ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 9ನೇ ಸ್ಥಾನಕ್ಕೆ ಕುಸಿತ

ಮುಂಬೈ, ನ.3: ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ರಿಲಯನ್ಸ್ ಷೇರು ಒಂದೇ ದಿನ ಸರಿ ಸುಮಾರು 5 ಬಿಲಿಯನ್ ಡಾಲರ್ ನಷ್ಟ ಉಂಟು ಮಾಡಿದ ಸುದ್ದಿಯ ಬೆನ್ನಲ್ಲೇ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ಸೋಮವಾರ ಒಂದೇ ದಿನ 7 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಡೇಟಾದಲ್ಲಿ ಈಗ ಗೂಗಲ್ ಸಹ ಸ್ಥಾಪಕ ಲ್ಯಾರಿ ಪೇಜ್ ಅವರಿಗಿಂತ ಹಿಂದಿದ್ದಾರೆ.

ರಿಲಯನ್ಸ್ ಷೇರು ಮೌಲ್ಯ ಬಹುತೇಕ 9% ರಂತೆ 1,871.90 ರು ಕಳೆದುಕೊಂಡಿದ್ದು ಕಳೆದ ಮೂರು ತಿಂಗಳಲ್ಲೇ ಇದು ಅತ್ಯಂತ ನಷ್ಟವಾಗಿದೆ. ಅಕ್ಟೋಬರ್ 30ರಂದು ಪ್ರಕಟವಾಗಿ 2ನೇ ತ್ರೈಮಾಸಿಕ ವರದಿಯಲ್ಲಿ ನಿವ್ವಳ ಲಾಭ 32.5% ಕುಸಿತ ಕಂಡಿದ್ದು, ಈಗ ಮಾರುಕಟ್ಟೆ ಮೌಲ್ಯ 12,64,061.50 ಕೋಟಿ ರು ನಷ್ಟಿದೆ. ಷೇರುದಾರರು ಸುಮಾರು 1 ಲಕ್ಷ ಕೋಟಿ ರು ಕಳೆದುಕೊಂಡಿದ್ದಾರೆ.

Mukesh Ambani slips to the 9th spot in Forbes billionaires list

ಮಾರ್ಚ್ ತಿಂಗಳಿನಿಂದ ಸರಿ ಸುಮಾರು 73 ಬಿಲಿಯನ್ ಡಾಲರ್ ನಷ್ಟು ಆಸ್ತಿ ಮೌಲ್ಯವನ್ನು ಮುಖೇಶ್ ಕಳೆದುಕೊಂಡಿದ್ದಾರೆ. ರಿಲಯನ್ಸ್ ಹಾಗೂ ಫ್ಯೂಚರ್ ರೀಟೇಲ್ ಒಪ್ಪಂದಕ್ಕೆ ಅಮೆಜಾನ್ ತಾತ್ಕಲಿಕ ತಡೆ ತಂದಿರುವುದು ಮುಖೇಶ್ ಅವರಿಗೆ ಹಿನ್ನಡೆಯುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+