ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ತಿಂಗಳಿಂದ ಆದಾಯದಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ: ನಿರ್ಮಲಾ

|
Google Oneindia Kannada News

ಸಾಂಕ್ರಾಮಿಕದಿಂದ ಒದಗಿ ಬಂದ ಆಘಾತ ಮತ್ತು ನಂತರದ ಆರ್ಥಿಕ ಪುನಶ್ಚೇತನದ ಹಿನ್ನೆಲೆಯಲ್ಲಿ ಆತ್ಮ ನಿರ್ಭರ ಭಾರತದ ನೀತಿಯ ಅನುಗುಣವಾಗಿ ಬೇಡಿಕೆ ಮತ್ತು ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಆರ್ಥಿಕ ನೀತಿ ಮಿಳಿತಗೊಂಡಿರುವುದನ್ನು ಆರ್ಥಿಕ ಸಮೀಕ್ಷೆ ಎತ್ತಿ ತೋರಿಸಿದೆ.

ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಇಂದು 2020-21ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಾಂಕ್ರಾಮಿಕದಿಂದ ಉಂಟಾದ ಪರಿಸ್ಥಿತಿಯು ಇತರ ದೇಶಗಳಿಗಿಂತ ವಿಭಿನ್ನವಾಗಿತ್ತು. ಸರ್ಕಾರ, ಕೈಗೊಂಡ ಆರ್ಥಿಕ ನೀತಿಯು ಈ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರೂಪಿಸಲಾಗಿತ್ತು. ಹಲವು ದೇಶಗಳು ಆರ್ಥಿಕ ಪುನಶ್ಚೇತನ ಹಣಕಾಸಿನ ನೆರವಿನ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದವು. ಆದರೆ, ಭಾರತವು ಹಂತ- ಹಂತವಾಗಿ ಆರ್ಥಿಕ ಪುನಶ್ಚೇತನದ ಕ್ರಮಗಳನ್ನು ಅನುಸರಿಸಿತು.

ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ

ವಿಶ್ವದ ಅತ್ಯಂತ ದೊಡ್ಡದಾದ ಆಹಾರ ಕಾರ್ಯಕ್ರಮ, ಜನ್‌ ಧನ್‌ ಖಾತೆಗಳಿಗೆ ನೇರ ಹಣ, ಸಾಲಕ್ಕೆ ಸರ್ಕಾರದ ಖಾತೆ ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದನ್ನು ಆರ್ಥಿಕ ಸಮೀಕ್ಷೆಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಬಂಡವಾಳ ವೆಚ್ಚ, ಉತ್ಪಾದನೆಗೆ ಸಂಬಂಧಿತ ಪ್ರೋತ್ಸಾಹ ಮತ್ತು ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸಲು ನೆರವು ನೀಡುವ ನಿಟ್ಟಿನಲ್ಲಿ ದೇಶಿಯ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರ ವಿವಿಧ ರೀತಿಯಲ್ಲಿ ನೆರವು ನೀಡಲು ಮುಂದಾಯಿತು.

 ಕೇಂದ್ರ ಸರ್ಕಾರದ ಹಣಕಾಸು

ಕೇಂದ್ರ ಸರ್ಕಾರದ ಹಣಕಾಸು

ಬಜೆಟ್‌ ಪೂರ್ವ ಸಮೀಕ್ಷೆಯಲ್ಲಿ 2019-20ನೇ ಸಾಲಿನಲ್ಲಿ ಆರ್ಥಿಕ ಕೊರತೆಯು ವಾಸ್ತವವಾಗಿ ಜಿಡಿಪಿಯ ಶೇಕಡ 4.6ರಷ್ಟಿತ್ತು. ಇದು 2019-20ನೇ ಸಾಲಿನಲ್ಲಿನ ಶೇಕಡ 0.8ರಷ್ಟು ಆರ್ಥಿಕ ಕೊರತೆಗಿಂತ ಹೆಚ್ಚಾಗಿತ್ತು ಮತ್ತು 2018-19ನೇ ಸಾಲಿನಲ್ಲಿನ ಶೇಕಡ 1.2ರಷ್ಟು ಆರ್ಥಿಕ ಕೊರತೆಗಿಂತ ಹೆಚ್ಚಾಗಿತ್ತು. ಪರಿಣಾಮಕಾರಿ ಆದಾಯ ಕೊರತೆಯು ಜಿಡಿಪಿಯ ಶೇಕಡ 1ರಷ್ಟು ಹೆಚ್ಚಾಗಿತ್ತು.

