• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಸುಜುಕಿ ಕಾರುಗಳಿಗೆ ಜೂನ್ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್

|
Google Oneindia Kannada News

ನವದೆಹಲಿ, ಜೂನ್ 6: ಕೊರೊನಾವೈರಸ್‌ನ ಎರಡನೆ ಅಲೆಯಿಂದ ಆಟೋ ಮೊಬೈಲ್ ಉದ್ಯಮದ ಮೇಲೆಯೂ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಿನ ಮಾರಾಟದಲ್ಲಿ ಸಾಕಷ್ಟು ಕುಸಿತವಾಗಿದೆ. ಹೀಗಾಗೀ ಭಾರತದ ಪ್ರಮುಖ ಕಾರು ಉತ್ಪಾದಕ ಕಂಪನಿಯಾದ ಮಾರುತಿ ಸುಜುಕಿ ಜೂನ್ ತಿಂಗಳಿನಲ್ಲಿ ಮತ್ತೆ ಮಾರಾಟದಲ್ಲಿ ಚೇತರಿಕೆ ಕಾಣಲು ಕ್ರಮಗಳನ್ನು ಕೈಗೊಂಡಿದೆ.

ಮಾರುತಿ ಸುಜುಕಿ ಕಂಪನಿ ತನ್ನ ಕೆಲ ಪ್ರಮುಖ ಕಾರುಗಳಿಗೆ ಜೂನ್ ತಿಂಗಳಿನಲ್ಲಿ ಉತ್ತಮ ಡಿಸ್ಕೌಂಟ್ ಘೋಷಿಸಿದೆ. ಇದರಲ್ಲಿ ಮಾರುತಿ ಸುಜುಕಿಯ ಪ್ರಖ್ಯಾತ ಕಾರುಗಳಾದ ಆಲ್ಟೋ, ಎಸ್-ಪ್ರೆಸ್ಸೋ, ಸೆಲೆರಿಯೋ, ಡಿಸೈರ್, ಈಕೋ ಮತ್ತು ಎರ್ಟಿಗಾ ಕೂಡ ಒಳಗೊಂಡಿದೆ.

ಹಾಗಾದರೆ ಯಾವ ಮಾದರಿಯ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ ಎಂಬ ವಿವರಗಳನ್ನು ಮುಂದೆ ಓದಿ

ಆಲ್ಟೋ: ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರು ಆಲ್ಟೋಗೆ 20,000 ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಸಿಎನ್‌ಜಿ(ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಗ್ರಾಹಕರಿಗೆ ಈ ಡಿಸ್ಕೌಂಟ್ ದೊರೆಯಲಿದೆ. ಎಕ್ಸ್‌ಚೇಂಚ್‌ ಕಾರುಗಳಿಗೆ ಕೂಡ ಹೆಚ್ಚುವರಿಯಾಗಿ 15,000 ರೂಪಾಯಿ ಡಿಸ್ಕೌಂಟ್ ದೊರೆಯಲಿದೆ. ಇನ್ನು ಅರ್ಹ ಗ್ರಾಹಕರಿಗೆ 4000 ರೂಪಾಯಿಯಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಪಡೆಯುವ ಅವಕಾಶವೂ ಇದೆ.

ಕೊರೊನಾ ನಿರ್ಬಂಧಗಳ ನಡುವೆ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ರೂ ಮೀರಿದ ಜಿಎಸ್‌ಟಿ ಆದಾಯಕೊರೊನಾ ನಿರ್ಬಂಧಗಳ ನಡುವೆ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ರೂ ಮೀರಿದ ಜಿಎಸ್‌ಟಿ ಆದಾಯ

ಎಸ್ ಪ್ರೆಸ್ಸೋ: ಈ ಮಾದರಿಯ ಕಾರಿನ ಮೇಲೆ ಮಾರುತಿ ಸುಜುಕಿ ಕಂಪನಿ ಜೂನ್ ತಿಂಗಳಿನಲ್ಲಿ 20,000 ರೂಪಾಯಿಯ ಡಿಸ್ಕೌಂಡ್ ಘೋಷಿಸಿದೆ. ಎಕ್ಸ್‌ಚೇಂಚ್ ಕಾರಿಗಳಿಗೆ 15,000 ಡಿಸ್ಕೌಂಟ್ ಘೋಷಿಸಿದ್ದು ಅರ್ಹ ಗ್ರಾಹಕರು 4000 ರೂ.ನ ಕಾರ್ಪೊರೇಟ್ ಡಿಸ್ಕೌಂಟ್ ಪಡೆಯುವ ಅವಕಾಶಗಳು ಇದೆ.

