• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ಕೈಗಾರಿಕಾ ಪಾರ್ಕ್‌ಗಳಲ್ಲಿ ನಿವೇಶನಗಳ ಹಂಚಿಕೆಗೆ ಚಾಲನೆ

|

ಬೆಂಗಳೂರು ನ 25: ಬಹಳ ದಿನಗಳಿಂದ ಹಂಚಿಕೆ ಆಗದೇ ಇದ್ದ ಮಹಿಳಾ ಕೈಗಾರಿಕಾ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ಮಹಿಳಾ ಉದ್ದಿಮೆದಾರರು ಹೆಚ್ಚಿನ ರೀತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವಂತೆ ರಾಜ್ಯ ಸರಕಾರದ ವತಿಯಿಂದ ಅಗತ್ಯ ಪ್ರೋತ್ಸಾಹ ನೀಡಲು ಬದ್ಧರಾಗಿದ್ದೇವೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಹೇಳಿದರು.

ಮಹಿಳಾ ಉದ್ದಿಮೆದಾರರ ದಿನಾಚರಣೆ 2020 ಅಂಗವಾಗಿ ಇಂದು ಎಫ್‌ಕೆಸಿಸಿಐ ವತಿಯಿಂದ ಬೆಂಗಳೂರಿನ ಎಫ್ ಕೆ ಸಿ ಸಿ ಐ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಉದ್ಯಮಿ ಪಾರ್ಕ್‌ಗಳನ್ನು ಘೋಷಿಸಿ ಹಲವಾರು ವರ್ಷಗಳೇ ಸಂದಿವೆ.

ಆದರೆ ಇದುವರೆಗೂ ಅವುಗಳಲ್ಲಿನ ಕೈಗಾರಿಕಾ ನಿವೇಶನಗಳ ಹಂಚಿಕೆ ಕಾರ್ಯವನ್ನು ಪ್ರಾರಂಭಿಸಿರಲಿಲ್ಲ. ಈಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯದ ಎಲ್ಲಾ ಭಾಗಗಳಲ್ಲೂ ಇರುವ ಮಹಿಳಾ ಕೈಗಾರಿಕಾ ಪಾರ್ಕಿನ ನಿವೇಶನಗಳನ್ನು ಹಂಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಹಿಳೆಯರು ಉದ್ಯಮ ಸ್ಥಾಪಿಸಲು ಅಗತ್ಯ ಪ್ರೋತ್ಸಾಹ ನೀಡಲು ರಾಜ್ಯ ಸರಕಾರ ಬದ್ದವಾಗಿದೆ. ಅಲ್ಲದೆ, ಮಹಿಳೆಯರು ಯಾವುದೇ ಸಹಾಯವಿಲ್ಲದೆ ವಿಶೇಷ ಸವಲತ್ತುಗಳು ಹಾಗೂ ಮೀಸಲಾತಿ ಇಲ್ಲದೆ ಸ್ವಂತ ಬಲದಿಂದಲೇ ಉದ್ಯಮ ಸ್ಥಾಪಿಸುವ ಹಾಗೂ ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ಅಭಿವೃದ್ದಿಯನ್ನು ಸಾಧಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷರಾದ ಪೆರಿಕಲ್‌ ಎಂ ಸುಂದರ್‌, ಎಫ್‌ಕೆಸಿಸಿಐ ಮಹಿಳಾ ಉದ್ದಿಮೆದಾರರ ಸಮಿತಿಯ ಅಧ್ಯಕ್ಷೆ ರೂಪಾ ರಾಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಸಚಿವರು ವೀಕ್ಷಿಸಿದರು.

English summary
FKCCI with the support of State Government and other Women associations is organizing Women Entrepreneurs day 2020 celebrations ta Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X