ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ: ಮೊದಲ ಮೂವರು ಉದ್ಯಮಿಗಳ ವಿವರ

By Mahesh
|
Google Oneindia Kannada News

ನವದೆಹಲಿ, ಅ.27: ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಭಾರತೀಯ ಮೂಲದ ಖಾತೆದಾರರ ವಿವರಗಳನ್ನು ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ಸೋಮವಾರ ಸಲ್ಲಿಸಿದೆ. ಈ ಪೈಕಿ ಮೂವರು ಉದ್ಯಮಿಗಳ ಹೆಸರುಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ.

ಸುಪ್ರೀಂಕೋರ್ಟಿಗೆ ಎನ್ ಡಿಎ ಸರ್ಕಾರ ಸೋಮವಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಇನ್ನೂ 18 ಜನರ ಹೆಸರಿದೆ ಎಂಬ ಸುದ್ದಿಯೂ ಇದೆ. ಮೊದಲ ಪಟ್ಟಿಯಲ್ಲಿ ಯಾವುದೇ ರಾಜಕಾರಣಿಗಳ ಹೆಸರಿಲ್ಲ. [ಕಪ್ಪು ಹಣ ಖಾತೆದಾರರ ಹೆಸರು ಬಹಿರಂಗ]

ಮುಂದಿನ ಪಟ್ಟಿಯಲ್ಲಿ ನಾಲ್ವರು ಪ್ರಮುಖ ಕಾಂಗ್ರೆಸ್ ರಾಜಕಾರಣಿಗಳ ಹೆಸರುಗಳಿವೆ ಎಂಬ ಗಾಳಿಸುದ್ದಿಯೂ ಹಬ್ಬಿದೆ. ಸರ್ಕಾರಕ್ಕೆ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಸರಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ. ನಿರೀಕ್ಷೆಯಂತೆ ಮೂವರು ಉದ್ಯಮಿಗಳು ಆರೋಪವನ್ನು ತಳ್ಳಿಹಾಕಿದ್ದಾರೆ. ಉದ್ಯಮಿಗಳ ವಿವರ ಇಂತಿದೆ;

ಗಣಿಸಂಸ್ಥೆ ಒಡತಿ ರಾಧಾ ಎಸ್ ಟಿಂಬಲೋ

ಗಣಿಸಂಸ್ಥೆ ಒಡತಿ ರಾಧಾ ಎಸ್ ಟಿಂಬಲೋ

ಗೋವಾ ಮೂಲದ ಟಿಂಬ್ಲೋ ಕಂಪನಿ ಪಾಲುದಾರಿಕೆ ಆಧಾರಿತ ಗಣಿಗಾರಿಕೆ ಸಂಸ್ಥೆಯಾಗಿದೆ. ರಾಧಾ ಎಸ್ ಟಿಂಬಲೋ ಒಡೆತನದ ಈ ಕಂಪನಿ ಮೇಲೆ ಈಗಾಗಲೇ ಅಕ್ರಮ ಗಣಿಗಾರಿಕೆ ಆರೋಪವಿದ್ದು, ತನಿಖೆ ನಡೆಯುತ್ತಿದೆ.

ಸಿಇಸಿ ನೀಡಿರುವ ವರದಿ ಪ್ರಕಾರ ಬರ್ದ್ರುದ್ದೀನ್ ಹುಸೇನ್ ಭಾಯಿ ಮವಾನಿ ಹೆಸರಿನಲ್ಲಿ ಗಣಿಗಾರಿಕೆ ಲೈಸನ್ಸ್ ಪಡೆಯಲಾಗಿದ್ದು, ಈ ವ್ಯಕ್ತಿ ಪಾಕಿಸ್ತಾನಕ್ಕೆ ತೆರಳಿದ ಮೇಲೆ ಸಂಸ್ಥೆಯ ಪಾಲುದಾರಿಕೆಯ ಸಂಪೂರ್ಣ ಹಕ್ಕನ್ನು ಟಿಂಬ್ಲೊ ಕುಟುಂಬ ತನ್ನದಾಗಿಸಿಕೊಂಡು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದೆ.

ರಾಧಾ ಎಸ್ ಟಿಂಬಲೋ ನೀಡಿರುವ ಪ್ರತಿಕ್ರಿಯೆ

ನಾನು ಇನ್ನೂ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಕಾಪಿ ನೋಡಿಲ್ಲ. ನೋಡಿದ ಮೇಲೆ ಈ ಬಗ್ಗೆ ಪ್ರತಿಕ್ರಿಯಿಸುವೆ.