ಸೆಲೆರಿಯೋ: ಈ ಮಾದರಿಯ ಕಾರುಗಳಿಗೆ ಯಾವುದೇ ಡಿಸ್ಕೌಂಡ್ ಘೋಷಣೆ ಮಾಡಿಲ್ಲ. ಆದರೆ ಎಕ್ಸ್‌ಚೇಂಜ್ ಗ್ರಾಹಕರು ತಮ್ಮ ಹಳೆಯ ಕಾರುಗಳಿಗೆ 15,000 ರೂಪಾಯಿಯ ಬೋನಸ್ ಆಫರ್ ನೀಡಲಾಗಿದೆ.

ಸ್ವಿಫ್ಟ್: ಮಾರುತಿ ಸುಜುಕಿ ಕಂಪನಿಯ ಖ್ಯಾತ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಕಾರುಗಳಿಗೆ 25,000ದ ವರೆಗೂ ಆಫರ್‌ಅನ್ನು ಕಂಪನಿ ಘೋಷಣೆ ಮಾಡಿದೆ. ಬೇಸಿಕ್ ಮಾದರಿಯ ಪೆಟ್ರೋಲ್‌ ಕಾರುಗಳಾದ ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ಮಾದರಿಗಳಿಗೆ ಅತಿ ಹೆಚ್ಚು 25,000 ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಜೆಡ್‌ಎಕ್ಸ್‌ಐ ಹಾಗೂ ಜೆಡ್‌ಎಕ್ಸ್‌ಐ+ ವೇರಿಯೆಂಟ್‌ನ ಕಾರುಗಳಿಗೆ 10,000 ರೂಪಾಯಿಯ ಡಿಸ್ಕೌಂಟ್ ನೀಡಿದೆ. ಎಕ್ಸ್‌ಚೇಂಜ್‌ಗೆ 20,000 ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ 4000 ರೂಪಾಯಿ ಸ್ವಿಫ್ಟ್ ಕಾರಿನಲ್ಲಿಯೂ ದೊರೆಯುತ್ತದೆ.

ಡಿಸೈರ್: ಮಾರುತಿ ಸುಜುಕಿಯ ಸೆಡಾನ್ ಕಾರು ಡಿಸೈರ್ ಕೊಂಡುಕೊಳ್ಳುವ ಗ್ರಾಹಕರಿಗೆ ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ಮಾದರಿಗಳಿಗೆ 10,000 ಆಫರ್ ನೀಡಿದ್ದು ಜೆಡ್‌ಎಕ್ಸ್‌ಐ ಹಾಗೂ ಜೆಡ್‌ಎಕ್ಸ್‌ಐ+ ವೇರಿಯೆಂಟ್‌ಗಳಿಗೆ 8,000 ರೂಪಾಯಿಯ ಆಫರ್ ದೊರೆಯಲಿದೆ. ಎಕ್ಸ್‌ಚೇಂಜ್ ಗ್ರಾಹಕರು 20,000 ಬೋನಸ್ ಹಾಗೂ ಅರ್ಹ ಗ್ರಾಹಕರಿಗೆ 4000 ರೂಪಾಯಿಯಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಪಡೆಯುವ ಅವಕಾಶವೂ ನೀಡಲಾಗಿದೆ.

ಎರ್ಟಿಗಾ: ಎರ್ಟಿಗಾ ಕಾರು ಕೊಂಡುಕೊಳ್ಳುವ ಅರ್ಹ ಗ್ರಾಹಕರಿಗೆ 4,000 ರೂಪಾಯಿಯ ಕಾರ್ಪೊರೇಟ್ ಡಿಸ್ಕೌಂಟ್ ಮಾತ್ರವೇ ದೊರೆಯಲಿದೆ.

ಈಕೋ: ಮಾರುತಿ ಸುಜುಕಿ ಈಕೋ ಕಾರುಗಳಿಗೆ 10,000 ರೂಪಾಯಿಯ ಡಿಸ್ಕೌಂಟ್ ಘೋಷಿಸಿದೆ ಮತ್ತು ಕಾರ್ಪೊರೇಟ್ ಡಿಸ್ಕೌಂಡ್ ಆಗಿ 4000 ರೂಪಾಯಿ ಪಡೆಯುವ ಅವಕಾಶವಿದೆ. ಎಕ್ಸ್‌ಚೇಂಜ್‌ ಗ್ರಾಹಕರಿಗೆ 15,000 ಬೋನಸ್ ಘೋಷಣೆ ಮಾಡಿದೆ.

English summary
Maruti Suzuki announced discounts on the Alto and Swift Dzire for the month of June. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X