ಗಣೇಶ ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಸಿಹಿಸುದ್ದಿ; ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ; ಇಲ್ಲಿದೆ ಇಂದಿನ ನಿಖರ ಬೆಲೆ

ಗಣೇಶ ಚತುರ್ಥಿಯ ಸಡಗರ, ಭಕ್ತಿ-ಭಾವದ ಜೊತೆಗೆ ಎಲ್ಲಿ ನೋಡಿದರೂ ಹಬ್ಬದ ಕಳೆ ಕಂಗೊಳಿಸುತ್ತಿದೆ. ಬೀದಿ ಬೀದಿಗಳಲ್ಲಿ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ, ಮೋದಕದ ಘಮ, ಹಾಗೂ ಭಕ್ತರ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬವೆಂದರೆ ಕೇವಲ ಪೂಜೆ ಪುನಸ್ಕಾರಗಳಲ್ಲ, ಅದು ಹೊಸ ಬಟ್ಟೆ, ಸಿಹಿ ತಿನಿಸುಗಳು ಹಾಗೂ ವಿಶೇಷವಾಗಿ ಚಿನ್ನಾಭರಣಗಳ ಖರೀದಿಯ ಸಂಭ್ರಮವೂ ಹೌದು.

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬದ ದಿನದಂದು ಚಿನ್ನ ಖರೀದಿಸುವುದು ಅತ್ಯಂತ ಮಂಗಳಕರ ಹಾಗೂ ಶ್ರೇಷ್ಠ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಗಣೇಶ ಹಬ್ಬದ ಈ ಶುಭ ಸಂದರ್ಭದಲ್ಲಿ ಚಿನ್ನದಂಗಡಿಯಲ್ಲಿ ಗ್ರಾಹಕರ ದಂಡೇ ಸೇರಿರುತ್ತದೆ.

MCX Gold Price Today September 14 2026 Latest Gold And Silver Rates In Bengaluru amp amp Other Cities

ನೀವು ಕೂಡ ಇಂದು ನಿಮ್ಮ ಪ್ರೀತಿಪಾತ್ರರಿಗೆ ಅಥವಾ ನಿಮ್ಮ ಮನೆಗೆ ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ನೀವು ಮನೆಯಿಂದ ಹೊರಡುವ ಮುನ್ನ ಇಂದಿನ (ಸೆಪ್ಟೆಂಬರ್ 14, 2026) ಮಾರುಕಟ್ಟೆಯ ಬೆಲೆಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಕುರಿತು ಹೇಳುವುದಾದರೆ, ಗ್ರಾಹಕರಿಗೆ ತುಸು ಸಮಾಧಾನಕರ ಸುದ್ದಿಯಿದೆ. ಹಬ್ಬದ ದಿನಗಳಲ್ಲಿ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆ. ಆದರೆ ಇಂದು ಜಾಗತಿಕ ಮಾರುಕಟ್ಟೆ ಹಾಗೂ ಎಂಸಿಎಕ್ಸ್ ವಹಿವಾಟಿನ ಪ್ರಭಾವದಿಂದ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

ಇಂದಿನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ. 22 ಕ್ಯಾರಟ್ ಆಭರಣದ ಚಿನ್ನದ ಬೆಲೆ 1 ಗ್ರಾಂಗೆ 14,125 ರೂಪಾಯಿ ಆಗಿದೆ. ಅದೇ ರೀತಿ ಶುದ್ಧ ಚಿನ್ನ ಎನಿಸಿಕೊಂಡಿರುವ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯು 15,409 ರೂಪಾಯಿಯಷ್ಟಿದೆ.

ಇನ್ನು ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿಯ ದರದಲ್ಲೂ ಸಣ್ಣ ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 2,44,900 ರೂಪಾಯಿಗಳಾಗಿವೆ.

ನಿನ್ನೆಗೆ (ಸೆಪ್ಟೆಂಬರ್ 13) ಹೋಲಿಸಿದರೆ ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,170 ಇತ್ತು, ಇಂದು ಅದು ₹14,125 ಕ್ಕೆ ಇಳಿದಿದೆ. ಅಂದ್ರೆ ಒಂದು ಗ್ರಾಂಗೆ ₹45 ರೂಪಾಯಿ ಕಡಿಮೆಯಾಗಿದೆ.

ಅದೇ ರೀತಿ, ನಿನ್ನೆ ಪ್ರತಿ ಕೆಜಿ ಬೆಳ್ಳಿಯ ದರ ₹2,45,000 ಇತ್ತು, ಇಂದು ₹2,44,900 ಕ್ಕೆ ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಲೆಕ್ಕಾಚಾರದಲ್ಲಿ ನೋಡಿದರೆ, 22 ಕ್ಯಾರಟ್ ಚಿನ್ನದ ಮೇಲೆ ₹450 ರೂಪಾಯಿಗಳಷ್ಟು ಉಳಿತಾಯವಾಗಲಿದೆ.

ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ

ಬೆಂಗಳೂರು ಮಾತ್ರವಲ್ಲದೆ, ದೇಶದ ಇತರ ಪ್ರಮುಖ ನಗರಗಳಲ್ಲೂ ಚಿನ್ನದ ದರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಕಾಣಬಹುದು. ಆಯಾ ರಾಜ್ಯಗಳ ತೆರಿಗೆ ಹಾಗೂ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಈ ಬೆಲೆಗಳು ನಿರ್ಧಾರವಾಗುತ್ತವೆ. ಪ್ರಮುಖ ನಗರಗಳ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಹೀಗಿದೆ:

* ಬೆಂಗಳೂರು - ₹14,125 ರೂಪಾಯಿ

* ದೆಹಲಿ - ₹14,140 ರೂಪಾಯಿ

* ಚೆನ್ನೈ - ₹14,125 ರೂಪಾಯಿ

* ಮುಂಬೈ - ₹14,125 ರೂಪಾಯಿ

* ಹೈದರಾಬಾದ್ - ₹14,125 ರೂಪಾಯಿ

* ಅಹಮದಾಬಾದ್ - ₹14,130 ರೂಪಾಯಿ

* ಪುಣೆ - ₹14,125 ರೂಪಾಯಿ

* ಕೋಲ್ಕತ್ತಾ - ₹14,125 ರೂಪಾಯಿ

ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ MCX ಮಾರುಕಟ್ಟೆಯ ಟ್ರೆಂಡ್ ಗ್ರಾಹಕರಿಗೆ ತುಸು ಖುಷಿ ತಂದಿದೆ. ಚಿನ್ನ ಮತ್ತು ಬೆಳ್ಳಿ ದರದಲ್ಲಿನ ಈ ಸಣ್ಣ ಇಳಿಕೆಯು ಹಬ್ಬದ ಶಾಪಿಂಗ್‌ಗೆ ಮತ್ತಷ್ಟು ಹುರುಪು ನೀಡಿದ್ದು, ಮಧ್ಯಮ ವರ್ಗದ ಜನರಿಗೂ ಆಭರಣ ಖರೀದಿಗೆ ಸಣ್ಣ ಅವಕಾಶ ಮಾಡಿಕೊಟ್ಟಿದೆ.

ಗಮನಿಸಿ: ಈ ಮೇಲಿನ ದರದಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್‌ ಚಾರ್ಜ್ಸ್‌ ಸೇರಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+