ಪ್ರದೀಪ್ ಬರ್ಮನ್ ಡಾಬರ್ ಇಂಡಿಯಾ

ಪ್ರದೀಪ್ ಬರ್ಮನ್ ಡಾಬರ್ ಇಂಡಿಯಾ

ಡಾಬರ್ ಇಂಡಿಯಾ ಸಂಸ್ಥೆಯ ನಿರ್ದೇಶಕರಾಗಿರುವ ಪ್ರದೀಪ್ ಬರ್ಮನ್ ಅವರು ಎನ್ನಾರೈ ಆಗಿದ್ದಾಗ ಕಾನೂನು ಪ್ರಕಾರವಾಗಿ ಅಕೌಂಟ್ ಓಪನ್ ಮಾಡಲಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಇದೆ ಹಾಗೂ ತೆರಿಗೆ ಕಟ್ಟಲಾಗುತ್ತಿದೆ ಎಂದು ಸಂಸ್ಥೆ ಪ್ರತಿಕ್ರಿಯಿಸಿದೆ.

1884ರಲ್ಲಿ ಸಣ್ಣ ಆಯುರ್ವೇದ ಕಂಪನಿಯಾಗಿ ಹುಟ್ಟಿಕೊಂಡ ಡಾಬರ್ ಇಂಡಿಯಾ ಸಂಸ್ಥೆಯಲ್ಲಿ ಬರ್ಮನ್ ಕುಟುಂಬ ಸುಮಾರು ಶೇ 75ರಷ್ಟು ಪಾಲುದಾರಿಕೆ ಹೊಂದಿದೆ. ಡಾಬರ್ ಆಯುರ್ವೇದ ಉತ್ಪನ್ನಗಳಲ್ಲದೆ ವಾಟಿಕಾ, ಫೆಮ್, ಹಾಜಮೋಲ ಮುಂತಾದ ಉತ್ಪನ್ನಗಳು ಜನಪ್ರಿಯವಾಗಿವೆ.

ಪ್ರದೀಪ್ ಬರ್ಮನ್ ಪ್ರತಿಕ್ರಿಯೆ

ಪ್ರದೀಪ್ ಬರ್ಮನ್ ಖಾತೆ ಬಗ್ಗೆ ಡಾಬರ್ ಸಂಸ್ಥೆ ನೀಡಿದ ಪ್ರತಿಕ್ರಿಯೆ

ಪಂಕಜ್ ಲೋಧಿಯಾ ಶ್ರೀಜಿ ಸಮೂಹ

ಪಂಕಜ್ ಲೋಧಿಯಾ ಶ್ರೀಜಿ ಸಮೂಹ

ಶ್ರೀಜಿ ಸಮೂಹದ ಪಂಕಜ್ ಲೋಧಿಯಾ ಅವರು ಷೇರು ಮಾರುಕಟ್ಟೆ ತಜ್ಞರಾಗಿದ್ದು ರಾಜ್ ಕೋಟ್ ಮೂಲದವರಾಗಿದ್ದಾರೆ. ರಿಯಲ್ ಎಸ್ಟೇಟ್ ಮಾರುಕಟ್ಟೆ ನಂತರ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದ ಪಂಕಜ್ ಅವರ ತಂದೆ ಚಿಮನ್ ಲಾಲ್ ಲಾಜಿ ಭಾಯಿ ಲೋಧಿಯಾ, ಸೋದರ ಕೌಶಿಕ್ ಚಿಮನ್ ಲಾಲ್ ಲೋಧಿಯಾ

ಪಂಕಜ್ ಲೋಧಿಯಾ ಪ್ರತಿಕ್ರಿಯೆ

ಸ್ವಿಸ್ ಬ್ಯಾಂಕಿನಲ್ಲಿ ನಾನು ಖಾತೆಯನ್ನು ಹೊಂದಿಲ್ಲ ಎಂದು ಪಂಕಜ್ ಹೇಳಿದ್ದಾರೆ.

English summary
The NDA government on Monday submitted the names of three people to the Supreme Court, saying that they held accounts with Swiss banks. Here’s a quick guide to the three people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X