ಕಾರ್ಪೋರೇಟ್‌ ಮತ್ತು ವೈಯಕ್ತಿಕ ಆದಾಯ ತೆರಿಗೆಯು 2019-20ನೇ ಸಾಲಿನಲ್ಲಿ ಕಡಿಮೆಯಾಗಿತ್ತು. ಕಾರ್ಪೋರೇಟ್‌ ತೆರಿಗೆಯಂತಹ ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖ ಕಾರಣಗಳಾಗಿವೆ ಎನ್ನುವುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಆದಾಯದ ವಿಷಯವನ್ನು ಅವಲೋಕಿಸುವುದಾದರೆ ವಸೂಲಾತಿಯೂ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರತಿ ತಿಂಗಳ ಜಿಎಸ್‌ಟಿ ಸಂಗ್ರಹವು ₹1ಲಕ್ಷ ಕೋಟಿ ದಾಟಿದೆ. ಸತತವಾಗಿ ಮೂರು ತಿಂಗಳು ಇದೇ ರೀತಿಯ ತೆರಿಗೆ ಸಂಗ್ರಹವೂ ಆಗಿದೆ. 2019ರ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಆದಾಯದಲ್ಲಿ ಶೇಕಡ 12ರಷ್ಟು ಹೆಚ್ಚಿಗೆಯಾಗಿತ್ತು. ಇದೇ ರೀತಿ 2020ರ ಡಿಸೆಂಬರ್‌ನಲ್ಲಿ ₹1.15 ಲಕ್ಷ ಕೋಟಿ ಆದಾಯ ಸಂಗ್ರಹವಾಗಿತ್ತು. ಜಿಎಸ್‌ಟಿ ವ್ಯವಸ್ಥೆ ಆರಂಭಿಸಿದ ಬಳಿಕ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಇದು ಅತ್ಯಂತ ಹೆಚ್ಚಿನ ಮೊತ್ತವಾಗಿದೆ.

ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?

 2020ರ ನವೆಂಬರ್‌ವರೆಗಿನ ಆದಾಯ ಸಂಗ್ರಹ

2020ರ ನವೆಂಬರ್‌ವರೆಗಿನ ಆದಾಯ ಸಂಗ್ರಹ

ಬಜೆಟ್‌ ಅಂದಾಜುಗಳು (2020-21)-ವಾಸ್ತವ ಸಂಗ್ರಹ (ನವೆಂಬರ್‌ 2020)

ಒಟ್ಟು ತೆರಿಗೆ ಆದಾಯ: 16.36 ಲಕ್ಷ ಕೋಟಿ--ಶೇಕಡ 42.1 ಬಿಇ (6.88 ಲಕ್ಷ ಕೋಟಿ)

ತೆರಿಗೆ ರಹಿತ ಆದಾಯ: 3.85 ಲಕ್ಷ ಕೋಟಿ--ಶೇಕಡ 32.3 ಬಿಇ

ಬಜೆಟ್‌ ಪೂರ್ವ ಸಮೀಕ್ಷೆಯಂತೆ ಸಾಲ ರಹಿತ ಬಂಡವಾಳವನ್ನು ₹2.3 ಲಕ್ಷ ಕೋಟಿಗೆ ಮಿತಿಗೊಳಿಸಲಾಗಿದೆ. ಇದು 2020-21ನೇ ಸಾಲಿನಲ್ಲಿನ ಬಜೆಟ್‌ ವೆಚ್ಚದಲ್ಲಿನ ಜಿಡಿಪಿಯ ಶೇಕಡ 1ರಷ್ಟಿತ್ತು. ವೆಚ್ಚವನ್ನು ಹೋಲಿಸಿದಾಗ, 2020-21ನೇ ಸಾಲಿನ ಬಜೆಟ್‌ನ ಒಟ್ಟು ಅಂದಾಜು ವೆಚ್ಚವು ₹30.42 ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು. ಇದು ₹26.3 ಲಕ್ಷ ಕೋಟಿಯ ರೆವೆನ್ಯೂ ವೆಚ್ಚ ಮತ್ತು ₹4.12 ಲಕ್ಷ ಬಂಡವಾಳ ವೆಚ್ಚವಾಗಿದೆ. ಜಿಡಿಪಿಯ ಶೇಕಡವಾರು ವಿಶ್ಲೇಷಿಸಿದಾಗ 2019-20ಕ್ಕಿಂತ 2020-21ರಲ್ಲಿ ಬಜೆಟ್‌ ವೆಚ್ಚದಲ್ಲಿ ಜಿಡಿಪಿಯ ಶೇಕಡ 0.3ರಷ್ಟಾಗಿದೆ. ಬೆಳವಣಿಗೆಯು ಆದಾಯ ಮತ್ತು ಬಂಡವಾಳ ವೆಚ್ಚದಲ್ಲಿ ಜಿಡಿಪಿಯ ಶೇಕಡ 0.15ರಷ್ಟಿತ್ತು.

