ಮೈ ಜಿಯೋ ಆಪ್ ಸಾಧನೆ, ಹತ್ತು ಕೋಟಿ ಡೌನ್‌ ಲೋಡ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ರಿಲಯನ್ಸ್ ಜಿಯೋ ತಂತ್ರಾಂಶ ಸವಲತ್ತುಗಳ ಸಂಗ್ರಹವಾದ 'ಮೈ ಜಿಯೋ' ಆಪ್ಲಿಕೇಷನ್, ಹತ್ತು ಕೋಟಿಗೂ ಹೆಚ್ಚು ಡೌನ್ ಲೋಡ್ ಗಳನ್ನು ದಾಖಲಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗೂಗಲ್ ಪ್ಲೇ ವ್ಯವಸ್ಥೆಯಲ್ಲಿ ಮೈಜಿಯೋ ಹತ್ತು ಕೋಟಿ ಡೌನ್ ಲೋಡ್ ಗಳ ಮೈಲಿಗಲ್ಲನ್ನು ದಾಟಿದೆ. ಇದು ಈ ಸಾಧನೆ ಮಾಡಿದ ಭಾರತೀಯ ಆಪ್ ಗಳ ಪೈಕಿ ಎರಡನೆಯದಾಗಿದ್ದು ಮೊಬೈಲ್ ಸಂಸ್ಥೆಗಳು ರೂಪಿಸಿರುವ ಸ್ವಸಹಾಯ (ಸೆಲ್ಫ್-ಕೇರ್) ಮೊಬೈಲ್ ಆಪ್ ಗಳ ಪೈಕಿ ಮೊದಲನೆಯದು. ಇದಲ್ಲದೆ, ಹಾಟ್ ಸ್ಟಾರ್ ಆಪ್ ಮೈಜಿಯೋಗಿಂತ ಮೊದಲು ಹತ್ತು ಕೋಟಿ ಡೌನ್ ಲೋಡ್ ಗಳ ಸಾಧನೆ ಮಾಡಿತ್ತು.

MyJio app crosses 100 million download mark on Google Play

"ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿರುವ ಮೊದಲ ಭಾರತೀಯ ಆಪ್ ಮೈಜಿಯೋ" ಎಂದು ರಿಲಯನ್ಸ್ ಜಿಯೋ ಸಂಸ್ಥೆಯ ಮೂಲಗಳು ತಿಳಿಸಿವೆ. ಏರ್ ಟೆಲ್, ವೋಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲರ್ ಸಂಸ್ಥೆಗಳ ಇಂತಹವೇ ಸೆಲ್ಫ್-ಕೇರ್ ಆಪ್‌ಗಳು ಗೂಗಲ್ ಪ್ಲೇಸ್ಟೋರಿನಲ್ಲಿ ಒಂದು ಕೋಟಿ ಡೌನ್ ಲೋಡ್ ಗಳನ್ನು ದಾಖಲಿಸಿವೆ.

ರಿಲಯನ್ಸ್ ಜಿಯೋದ ಟೀವಿ ಆಪ್ 'ಜಿಯೋ ಟೀವಿ' ಈವರೆಗೆ ಐದು ಕೋಟಿಗಿಂತ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿದೆ. ಇದರ ಹೋಲಿಕೆಯಲ್ಲಿ ಏರ್‌ಟೆಲ್‌ನ ಟೀವಿ ಆಪ್ ಅನ್ನು ಐವತ್ತು ಲಕ್ಷಕ್ಕಿಂತ ಹೆಚ್ಚು ಬಾರಿ ಹಾಗೂ ವೋಡಾಫೋನ್ - ಐಡಿಯಾ ಆಪ್‌ಗಳನ್ನು ತಲಾ ಹತ್ತು ಲಕ್ಷಕ್ಕಿಂತ ಹೆಚ್ಚುಬಾರಿ ಡೌನ್‌ಲೋಡ್‌ ಮಾಡಲಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mobile application suite MyJio app, of Reliance Jio, has become the second most downloaded Indian application on the Android platform by registering over 100 million downloads, as per a company official.
Please Wait while comments are loading...