ಕರ್ಲಾನ್‍ನಿಂದ ಹೊಸ ವಿವಾಹ ಹೊಸ ಸರಣಿ ಮ್ಯಾಟ್ರೆಸ್ ಬಿಡುಗಡೆ

ಬೆಂಗಳೂರು, ನವೆಂಬರ್ 07: ಭಾರತದ ಅತಿದೊಡ್ಡ ಜನಪ್ರಿಯ ಮ್ಯಾಟ್ರೆಸ್, ಹೋಂ ಫರ್ನಿಚರ್ಸ್ ಮತ್ತು ಫರ್ನಿಶಿಂಗ್ ಬ್ರ್ಯಾಂಡ್ ಕರ್ಲಾನ್ ಇದೇ ಮೊದಲ ಬಾರಿಗೆ ವಿವಾಹ ಮ್ಯಾಟ್ರೆಸ್ ಬಿಡುಗಡೆ ಮಾಡಿದೆ.

ಹೊಸ ವಿನ್ಯಾಸದೊಂದಿಗೆ 50 ಬಿಲಿಯನ್ ಡಾಲರ್ (33,000 ಕೋಟಿ ರೂಪಾಯಿ) ವಿವಾಹ ಮಾರುಕಟ್ಟೆಗೆ ಪ್ರವೇಶ ಮಾಡಿದ್ದು, ತನ್ನ ಜಾಲವನ್ನು ವಿಸ್ತರಣೆ ಮಾಡುವುದಾಗಿದೆ. ಈ ವಿಭಾಗಗಳು ಸುಮಾರು 23 ಬಿಲಿಯನ್ ಡಾಲರ್ (ಸುಮಾರು 15,000 ಕೋಟಿ ರೂಪಾಯಿಗಳು) ವಹಿವಾಟನ್ನು ಹೊಂದಿವೆ. ಸ್ಪ್ರಿಂಗ್‍ಏರ್ ನ ಸಹಯೋಗದಲ್ಲಿ ಕುರ್ಲಾನ್ ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಕರ್ಲಾನ್‍ನ ಹೊಸ ವೆಡ್ಡಿಂಗ್ ಮ್ಯಾಟ್ರೆಸ್ ಬಿಡುಗಡೆಯೊಂದಿಗೆ ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ತನ್ನ 5 ಬಗೆಯ ಮ್ಯಾಟ್ರೆಸ್‍ಗಳನ್ನು ಬಿಡುಗಡೆ ಮಾಡಿದಂತಾಗಿದೆ. ಮ್ಯಾಟ್ರೆಸ್ ಮತ್ತು ಹೋಂ ಫರ್ನಿಶಿಂಗ್ ವಿಭಾಗದಲ್ಲಿ 200 ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿರುವ ಕುರ್ಲಾನ್ ಸದಾಕಾಲ ಹೊಸ ಹೊಸ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ದಿಸೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತಾ ಬರುತ್ತಿದೆ. ಈ ಮೂಲಕ ಹೊಸ ಪೀಳಿಗೆಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ಹೋಂ ಕಂಫರ್ಟ್ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸುವುದನ್ನು ಪುನರುಚ್ಚರಿಸಿದೆ.

Kurlon releases New Wedding Mattress collection

ಈ ಹೊಸ ಮ್ಯಾಟ್ರೆಸ್‍ಗಳು ಕಿಂಗ್ ಮತ್ತು ಕ್ವೀನ್ ಗಾತ್ರದಲ್ಲಿ ದೊರೆಯುತ್ತವೆ. ಈ ಹಾಸಿಗೆಯ ಬೆಲೆ 20,000 ರೂಪಾಯಿಯಿಂದ ಆರಂಭವಾಗುತ್ತದೆ. ಈ ಮದುವೆ ವಿಶೇಷತೆಯ ಹಾಸಿಗೆಯು ಬೆಂಗಳೂರು, ಹೈದ್ರಾಬಾದ್, ಕೊಚ್ಚಿನ್, ಮಂಗಳೂರು ಮತ್ತು ಮೈಸೂರಿನಲ್ಲಿರುವ ಕುರ್ಲಾನ್‍ನ ಹೋಂ ಕಂಫರ್ಟ್ ಸ್ಟೋರ್‍ಗಳಲ್ಲಿ ಲಭ್ಯವಿದೆ.

ಕರ್ಲಾನ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತಿದೊಡ್ಡ ಮ್ಯಾಟ್ರೆಸ್, ಹೋಂ ಫರ್ನಿಚರ್ಸ್ ಮತ್ತು ಫರ್ನಿಶಿಂಗ್ ಬ್ರ್ಯಾಂಡ್ ಆಗಿದೆ. ಭಾರತಾದ್ಯಂತ 7000 ಕ್ಕೂ ಅಧಿಕ ಮಲ್ಟಿಬ್ರ್ಯಾಂಡ್ ಔಟ್‍ಲೆಟ್‍ಗಳು, 1300 ಕ್ಕೂ ಅಧಿಕ ಫ್ರಾಂಚೈಸಿ ಔಟ್‍ಲೆಟ್‍ಗಳು ಮತ್ತು 100 ಕ್ಕೂ ಹೆಚ್ಚು ಎಕ್ಸ್‍ಕ್ಲೂಸಿವ್ ಬ್ರ್ಯಾಂಡ್ ಔಟ್‍ಲೆಟ್‍ಗಳಲ್ಲಿ ಕುರ್ಲಾನ್ ಬ್ರ್ಯಾಂಡ್‍ನ ಉತ್ಪನ್ನಗಳು ಲಭ್ಯವಿವೆ. ಇದಲ್ಲದೇ, ಕುರ್ಲಾನ್ ದೇಶಾದ್ಯಂತ 10,000 ಕ್ಕೂ ಅಧಿಕ ಡೀಲರ್‍ಗಳನ್ನು ಹೊಂದಿದ್ದು, 72 ಶಾಖೆಗಳು ಮತ್ತು ಸ್ಟಾಕ್ ಪಾಯಿಂಟ್‍ಗಳನ್ನು ಹೊಂದಿದೆ. ಪ್ರಮುಖವಾಗಿ ಕರ್ನಾಟಕ, ಒರಿಸ್ಸಾ, ಮಧ್ಯಪ್ರದೇಶ, ಉತ್ತರಾಂಚಲ್ ಮತ್ತು ಗುಜರಾತ್ ರಾಜ್ಯಗಳಲ್ಲಿ ತನ್ನ ವ್ಯಾಪ್ತಿಯನ್ನು ಬಲವರ್ಧನೆ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+