ಕುಂಭಮೇಳಕ್ಕಾಗಿ ಜಿಯೋದಿಂದ ಹೊಸ ಫೋನ್ ಬಿಡುಗಡೆ
ನವದೆಹಲಿ, ಜನವರಿ 08: ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದೆನಿಸಿರುವ ಕುಂಭಮೇಳಕ್ಕಾಗಿ ವಿಶೇಷ ಫೋನೊಂದನ್ನು ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದೆ.
ಈ ಫೋನ್ ನಲ್ಲಿ ಕುಂಭ ಮೇಳಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಲಭ್ಯವಾಗಲಿದೆ. ರೈಲು, ಬಸ್, ಹೊಟೇಲ್ ಸೇರಿದಂತೆ ಕುಂಭ ಮೇಳಕ್ಕೆ ಸಂಬಂಧಿಸಿದ ಸಂಪರ್ಕ, ಸಾರಿಗೆ ವ್ಯವಸ್ಥೆ(ರಿಯಲ್ ಟೈಮ್) ಬಗ್ಗೆ ಮಾಹಿತಿ ಸಿಗಲಿದೆ. ಇದಲ್ಲದೆ, ಕುಂಭ ಮೇಳದಲ್ಲಿ ಕುಟುಂಬದ ಸದಸ್ಯರು ಕಾಣೆಯಾಗದಂತೆ ನೋಡಿಕೊಳ್ಳುವ family locator ಎಂಬ ವಿಶೇಷ ಫೀಚರ್ ಕೂಡ ಇದೆ.
ಹೊಸ ಫೋನ್ ಗ್ರಾಹಕರಿಗೆ 501 ರಿಂದ 1095 ರೂಪಾಯಿಗೆ ಸಿಗಲಿದೆ. ಕಂಪನಿ ವಿನಿಮಯ ಆಫರ್ ಕೂಡ ನೀಡ್ತಿದೆ. ಈ ಫೋನ್ ಜೊತೆ 6 ತಿಂಗಳ ಕಾಲ ಅನಿಯಮಿತ ಕಾಲಿಂಗ್ ಹಾಗೂ ಡೇಟಾ ಸಿಗಲಿದೆ. ಇದರಲ್ಲಿ ಫ್ಯಾಮಿಲಿ ಲೊಕೇಟರ್ ಇದೆ. ಇದು ಕುಟುಂಬಸ್ಥರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ನೀಡಲಿದೆ.

ಕುಂಭ ಮೇಳದಲ್ಲಿ ಆಯೋಜನೆ ಮಾಡಲಾಗಿರುವ ಕಾರ್ಯಕ್ರಮಗಳು ಜಿಯೋ ಟಿವಿಯಲ್ಲಿ ಸಿಗಲಿದ್ದು, ಈ ಹಿಂದಿನ ಕುಂಭ ಮೇಳದಲ್ಲಿ ಯಾವ ಕಾರ್ಯಕ್ರಮವಿತ್ತು ಎಂಬ ಮಾಹಿತಿ ಕೂಡ ಸಿಗಲಿದೆ. ಜಿಯೋ ಫೋನ್ ಗ್ರಾಹಕರು ಜಿಯೋ ಸ್ಟೋರ್ ನಲ್ಲಿ ಇದಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಉಚಿತ ಕರೆ, ಪ್ರತಿದಿನ ಕ್ವಿಜ್, ಇಂಟರ್ನೆಟ್, ಉಚಿತ ಗೇಮ್ಸ್ ಎಲ್ಲವೂ ಲಭ್ಯವಿರಲಿದೆ.












Click it and Unblock the Notifications