲ್ಲಿ ಟ್ವಿನ್ ಪೆಡಲ್ ಡಿಸ್ಕ್ ಜೊತೆಗೆ ಕಾಂಬಿ ಬ್ರೇಕ್ ಸಿಸ್ಟಂ ಅಳವಡಿಸಲಾಗಿದೆ. ಇನ್ನೊಂದೆಡೆ ಸ್ಟ್ಯಾಂಡರ್ಡ್ ಬೈಕ್ ಮುಂದುಗಡೆ ಡಿಸ್ಕ್ ಬ್ರೇಕ್ ಪಡೆಯಲಿದೆ.

ಅತ್ಯುತ್ತಮ ಸ್ಥಿರತೆಗಾಗಿ ಅಗಲವಾದ ಚಕ್ರ

ಅತ್ಯುತ್ತಮ ಸ್ಥಿರತೆಗಾಗಿ ಅಗಲವಾದ ಚಕ್ರ

ಅತ್ಯುತ್ತಮ ಸ್ಥಿರತೆಗಾಗಿ 1345 ಎಂಎಂ ಚಕ್ರಾಂತರ ಹಾಗೂ ಹಿಂದುಗಡೆ 140 ಎಂಎಂ ಅಗಲವಾದ ಚಕ್ರಗಳನ್ನು ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಬೆಲೆ ಎಷ್ಟು?

ಸಿಬಿ ಹಾರ್ನೆಟ್ 160ಆರ್ ಸ್ಟ್ಯಾಂಡರ್ಡ್:
ಎಕ್ಸ್ ಶೋ ರೂಂ: 81,249 ರು.
ಆನ್ ರೋಡ್: 94,064 ರು.
ಸಿಬಿ ಹಾರ್ನೆಟ್ 160ಆರ್ ಸಿಬಿಎಸ್
ಎಕ್ಸ್ ಶೋ ರೂಂ: 85,749 ರು.
ಆನ್ ರೋಡ್: 99,217 ರು.

ಆಂಡ್ರಾಯ್ಡ್ ಆಪ್ ಮುಖಾಂತರ ಬುಕ್

ಆಂಡ್ರಾಯ್ಡ್ ಆಪ್ ಮುಖಾಂತರ ಬುಕ್

ಇವೆಲ್ಲದಕ್ಕೂ ಮಿಗಿಲಾಗಿ ಯುವ ಜನಾಂಗವನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಸಿಬಿ ಹಾರ್ನೆಟ್ 160ಆರ್ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಷನ್ ಸಹ ತೆರೆದುಕೊಳ್ಳಲಿದೆ. ಇದರ ಮುಖಾಂತರವೂ ಗ್ರಾಹಕರು 5,000 ರು.ಗಳನ್ನು ಪಾವತಿಸಿ ಬೈಕ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬೈಕ್ ಕುರಿತು ಆಪ್ ನಲ್ಲಿ ಸಮಗ್ರ ಮಾಹಿತಿ

ಬೈಕ್ ಕುರಿತು ಆಪ್ ನಲ್ಲಿ ಸಮಗ್ರ ಮಾಹಿತಿ

ಆಸಕ್ತರು ಗೂಗಲ್ ಪ್ಲೇ ಸ್ಟೋರ್‌ಗೆ ತೆರಳಿ ಹೋಂಡಾ ಸಿಬಿ ಹಾರ್ನೆಟ್ 160ಆರ್ ಅಪ್ಲಿಕೇಷನ್ ಡೌನ್ ಲೋನ್ ಮಾಡಿಕೊಳ್ಳಬಹುದಾಗಿದೆ. ಬಳಿಕ ಫೇಸ್ ಬುಕ್ ಅಥವಾ ಗೂಗಲ್ ಖಾತೆಯನ್ನು ಬಳಸಿ ಲಾಗ್ ಇನ್ ಆಗಬಹುದಾಗಿದೆ. ಇಲ್ಲಿ ಹೋಂಡಾ ಹಾರ್ನೆಟ್ ವೈಶಿಷ್ಟ್ಯ, ಎಂಜಿನ್ ತಾಂತ್ರಿಕತೆ, ಮೈಲೇಜ್, ಪವರ್ ಹಾಗೂ ವಿಶಿಷ್ಟತೆಗೆ ಸಂಬಂಧಪಟ್ಟಂತೆ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ.

360 ಡಿಗ್ರಿಯಲ್ಲಿ ವಾಹನದ ವೀಕ್ಷಣೆ

360 ಡಿಗ್ರಿಯಲ್ಲಿ ವಾಹನದ ವೀಕ್ಷಣೆ

ಹೋಂಡಾ ಸಿಬಿ ಹಾರ್ನೆಟ್ ನಿಕಟವಾಗಿ ವೀಕ್ಷಿಸಲು ಅವಕಾಶವನ್ನು ಕೊಡಲಾಗುತ್ತಿದ್ದು, ವಿಶಿಷ್ಟ ಎಕ್ಸ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್ ಸೇರಿದಂತೆ ಎಲ್ಲ ಕೋನಗಳ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಇಲ್ಲಿ ವಾಹನ ಪ್ರೇಮಿಗಳಿಗೆ 360 ಡಿಗ್ರಿ ಸುತ್ತಳತೆಯಲ್ಲೂ ವಾಹನವನ್ನು ಝೂಮ್ ಮಾಡಿ ನೋಡುವ ಅವಕಾಶವೂ ಇರುತ್ತದೆ.

