ಹೊಸ ಸರಣಿಯ 1,2,5,10, 20 ರು ನಾಣ್ಯ ಬಿಡುಗಡೆ ಮಾಡಿದ ಮೋದಿ

Recommended Video

      ಮೊದಲ ಬಾರಿಗೆ ಹೊಸ ಮಾದರಿಯ 20 ರು ನಾಣ್ಯ ಬಿಡುಗಡೆ ಮಾಡಿದ ಮೋದಿ

      ನವದೆಹಲಿ, ಮಾರ್ಚ್ 07: ಅಂಧರು ಕೂಡಾ ನಾಣ್ಯ ಗುರುತಿಸಿ ಚಲಾವಣೆ ಮಾಡಲು ಅನುಕೂಲವಾಗುವಂಥ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಸರಣಿಯ ರೂ 1, ರೂ 2,ರೂ 5, ರೂ 10 ಹಾಗೂ 20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಗುರುವಾರದಂದು ಬಿಡುಗಡೆಗೊಳಿಸಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

      10 ನಾಣ್ಯದಂತೆ ಎರಡು ವಲಯಗಳನ್ನು ಹೊಂದಿರುವ 20 ರು ಮುಖಬೆಲೆಯ ನಾಣ್ಯದ ವ್ಯಾಸವು 27 ಮಿ.ಮೀ ನಷ್ಟಿದೆ. 12 ಕೋನದ ಪಾಲಿಗಾನ್ ಆಕೃತಿಯುಳ್ಳ ಹೊಚ್ಚ ಹೊಸ 20 ರು ನಾಣ್ಯ ಉತ್ಪಾದನೆ ಕುರಿತಂತೆ ವಿತ್ತ ಸಚಿವಾಲಯವು ಪ್ರಕಟಣೆ ಹೊರಡಿಸಿದೆ. ನಾಣ್ಯದ ಹೊರ ಸುತ್ತು 65% ತಾಮ್ರ, 15% ಸತು ಮತ್ತು 20 % ನಿಕ್ಕಲ್ ಹೊಂದಿದೆ. ಒಳ ಸುತ್ತು ಅಥವಾ ನಾಣ್ಯದ ಕೇಂದ್ರಭಾಗವು 75% ತಾಮ್ರ, 20% ಸತು ಮತ್ತು 5% ನಿಕ್ಕಲ್ ನಿಂದ ಮಾಡಲ್ಪಟ್ಟಿದೆ.

      Know more about new Rs 20 coin announced by Government

      ಇತರೆ ನಾಣ್ಯಗಳಂತೆ ಹೊಸ ರೂ 20 ನಾಣ್ಯವು ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ. ಒಂದು ನಾಣ್ಯದ ತೂಕ 8.54 ನಷ್ಟಿರಲಿದೆ. 2009ರ ಮಾರ್ಚ್ ತಿಂಗಳಿನಲ್ಲಿ ಹೊಚ್ಚ ಹೊಸ 10 ರು ನಾಣ್ಯವನ್ನು ಹೊರ ತರಲಾಗಿತ್ತು. ಈಗ 10 ವರ್ಷಗಳ ಬಳಿಕ 20 ರು ನಾಣ್ಯವನ್ನು ಘೋಷಿಸಲಾಗಿದೆ. 2009ರಿಂದ ಇಲ್ಲಿ ತನಕ 10 ನಾಣ್ಯಗಳ 13 ಹೊಸ ಆವೃತ್ತಿಗಳು ಬಂದಿವೆ. 10 ರು ನಾಣ್ಯದ ಬಳಕೆ ಬಗ್ಗೆ ಗೊಂದಲ ಮುಂದುವರೆದಿದ್ದರೂ ಎಲ್ಲವೂ ಮಾನ್ಯತೆ ಹೊಂದಿದೆ ಎಂದು ಅರ್ ಬಿಐ ಸ್ಪಷ್ಟಪಡಿಸಿದೆ.

      ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ ಹಾಗೂ ಅಶೋಕನ ಸಾರಾನಾಥ ಶಾಸನ ವಾಕ್ಯ "ಸತ್ಯಮೇವ ಜಯತೆ"(ದೇವನಾಗರಿ ಲಿಪಿ) ಎಂದಿರಲಿದೆ. ಅಲ್ಲದೆ ಇದರ ಎಡಬಾಗದಲ್ಲಿ 'ಭಾರತ್' ಎನ್ನುವ ದೇವನಾಗರಿ ಲಿಪಿಯಲ್ಲಿ ಪದವಿದ್ದರೆ ಬಲಭಾಗದಲ್ಲಿ "ಇಂಡಿಯಾ' ಎಂದು ಇಂಗ್ಲೀಷ್ ನಲ್ಲಿ ಬರೆದಿರುವುದನ್ನು ಕಾಣಬಹುದು.

      ನಾಣ್ಯದ ಹಿಂಭಾಗದಲ್ಲಿ, ರೂಪಾಯಿ ಚಿಹ್ನೆಯ ಕೆಳಗಿನ ಭಾಗದಲ್ಲಿ ಕರೆನ್ಸಿ ಮೌಲ್ಯ ಬರೆಯಲ್ಪಡಲಿದೆ. ಅಲ್ಲದೆ ಕೃಷಿ ಪ್ರಾಬಲ್ಯವನ್ನು ಸಾರುವುದಕ್ಕಾಗಿ ಎಡಭಾಗದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರವಿರಲಿದೆ. ಇನ್ನು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿಗಳು ಎಂದು ಅಕ್ಷರಗಳಲ್ಲಿ ಕೆತ್ತಲಾಗಿರುತ್ತದೆ. ಅಲ್ಲದೆ ಇದರ ನಡುವೆ ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಕೆತ್ತಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+