 ಆದಾಯ ವೆಚ್ಚವು 2020–21ನೇ ಸಾಲಿನಲ್ಲಿ ಶೇಕಡ 11.9

ಆದಾಯ ವೆಚ್ಚವು 2020–21ನೇ ಸಾಲಿನಲ್ಲಿ ಶೇಕಡ 11.9

ಸಮೀಕ್ಷೆ ಅನ್ವಯ, ಸರ್ಕಾರದ ಒಟ್ಟು ವೆಚ್ಚವು 2020ರ ಏಪ್ರಿಲ್‌ ಮತ್ತು ನವೆಂಬರ್‌ನಲ್ಲಿ ಬಜೆಟ್‌ ಅಂದಾಜಿಗಿಂತ ಶೇಕಡ 62.7ರಷ್ಟಿತ್ತು. ಇದು 2019ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಶೇಕಡ 65.3ರಷ್ಟಿತ್ತು. 2020ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ₹3.17 ಲಕ್ಷ ಕೋಟಿಯಾಗಿತ್ತು. ಇದು ಹಿಂದಿನ ವರ್ಷಕ್ಕೆ ಹೋಲಿಸಿದಾಗ ಬಂಡವಾಳ ವೆಚ್ಚಕ್ಕಿಂತ ಶೇಕಡ 24ರಷ್ಟು ಹೆಚ್ಚಾಗಿತ್ತು. ಒಟ್ಟು ವೆಚ್ಚವು ಸಹ ವರ್ಷದಿಂದ ವರ್ಷಕ್ಕೆ ಶೇಕಡ 11ರಷ್ಟಿತ್ತು.

ಜತೆಗೆ, ಆದಾಯ ವೆಚ್ಚವು 2020-21ನೇ ಸಾಲಿನಲ್ಲಿ ಶೇಕಡ 11.9ರಷ್ಟಿತ್ತು. ಇದು ಸಹಜವಾದ ಬೆಳವಣಿಗೆ ದರವಾಗಿದ್ದು, ಶೇಕಡ 17ರಷ್ಟು ಆದಾಯ ವೆಚ್ಚವಾಗಿದೆ. ಪ್ರಮುಖ ಸಬ್ಸಿಡಿಗಳಲ್ಲಿನ ವೆಚ್ಚವು 2020-21ನೇ ಸಾಲಿನಲ್ಲಿ ಶೇಕಡ 1.0ರಷ್ಟಿದ್ದು, 2019-20ರಲ್ಲಿ ಶೇಕಡ 21.ರಷ್ಟು ಬೆಳವಣಿಗೆಯಾಗಿತ್ತು.

ಒಟ್ಟು ವೆಚ್ಚದಲ್ಲಿ ಬಂಡವಾಳವು ವೆಚ್ಚವು ಸುಸ್ಥಿರವಾಗಿ ಉಳಿದುಕೊಂಡಿದೆ. 2020-21ರಲ್ಲಿ ಅಲ್ಪಪ‍್ರಮಾಣದಲ್ಲಿ ಹೆಚ್ಚಳವಾಗಬಹುದು ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿದೆ. ಹೆಚ್ಚುವರಿ ಬಜೆಟ್‌ ಸಂಪನ್ಮೂಲವು 2016-17ರಿಂದ 2019-20ನೇ ಸಾಲಿನಲ್ಲಿ 1.35 ಲಕ್ಷ ಕೋಟಿಯಾಗಿತ್ತು. 2020-21ನೇ ಸಾಲಿನಲ್ಲಿ ಹೆಚ್ಚುವರಿ ಬಜೆಟ್‌ ಸಂಪನ್ಮೂಲಗಳನ್ನು ₹49,500 ಕೋಟಿಯಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿತ್ತು. ಇದು ಬಜೆಟ್‌ ವೆಚ್ಚದಲ್ಲಿ ಪ್ರಸ್ತಾಪಿಸಲಾದ ಜಿಡಿಪಿಯ ಶೇಕಡ 0.22ರಷ್ಟು.

ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ

 ರಾಜ್ಯಗಳಿಗೆ ವರ್ಗಾವಣೆ, ರಾಜ್ಯ ಹಣಕಾಸು ಸ್ಥಿತಿ

ರಾಜ್ಯಗಳಿಗೆ ವರ್ಗಾವಣೆ, ರಾಜ್ಯ ಹಣಕಾಸು ಸ್ಥಿತಿ

2019-20ನೇ ಸಾಲಿನಲ್ಲಿ ಒಟ್ಟು ತೆರಿಗೆ ಸಂಗ್ರಹದಲ್ಲಿ ಕುಸಿತವಾಗಿದ್ದರಿಂದ ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯದ ಪಾಲು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. 2020-21ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕಾದ ಸಂಪೂರ್ಣ ಪಾಲಿನಲ್ಲಿ 2019-20ನೇ ಸಾಲಿನಲ್ಲಿ ಜಿಡಿಪಿಯ ಶೇಕಡ 5.7ರಷ್ಟಿತ್ತು. ಇದನ್ನು 2020-21ನೇ ಸಾಲಿಗೆ ಜಿಡಿಪಿಯ ಶೇಕಡ 6ರಷ್ಟಾಗಲಿದೆ.

