ಸನ್ ನೆಟ್ವರ್ಕ್ 33 ಟಿವಿ ವಾಹಿನಿ, 45 ಎಫ್ ಎಂ ಬಂದ್?

ನವದೆಹಲಿ, ಜೂ.07: ಮಾರನ್ ಬ್ರದರ್ಸ್ ಒಡೆತನದ ಸನ್ ನೆಟ್ವರ್ಕ್ಸ್ ಸಂಸ್ಥೆಗ್ ಮಾರಕವಾಗುವ ಸುದ್ದಿಯನ್ನು ಕೇಂದ್ರ ಗೃಹ ಸಚಿವಾಲಯ ಕೊಟ್ಟಿದೆ. ಸನ್ ನೆಟ್ವರ್ಕ್ ಗೆ ಸೇರಿದ 33 ಟಿವಿ ಚಾನೆಲ್ ಹಾಗೂ 45 ಎಫ್ ಎಂ ವಾಹಿನಿಗಳಿಗೆ ಭದ್ರತಾ ಅನುಮತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದೆ. ಹೀಗಾಗಿ ಸನ್ ನೆಟ್ವರ್ಕ್ ಸಂಸ್ಥೆ ಪರವಾನಗಿ ರದ್ದು, ಪ್ರಸಾರ ಸ್ಥಗಿತದ ಭೀತಿ ಎದುರಾಗಿದೆ.

ಭಾರತದ ಅತಿದೊಡ್ಡ ಟಿವಿ ಜಾಲ ಹೊಂದಿರುವ ಸಂಸ್ಥೆಗಳ ಪೈಕಿ ಸನ್ ನೆಟ್‍ವರ್ಕ್ ಕೂಡಾ ಒಂದಾಗಿದೆ. ಸುಮಾರು 95 ದಶಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪುತ್ತಿರುವ ಮಾರನ್ ಸೋದರರ ಸನ್ ನೆಟ್ವರ್ಕ್ ಇತ್ತೀಚೆಗೆ ತಮ್ಮ ಟಿವಿ ಚಾನೆಲ್ ಹಾಗೂ ಎಫ್ ಎಂ ವಾಹಿನಿಗಳ ಭದ್ರತಾ ಪರವಾನಗಿ ನವೀಕರಣ ಅರ್ಜಿ ಸಲ್ಲಿಸಿದ್ದರು.

ಅದರೆ, ಆರ್ಥಿಕ ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ಕಲಾನಿಧಿ ಮಾರನ್ ಅವರ ಸಂಸ್ಥೆ ವಿಫಲವಾಗಿದೆ ಎಂದು ಹೇಳಿ ಗೃಹ ಸಚಿವಾಲಯ ಪರವಾನಗಿ ನವೀಕರಿಸಲು ನಿರಾಕರಿಸಿದೆ. [ಮಾರನ್ ಪರಮಾಪ್ತರಿಗೆ ಸಿಬಿಐ ಹೊಡೆತ]

Sun TV

ಈ ಬಗ್ಗೆ ಗೃಹ ಸಚಿವಾಲಯದಿಂದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಅಧಿಕೃತ ಆದೇಶ ರವಾನೆಯಾಗಿದೆ. ಭ್ರಷ್ಟಾಚಾರ, ಮನಿ ಲಾಂಡ್ರಿಂಗ್ ಹಾಗೂ ಅಕ್ರಮವಾಗಿ ಟೆಲಿಕಾಂ ಸಂಪರ್ಕ ಹೊಂದಿದ ಆರೋಪ ಇರುವುದರಿಂದ ಸನ್ ನೆಟ್ವರ್ಕ್ ಸಲ್ಲಿಸಿದ ಲೈಸನ್ ನವೀಕರಣ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. [ಮಾರನ್ ಆಸ್ತಿ ಜಪ್ತಿಗೆ ಮುಂದಾದ 'ಇಡಿ']

ಹೀಗಾಗಿ ಸನ್ ನೆಟ್ವರ್ಕ್ ಒಡೆತನದ 33ಕ್ಕೂ ಅಧಿಕ ಟಿವಿ ಚಾನೆಲ್ ಗಳು ಹಾಗೂ 45ಕ್ಕೂ ಅಧಿಕ ಎಫ್ ಎಂ ಚಾನೆಲ್, ಸೂರ್ಯನ್ ಎಫ್ ಎಂ ಹಾಗೂ ರೆಡ್ ಎಫ್ ಎಂ ಎಲ್ಲವೂ ಪ್ರಸಾರ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿವೆ.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು. ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+