ಮೇಕ್ ಇನ್ ಇಂಡಿಯಾ: ಫಾಕ್ಸ್ಕಾನ್ನಿಂದ 500 ಕೋಟಿ ಡಾಲರ್
ಮುಂಬೈ, ಆಗಸ್ಟ್. 10: ಮೇಕ್ ಇನ್ ಇಂಡಿಯಾ ಅಭಿಯಾನದ ಆರಂಭಿಕ ಹೆಜ್ಜೆಯಾಗಿ ತೈವಾನ್ ಮೂಲದ ಕಂಪನಿ ಫಾಕ್ಸ್ ಕಾನ್ ಆಂಧ್ರ ಪ್ರದೇಶದಲ್ಲಿ ಘಟಕವೊಂದನ್ನು ನಿರ್ಮಾಣ ಮಾಡಿ ಚೀನಾ, ಅಮೆರಿಕ ಮೂಲದ ಮೊಬೈಲ್ ಉತ್ಪಾದನೆ ಮಾಡತೊಡಗಿದ್ದು ಗೊತ್ತೆ ಇದೆ. ಈಗ ಫಾಕ್ಸ್ ಕಾನ್ ಮಹಾರಾಷ್ಟ್ರದಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ.
ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಮುಂದಾಗಿರುವ ಫಾಕ್ಸ್ಕಾನ್ ಸುಮಾರು 31,868.72 ಕೋಟಿ ರೂ. (500 ಕೋಟಿ ಡಾಲರ್) ಹೂಡಿಕೆಯನ್ನು ಮಹಾರಾಷ್ಟ್ರದಲ್ಲಿ ಮಾಡಲಿದೆ. ಫಾಕ್ಸ್ ಕಾನ್ ಘಟಕ ಸ್ಥಾಪನೆಗೆ ಮಹಾರಾಷ್ಟ್ರ ಸರ್ಕಾರ ಪುಣೆ ಸಮೀಪ 1,500 ಎಕರೆ ಭೂಮಿ ನೀಡಿದೆ. ಘಟಕ ಸ್ಥಾಪನೆಯಿಂದ ಸುಮಾರು 50 ಸಾವಿರ ಜನರಿಗೆ ಉದ್ಯೋಗವಕಾಶ ತೆರೆದುಕೊಳ್ಳಲಿದೆ.[ಮೇಕ್ಇನ್ ಇಂಡಿಯಾ: ಉತ್ಪಾದನೆ ಆರಂಭಿಸಿದ ತೈವಾನ್ ಕಂಪನಿ]

ಆಂಧ್ರದ ಶ್ರೀ ಸಿಟಿಯ ಏಳು ನೂರು ಏಕರೆ ಜಾಗದಲ್ಲಿ ಈಗಾಗಲೇ ಘಟಕ ನಿರ್ಮಾಣವಾಗಿದ್ದು ಅಲ್ಲಿ ಮೊಬೈಲ್ ಉತ್ಪಾದನೆ ಆರಂಭವಾಗಿದೆ. ಚೀನಾದಲ್ಲಿ ತಯಾರಾಗುವ ಮೊಬೈಲ್ ನಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಇಲ್ಲಿಯೇ ತಯಾರು ಮಾಡಲಾಗುತ್ತಿದೆ.[ಮೇಕ್ ಇನ್ ಇಂಡಿಯಾ ಎಂದರೇನು]
ಉತ್ಪನ್ನಗಳ ಮಾರುಕಟ್ಟೆ ವಿಸ್ತಾರಕ್ಕೆ ಆನ್ ಲೈನ್ ದಿಗ್ಗಜರಾದ ಸ್ನ್ಯಾಪ್ ಡೀಲ್ ಮತ್ತು ಕೆಲ ರಿಟೈಲ್ ಉದ್ಯಮಗಳೊಂದಿಗೂ ಹೊಂದಾಣಿಕೆ ಮಾತುಕತೆ ನಡೆದಿದೆ ಎಂದು ಕಂಪನಿ ಅಧ್ಯಕ್ಷ ವಿನ್ಸೆಂಟ್ ಥೊಂಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಮಾತು ನೀಡಿದಂತೆ ಒಂದೊಂದೆ ಕಂಪನಿಗಳು ಭಾರತದಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಲು ಮುಂದಾಗುತ್ತಿವೆ.












Click it and Unblock the Notifications