ಮಾಂಟ್ ಕಾಸಲ್ ಹೊಸ ಪ್ರಚಾರ "ಈ ಸಂಜೆ ನಿನ್ನದೇ"
ಬೆಂಗಳೂರು, ಜು. 26: ಜಾನ್ ಡಿಸ್ಟಿಲರಿ ಪ್ರೈವೆಟ್ ಲಿಮಿಟೆಡ್ ಉತ್ಪನ್ನವಾದ ಮಾಂಟ್ ಕಾಸಲ್ ಜನರಿಗಾಗಿ ಒಂದು ಹೊಸ ಪ್ರಚಾರವನ್ನು ಜಾರಿಗೆ ತಂದಿದೆ "ಈ ಸಂಜೆ ನಿನ್ನದೇ" ಎಂಬ ಹೊಸ ಉದ್ಘೋಷಣೆಯನ್ನು ಮಾಂಟ್ ಕಾಸಲ್ ಶುರು ಮಾಡಿದೆ.
ಈ ಹೊಸ ಪ್ರಚಾರ ಹೊಸ ಡಿಸೈನ್ ಮತ್ತು ಪರಿಕಲ್ಪನೆ ಮಾಂಟ್ ಕಾಸಲ್ ಕೆಳ ಮಧ್ಯಮ ವರ್ಗದವರಲ್ಲಿ ಯಾವ ತರಹ ಆಶಾವಾದವನ್ನು ಮೂಡಿಸುತ್ತದೆ ಎಂಬುವುದನ್ನು ಬಿಂಬಿಸುತ್ತದೆ. ದಿನದ ದಣಿವನ್ನು ಒಬ್ಬ ವ್ಯಕ್ತಿ ಯಾವ ತರಹ ಮರೆಯುತ್ತಾನೆ ಎನ್ನುವುದನ್ನು ಇದು ವಿವರಿಸುತ್ತದೆ.

ಈ ಬ್ರಾಂಡಿಯು ವೈನ್ ಶಾಪ್, ಬಾರ್, ರೆಸ್ಟೋರೆಂಟ್, ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇನ್ನು ಈ ಹೊಸ ಪ್ರಚಾರವನ್ನು ವಿಭಿನ್ನವಾಗಿ ನಡೆಸಲಾಗುತ್ತಿದೆ. ವಿವಿಧ ಕಡೆಗಳಲ್ಲಿ ಅತ್ಯಾಕರ್ಷಕವಾದ ಉತ್ಪನ್ನ ಪ್ರದರ್ಶನಕ್ಕೆ ಸೌಲಭ್ಯ, ಸ್ಟಾಂಡೀಗಳು, ಆಕರ್ಷಕ ಬಣ್ಣದ ಪೋಸ್ಟರ್ ಗಳು, ಮೆನು ಕಾರ್ಡ್ ಗಳು, ತೂಗಿ ಹಾಕುವ ಪೋಸ್ಟರ್ ಗಳು, ಟೇಬಲ್ ಮೇಲಿಡಲು ವಿಭಿನ್ನವಾದ ಬೋರ್ಡ್, ಟೆಂಟ್ ಕಾರ್ಡ್, ಕೋಸ್ಟರ್ ಗಳನ್ನು ಇಟ್ಟು ಪ್ರಚಾರ ನಡೆಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. (ಒನ್ಇಂಡಿಯಾ ಬಿಜಿನೆಸ್)












Click it and Unblock the Notifications