ಅಪ್ಲಿಕೇಷನ್‌ನಲ್ಲಿ ಹಾರ್ನ್ ಬಾರಿಸಿ

ಅಪ್ಲಿಕೇಷನ್‌ನಲ್ಲಿ ಹಾರ್ನ್ ಬಾರಿಸಿ

ಪ್ರಸ್ತುತ ಅಪ್ಲಿಕೇಷನ್‌ನಲ್ಲಿ ಬೈಕ್ ಶಬ್ದವನ್ನು ಆಲಿಸುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಕ್ಕಾಗಿ ಮೇನ್ ಮೆನುವಿಗೆ ತೆರಳಿ "Feel The Bike" ಆಯ್ಕೆ ಮಾಡಿದರೆ ಸಾಕು. ಇಲ್ಲಿ ಹಾರ್ನೆಟ್ ಸ್ಟಾರ್ಟ್ ಆಗುವಾಗ, ಹಾರ್ನ್ ಹಾಗೂ ಗರಿಷ್ಟ ವೇಗದಲ್ಲಿ ಚಲಿಸುವಾಗ ಹೇಗೆ ಶಬ್ದ ಕೇಳಿಸಲಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ಯಾವ ಬೈಕ್ ಖರೀದಿಸಬೇಕೆಂಬ ಗೊಂದಲವೆ?

ಯಾವ ಬೈಕ್ ಖರೀದಿಸಬೇಕೆಂಬ ಗೊಂದಲವೆ?

ನೂತನ ಖರೀದಿಗಾರರಿಗೆ ಯಾವ ಬೈಕ್ ಖರೀದಿಸಬೇಕೆಂಬ ಗೊಂದಲ ಕಾಡುತ್ತಿದ್ದಲ್ಲಿ ಹೋಂಡಾ ಇದಕ್ಕಾಗಿ ಹೋಲಿಕೆ ಪುಟವನ್ನು ಪ್ರಸ್ತುತ ಆಪ್ ನಲ್ಲಿ ತೆರೆದಿದೆ. ಅಂತೆಯೇ ಆನ್ ರೋಡ್ ಬೆಲೆ, ಡೀಲರುಗಳ ಪಟ್ಟಿ ಇತ್ಯಾದಿ ಅಗತ್ಯ ಮಾಹಿತಿಗಳನ್ನು ನೀವಿಲ್ಲಿ ಪಡೆಯಬಹುದಾಗಿದೆ.

ಆಪ್ ಮುಖಾಂತರ ಬುಕ್ಕಿಂಗ್ ಲಭ್ಯತೆ

ಆಪ್ ಮುಖಾಂತರ ಬುಕ್ಕಿಂಗ್ ಲಭ್ಯತೆ

ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ ಈಗಾಗಲೇ 35,000ಕ್ಕೂ ಹೆಚ್ಚು ಡೌನ್ ಲೋಡ್ ಗಳನ್ನು ಗಿಟ್ಟಿಸಿಕೊಂಡಿದ್ದು, ಎರಡು ಹಂತಗಳಾಗಿ ಆಪ್ ಮುಖಾಂತರ ಬುಕ್ಕಿಂಗ್ ಲಭ್ಯತೆಯನ್ನು ಹೆಚ್ಚಿಸುವ ಇರಾದೆಯನ್ನು ಹೊಂದಿದೆ. ಅಂದರೆ ಈಗಿರುವ 21ರಿಂದ 53 ನಗರಗಳಿಗೆ ವಿಸ್ತರಣೆಯಾಗಲಿದೆ.

ಅಷ್ಟಕ್ಕೂ ನೀವೇನು ಮಾಡಬೇಕು?

ಅಷ್ಟಕ್ಕೂ ನೀವೇನು ಮಾಡಬೇಕು?

ಈ ಕೂಡಲೇ ಎಕ್ಸ್ ಕ್ಲೂಸಿವ್ ಹೋಂಡಾ ಸಿಬಿ ಹಾರ್ನೆಟ್ 160ಆರ್ ಆಂಡ್ರಾಯ್ಡ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಹೋಂಡಾ ಸಿಬಿ ಹಾರ್ನೆಟ್ 160ಆರ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿರಿ.

English summary
New Honda CB Hornet 160R, Specifications And Booking Details. Book your dream bike for just Rs 5000 using android app. What is so special in this bike which is attracting young generation? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X