ರಾಜ್ಯ ಹಣಕಾಸು: ಕೋವಿಡ್‌-19ಗೆ ಮುನ್ನ ಬಜೆಟ್‌ ಪ್ರಸ್ತುತ ಪಡಿಸಿದ ರಾಜ್ಯಗಳು ಬಜೆಟ್‌ ಅಂದಾಜಿನ ಒಟ್ಟು ಆರ್ಥಿಕ ಕೊರತೆಯು ಜಿಎಸ್‌ಡಿಪಿಯ ಶೇಕಡ 2.4ರಷ್ಟಿತ್ತು. ಲಾಕ್‌ಡೌನ್‌ ಬಳಿಕ ಬಜೆಟ್‌ ಪ್ರಸ್ತುತ ಪಡಿಸಿದ ರಾಜ್ಯಗಳು ಜಿಎಸ್‌ಡಿಪಿಯ ಶೇಕಡ 4.6ರಷ್ಟಾಯಿತು.

ರಾಜ್ಯಗಳ ಹಣಕಾಸು ಕೊರತೆಯನ್ನು ನೀಗಿಸಿ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2021ನೇ ಸಾಲಿಗೆ ರಾಜ್ಯ ಸರ್ಕಾರಗಳು ವಿಶೇಷ ನೆರವು ಘೋಷಿಸಿದೆ. ಜತೆಗೆ, ಒಂದು ಬಾರಿ ವಿಶೇಷ ಅನುದಾನವನ್ನು ನೀಡಿದೆ. ರಾಜ್ಯಗಳಿಗೆ 2019-20ನೇ ಸಾಲಿಗೆ 0.59 ಕೋಟಿಯಷ್ಟು ನೆರವು ನೀಡಲಾಗಿದೆ. ರಾಜ್ಯಗಳ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್‌ಡಿಪಿ) ಶೇಕಡ 2ರಷ್ಟು ಹೆಚ್ಚುವರಿಯಾಗಿ ಅನುದಾನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರದಲ್ಲಿ ಶೇಕಡ 1ರಷ್ಟು ಅನುದಾನವನ್ನು ರಾಜ್ಯ ಸರ್ಕಾರಗಳ ಸುಧಾರಣೆ ಕ್ರಮಗಳನ್ನು ನೋಡಿಕೊಂಡು ನೀಡುವ ಷರತ್ತು ವಿಧಿಸಲಾಗಿದೆ.

 ಕೇಂದ್ರ ಸರ್ಕಾರದ ಹಣಕಾಸುಗಳು

ಕೇಂದ್ರ ಸರ್ಕಾರದ ಹಣಕಾಸುಗಳು

ಕೊವಿಡ್ 19ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರೀಕ್ಷೆಯಂತೆ ಆದಾಯದಲ್ಲಿ ಕೊರತೆಯನ್ನು ನಿರೀಕ್ಷಿಸಿವೆ. ಜತೆಗೆ ಅತಿ ಹೆಚ್ಚು ವೆಚ್ಚವಾಗುವುದನ್ನು ಸಹ ನಿರೀಕ್ಷಿಸಲಾಗಿತ್ತು. ಆದರೆ, ಆರ್ಥಿಕ ಪುನಶ್ಚೇತನದಿಂದಾಗಿ ಕೊರತೆಯನ್ನು ನೀಗಿಸಿ ಆದಾಯದಲ್ಲಿ ಹೆಚ್ಚಳವಾಗುತ್ತಿರುವ ಸ್ಥಿತ್ಯಂತರವನ್ನು ಕಾಣಬಹುದಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿದೆ. ಭಾರತವು ಕೈಗೊಂಡ ಕ್ರಮಗಳಿಂದಾಗಿ ಮುಂದಿನ ವರ್ಷಗಳಲ್ಲಿ ಕೊರತೆಯನ್ನು ನೀಗಿಸಲು ಸಹ ಪೂರಕವಾಗಿದೆ. ಇದರಿಂದಾಗಿ, ಸುಸ್ಥಿರ ಆರ್ಥಿಕ ಮಾರ್ಗದಲ್ಲಿ ಸಾಗಲಿದೆ.

ಬಜೆಟ್ 2021: ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಡಿತ?ಬಜೆಟ್ 2021: ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಡಿತ?

English summary
Monthly Gross Revenue GST collections Cross 1 Lakh Crore mark for 3 Months in a row and States allowed to borrow more, beyond their eligibity upto 2% Of GSDP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X