Gold Price On May 22: ಚಿನ್ನ, ಬೆಳ್ಳಿ ಇಳಿಕೆ: ಕೊಳ್ಳಲು ಇದುವೆ ಬೆಸ್ಟ್ ಟೈಮ್
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ, ಇಳಿಕೆ ಆಗುತ್ತಿದೆ. ಆದರೂ ಜನರಿಗೆ ಇದರ ಮೇಲಿನ ಮೋಹವೇನು ಕಡಿಮೆ ಆಗಿಲ್ಲ. ದಿನವೂ ಚಿನ್ನವನ್ನು ಖರೀದಿ ಮಾಡುವ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಬೇಡಿಕೆ ಹೆಚ್ಚಾದಾಗ, ಅದರ ಬೆಲೆಯಲ್ಲೂ ನಿಶ್ಚಿತವಾಗಿ ಏರಿಳಿತಗಳು ಕಂಡು ಬರುತ್ತವೆ. ಭಾರತದಲ್ಲೂ ಈಗ ಚಿನ್ನದ ದರ ಹಾವು ಏಣಿ ಆಟವನ್ನು ನಡೆಸುತ್ತಲೆ ಇರುತ್ತದೆ. ಇಂದಿನ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕೊಂಚ ಇಳಿಮುಖವಾಗಿದ್ದು, ಗ್ರಾಹಕನಿಗೆ ಕೊಳ್ಳಲು ಇದು ಬೆಸ್ಟ್ ಟೈಮ್.
ಚಿನ್ನದ ಬೆಲೆ ಇಳಿಕೆ ಹಾಗೂ ಏರಿಕೆ ತಾತ್ಕಾಲಿಕವಾಗಿದೆ. ಷೇರು ಮಾರುಕಟ್ಟೆಯ ಏರಿತಕ್ಕೆ ತಕ್ಕಂತೆ ಇದರ ಬೆಲೆಯಲ್ಲೂ ಏರಿಳಿತಗಳಾಗುತ್ತವೆ. ಬುಧವಾರ (ಮೇ 22)ರಂದು ಚಿನ್ನದ ಬೆಲೆ ತನ್ನ ಒಯ್ಯಾರವನ್ನು ತೋರಿಸಿದೆ. ಚಿನ್ನ 60 ರೂಪಾಯಿ ಇಳಿದಿದ್ದು, ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಣದುಬ್ಬರ ಕಡಿಮೆ ಆಗಿದೆ. ಅಲ್ಲದೆ ಅಮೆರಿಕಾದಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿ ಆಗಲಿದೆ.

ಭಾರತದ ಮಾರುಕಟ್ಟೆಯಲ್ಲಿ ಸದ್ಯ 10 ಗ್ರಾಮ್ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 74,510 ಆಗಿದೆ. ಇನ್ನು 22 ಕ್ಯಾರಟ್ ಚಿನ್ನದ ಬೆಲೆ 68,300 ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ 68,300 ಆಗಿದ್ದು, ನಗರದಲ್ಲಿ ಬೆಳ್ಳಿಯ ಬೆಲೆ 9250 ಇದೆ. ಇನ್ನು ಭಾರತದಲ್ಲಿ ಬೆಳ್ಳಿಯ ದರ 100 ಗ್ರಾಮ್‌ಗೆ 9460 ರೂಪಾಯಿ ಇದೆ.
ಇಂದು ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್‌ನ 10 ಗ್ರಾಮ್ ಚಿನ್ನ- 68,300 ರೂ.
- 24 ಕ್ಯಾರಟ್‌ನ 10 ಗ್ರಾಮ್ ಚಿನ್ನ- 74,510 ರೂ.
- 10 ಗ್ರಾಮ್ ಬೆಳ್ಳಿ- 925 ರೂ.
ಭಾರತದಲ್ಲಿ ಚಿನ್ನ ಬೆಳ್ಳಿ ಬೆಲೆ
- 22 ಕ್ಯಾರಟ್‌ನ 10 ಗ್ರಾಮ್ ಚಿನ್ನ- 68,300 ರೂ.
- 24 ಕ್ಯಾರಟ್‌ನ 10 ಗ್ರಾಮ್ ಚಿನ್ನ- 74,510 ರೂ.
- 10 ಗ್ರಾಮ್ ಬೆಳ್ಳಿ- 925 ರೂ.
ವಿವಿಧ ನಗರದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ
- ಚೆನ್ನೈ- 68,600 ರೂ.
- ಬೆಂಗಳೂರು- 68,300 ರೂ.
- ಮುಂಬೈ- 68,300 ರೂ.
- ಅಹಮದಾಬಾದ್- 68,350 ರೂ.
- ಕೇರಳ- 68,300 ರೂ.
- ಕೋಲ್ಕತ್ತಾ- 68,300 ರೂ.
- ಭುವನೇಶ್ವರ್- 68,300 ರೂ.
- ಲಕ್ನೋ- 68,450 ರೂ.
- ಜೈಪುರ್- 68,450 ರೂ.












Click it and Unblock the Notifications