• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಯೊಮಿ Mi 11 ಬಿಡುಗಡೆ: ಹೊಸ ಮೊಬೈಲ್ ಫೀಚರ್ಸ್ ತಿಳಿದುಕೊಳ್ಳಿ

|

ಮೊಬೈಲ್ ಪ್ರಿಯರ ಫೇವರಿಟ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಶಿಯೊಮಿ Mi ತನ್ನ 11ನೇ ಸಿರೀಸ್ ಮೊಬೈಲ್ ಬಿಡುಗಡೆಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಈ ತಿಂಗಳ ಆರಂಭದಲ್ಲಿ ಬಿಡುಗಡೆ ಆದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಮೊಬೈಲ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ತಿಳಿಸಲಾಗಿದ್ದು, ಹೊಸ ಫೋನ್ ಸರಣಿಯ ಕುರಿತು ಕೆಲವು ಮಾಹಿತಿ ಈ ಕೆಳಗಿದೆ ಓದಿ.

6.81 ಇಂಚಿನ ಮೊಬೈಲ್‌ ಡಿಸ್‌ಪ್ಲೇ

6.81 ಇಂಚಿನ ಮೊಬೈಲ್‌ ಡಿಸ್‌ಪ್ಲೇ

ಶಿಯೋಮಿ ಮಿ 11 ಸ್ಮಾರ್ಟ್‌ಫೋನ್‌ 1,440x3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.81-ಇಂಚಿನ 2K WQHD ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ನಾಲ್ಕು ಬದಿಗಳಲ್ಲಿ ಬಾಗಿದ ಅಂಚುಗಳನ್ನು ಹೊಂದಿದೆ ಮತ್ತು 2K ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

ರೆಡ್‌ಮಿ 9 ಪವರ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ, ಫೀಚರ್ಸ್ ಇಲ್ಲಿದೆ

108 ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್

108 ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್

ಶಿಯೊಮಿ ಕಂಪನಿಯು Mi 11 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. 1.6 ಮೈಕ್ರಾನ್‌ಗಳ ಪಿಕ್ಸೆಲ್ ಗಾತ್ರದೊಂದಿಗೆ ಹೊಂದಿದೆ, ಜೊತೆಗೆ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿದೆ.

ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್‌ನೊಂದಿಗೆ ಬರಲಿದೆ.

ಹೆಚ್ಚಿನ RAM ಮತ್ತು ಸ್ಟೋರೇಜ್

ಹೆಚ್ಚಿನ RAM ಮತ್ತು ಸ್ಟೋರೇಜ್

ಎಂಐ ಎರಡು ಕ್ಯಾಮೆರಾಗಳು ಉತ್ತಮವಾಗಿರುವ ಸಾಧ್ಯತೆಯನ್ನು ಹೊಂದಿದೆ. ಈ ಎರಡೂ ಫೋನ್‌ಗಳಲ್ಲಿ ಕಂಪನಿಯು 8 ಜಿಬಿ ಎಲ್‌ಪಿಡಿಡಿಆರ್ಎಸ್ RAM ಮತ್ತು 128 ಜಿಬಿ ಸ್ಟೋರೇಜ್ ಸಹ ಒದಗಿಸುತ್ತದೆ.

2020ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಚೀನಾದಲ್ಲದ ಸ್ಮಾರ್ಟ್‌ಫೋನ್‌ಗಳು!

ಮೊಬೈಲ್ ಬೆಲೆ ಎಷ್ಟು?

ಮೊಬೈಲ್ ಬೆಲೆ ಎಷ್ಟು?

8ಜಿಬಿ RAM ಮತ್ತು 128ಜಿಬಿ ಸ್ಟೋರೇಜ್ ಮಾಡೆಲ್‌ಗೆ ಸುಮಾರು 45,000 ರೂ. ನಿಗದಿಪಡಿಸಲಾಗಿದೆ. ಆದರೆ 8ಜಿಬಿ RAM + 256ಜಿಬಿ ಸ್ಟೋರೇಜ್ ಮಾದರಿಗೆ ಸುಮಾರು 48,300 ಮತ್ತು 12ಜಿಬಿ RAM + 256ಜಿಬಿ ಸ್ಟೋರೇಜ್‌ ಆಯ್ಕೆಗೆ ಸುಮಾರು 52,800 ರೂಪಾಯಿ ಬೆಲೆಯನ್ನು ಹೊಂದಿದೆ.

English summary
Xiaomi just dropped the world’s first smartphone to be powered by the Snapdragon 888 SoC. Xiaomi broke from modern tradition and only unveiled one flagship smartphone in China
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X