ಮ್ಯಾಗಿ ಮ್ಯಾಜಿಕ್: 21 ದಿನದಲ್ಲಿ 50 ಮಿಲಿಯನ್ ಮಾರಾಟ
ನವದೆಹಲಿ, ಡಿಸೆಂಬರ್, 02- ನಿಷೇಧದ ನಂತರ ತಿರುಗಿ ಬಂದ ಮ್ಯಾಗಿಗೆ ಜನ ಭರ್ಜರಿ ಸ್ವಾಗತವನ್ನೇ ನೀಡಿದ್ದಾರೆ. ಮಾರುಕಟ್ಟೆಗೆ ಪುನಃ ಪ್ರವೇಶ ಮಾಡಿದ ಮೇಲೆ 21 ದಿನಗಳಲ್ಲಿ 50 ಮಿಲಿಯನ್ ಮ್ಯಾಗಿ ಮಾರಾಟವಾಗಿದ್ದು ಮ್ಯಾಜಿಕ್ ಮಾಡಿದೆ.
ನವೆಂಬರ್ 9ರಿಂದ ಮ್ಯಾಗಿ ಮತ್ತೆ ಮಾರುಕಟ್ಟೆ ಪ್ರವೇಶ ಮಾಡಿತ್ತು. ಬಿಡುಗಡೆ ನಂತರ ದಾಖಲೆ ಪ್ರಮಾಣದಲ್ಲಿ ಮಾರಾಟ ನಡೆಯುತ್ತಿದೆ. ಸರಾಸರಿ ದಿನವೊಂದಕ್ಕೆ 23 ಲಕ್ಷ ಪ್ಯಾಕೇಟ್ ಗಳು ಮಾರಾಟವಾಗಿವೆ. ಅಲ್ಲದೇ ಪ್ರತಿದಿನ ಬೇಡಿಕೆಯಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಕಂಪನಿ ತಿಳಿಸಿದೆ.[ಮತ್ತೆ ಮಾರುಕಟ್ಟೆಗೆ ಬಂತು ಮ್ಯಾಗಿ, ತಿಂದು ಹಾಯಾಗಿ ಮಲಗಿ]

ಮಾಗಿ ನೂಡಲ್ಸ್ ನಲ್ಲಿ ಹಾನಿಕಾರಕ ಸೀಸದ ಅಂಶಗಳು ಇವೆ ಎಂಬ ಕಾರಣಕ್ಕೆ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಇದಾದ ನಂತರ ಕಂಪನಿ ಕಾನೂನು ಹೋರಾಟ ಕೈಗೊಂಡಿತ್ತು. ಪ್ರಯೋಗಾಲಯದಲ್ಲಿ ಮ್ಯಾಗಿಯನ್ನು ಸಮಗ್ರ ಪರೀಕ್ಷೆಗೆ ಒಳಪಡಿಸಿದ ನಂತರ ವರದಿ ಆಧಾರದ ಮೇಲೆ ಮುಂಬೈ ಹೈ ಕೋರ್ಟ್ ಮ್ಯಾಗಿ ಮೇಲಿನ ನಿಷೇಧವನ್ನು ರದ್ದು ಮಾಡಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿತ್ತು.[ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?]
ಆನ್ ಲೈನ್ ನಲ್ಲೂ ಮ್ಯಾಗಿ
ಹೆಚ್ಚಿನ ಯುವಜನತೆ ನೇರವಾಗಿ ಆನ್ ಲೈನ್ ತಾಣಗಳ ಮೂಲಕ ಮ್ಯಾಗಿ ಖರೀದಿಗೆ ಮುಂದಾಗುತ್ತಿದ್ದಾರೆ. ಒಟ್ಟಿನಲ್ಲಿ ಬ್ಯಾಚುಲರ್ಸ್ ಗಳ ನೆಚ್ಚಿನ ಆಹಾರ ಮತ್ತೆ ಜೀವ ಪಡೆದುಕೊಂಡಿದೆ.











Click it and Unblock the Notifications