ಮಲ್ಟಿಪ್ಲೆಕ್ಸ್ ರೀ ಓಪನ್ ಆದ್ಮೇಲೆ ಟಿಕೆಟ್ ಬೆಲೆ ಶೇ 15ರಷ್ಟು ಕಡಿತ!

ಮುಂಬೈ, ಜುಲೈ 28: ಕೊರೊನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚಿತ್ರಮಂದಿರಗಳು ಆಗಸ್ಟ್ ತಿಂಗಳಿನಿಂದ ಮತ್ತೆ ಆರಂಭವಾಗುವ ಎಲ್ಲಾ ಲಕ್ಷಣಗಳು ತೋರುತ್ತಿದೆ. ಜುಲೈ 31ಕ್ಕೆ ಅನ್ ಲಾಕ್ 2.0 ಮುಗಿಯಲಿದ್ದು, ಆಗಸ್ಟ್ 1ರಿಂದ ಆರಂಭವಾಗಲಿರುವ ಅನ್ ಲಾಕ್ 3.0ರಲ್ಲಿ ಚಿತ್ರಮಂದಿರ ಹಾಗೂ ಜಿಮ್ ಆರಂಭಕ್ಕೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿದೆ.

Recommended Video

      India and Nepal border dispute explained | Oneindia Kannada

      ಚಿತ್ರಮಂದಿರಗಳು ರೀ ಓಪನ್ ಕುರಿತಂತೆ ಮಾರ್ಗಸೂಚಿ ಇನ್ನೂ ಪ್ರಕಟವಾಗಿಲ್ಲ, ಈ ನಡುವೆ ಮಲ್ಟಿಪ್ಲೆಕ್ಸ್ ಗಳ ಪೈಕಿ ಪಿವಿಆರ್ ಸಿನಿಮಾಸ್, ಐನಾಕ್ಸ್ ಲೀಷರ್ ಸಂಸ್ಥೆಗಳು ತಮ್ಮ ಚಿತ್ರಮಂದಿರ ಜಾಲಗಳಲ್ಲಿ ಟಿಕೆಟ್ ಬೆಲೆ ಶೇ 15ರಷ್ಟು ಕಡಿತಗೊಳಿಸುವುದಾಗಿ ತಿಳಿಸಿವೆ.

      ಎಕಾನಾಮಿಕ್ಸ್ ಟೈಮ್ಸ್ ವರದಿಯಂತೆ ಪಿವಿಆರ್ ಹಾಗೂ ಐನಾಕ್ಸ್ ಸಂಸ್ಥೆಗಳು ಟಿಕೆಟ್ ದರ ಇಳಿಕೆಗೆ ಮುಂದಾಗಿವೆ. ಆದರೆ, ಎಷ್ಟು ಪ್ರಮಾಣ ಎಂಬುದು ಇನ್ನೂ ನಿರ್ಧಾರವಾಗಿಲ್ಲ, ಶೇ 10 ರಿಂದ 15ರಷ್ಟು ದರ ಇಳಿಕೆ ಮಾಡುವ ಸಾಧ್ಯತೆಯಿದೆ.

      Movie ticket prices to be slashed by 15 per cent once multiplexes reopen

      ಟಿಕೆಟ್ ದರದ ಮೇಲೆ ರಿಯಾಯಿತಿ, ದರ ಇಳಿಕೆ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವುದು ನಮ್ಮ ಉದ್ದೇಶ ಎಂದು ಪಿವಿಆರ್ ಸಿಇಒ ಗೌತಮ್ ದತ್ತಾ ಹೇಳಿದ್ದಾರೆ.

      ಮೊದಲ ಎರಡು ವಾರ ಬೆಲೆ ಕಡಿತ ಅನಿವಾರ್ಯ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸುರಕ್ಷಿತವಾಗಿದೆ ಎಂಬ ಭಾವದಿಂದ ಸಿನಿಮಾ ನೋಡುವಂತಾಗಬೇಕು ಎಂದಿದ್ದಾರೆ.

      ಚಿತ್ರಮಂದಿರಗಳನ್ನು ಪುನರ್ ಆರಂಭಿಸಲು ಮಾಹಿತಿ ಮತ್ತು ಪ್ರಸಾರ ಇಲಾಖೆ ಶಿಫಾರಸು ಮಾಡಿದ್ದು, ಗೃಹ ಇಲಾಖೆ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+