ಫೈಬರ್ ಸೆಟ್ ಟಾಪ್ ಬಾಕ್ಸ್ ನಲ್ಲೂ ಜಿಯೋ ನ್ಯೂಸ್ ಆಪ್ ಲಭ್ಯ
ಮುಂಬೈ, ಆಗಸ್ಟ್ 24: ಜಿಯೋ ಸೆಟ್ ಟಾಪ್ ಬಾಕ್ಸ್ ಮೂಲಕ ಈಗ ಜಿಯೋ ಫೈಬರ್ ಬಳಕೆದಾರರಿಗೂ ಜಿಯೋ ನ್ಯೂಸ್ ಆಪ್ ಸಿಗಲಿದೆ ಜಿಯೋ ನ್ಯೂಸ್ ಅಂದರೆ ಬ್ರೇಕಿಂಗ್ ನ್ಯೂಸ್, ವಿಡಿಯೋಗಳು, ನಿಯತಕಾಲಿಕೆ, ವೃತ್ತಪತ್ರಿಕೆ ಹಾಗೂ ಫೋಟೋ ಗ್ಯಾಲರಿಗಳು ಎಲ್ಲವೂ ಒಂದೇ ಕಡೆ ಸಿಗುವ ಡಿಜಿಟಲ್ ನ್ಯೂಸ್ ಅಪ್ಲಿಕೇಷನ್. ನಿಯತಕಾಲಿಕೆ, ವೃತ್ತಪತ್ರಿಕೆ, ವಿಡಿಯೋ, ಫೋಟೋಗಳು, ಟ್ರೆಂಡಿಂಗ್ ವಿಷಯಗಳ ಸುದ್ದಿ ಇವೆಲ್ಲವೂ ಪ್ರಮುಖ ಆನ್ ಲೈನ್ ಸುದ್ದಿ ಮೂಲಗಳಿಂದಲೇ ದೊರೆಯಲಿವೆ.
Recommended Video
ಸೆಟ್ ಟಾಪ್ ಬಾಕ್ಸ್ ಮೂಲಕ ಹಲವು ಹೆಸರಾಂತ ಒಟಿಟಿ ಅಪ್ಲಿಕೇಷನ್ ದೊರೆಯುತ್ತಿವೆ. ಮನರಂಜನೆ, ಆರೋಗ್ಯ, ಸಂಗೀತ, ಕ್ರೀಡೆ, ಶಿಕ್ಷಣ, ಸುದ್ದಿ ಇನ್ನೂ ಅನೇಕ ಬಗೆಯ ವಿಶೇಷಗಳು ದೊರೆಯುತ್ತಿವೆ. ಇನ್ನು ಜಿಯೋದ ಸ್ವಂತ ಆಪ್ ಗಳಾದ ಜಿಯೋ ಸಿನಿಮಾ, ಜಿಯೋಸಾವನ್, ಜಿಯೋಟಿವಿ+ ಮುಂತಾದವು ಸಿಗುತ್ತಿವೆ.

ಏನಿದು ಜಿಯೋ ನ್ಯೂಸ್?
ವಿವಿಧ ಸುದ್ದಿ ಮೂಲಗಳನ್ನು ಒಂದೇ ಕಡೆ ಒದಗಿಸುವ ಸ್ಮಾರ್ಟ್ ಆದ ವೇದಿಕೆ ಜಿಯೋ ನ್ಯೂಸ್. ಇದೀಗ ಇನ್ನಷ್ಟು ಸಮಗ್ರ ಅನುಭವವನ್ನು ಬಳಕೆದಾರರಿಗೆ ದಕ್ಕುವಂತೆ ಮಾಡುತ್ತಿದೆ. ಹೊಸ ಬಗೆಯಲ್ಲಿ ಹಾಗೂ ತುಂಬ ವೇಗವಾಗಿ ಸುದ್ದಿಯನ್ನು ತಿಳಿಯಲು ಜಿಯೋ ನ್ಯೂಸ್ ಅತ್ಯುತ್ತಮ ಆಯ್ಕೆಯಾಗುತ್ತದೆ. ತಾಜಾ ಸುದ್ದಿ ದೊರೆಯುತ್ತದೆ. ನಿಯತಕಾಲಿಕೆ ಅಥವಾ ವೃತ್ತಪತ್ರಿಕೆಗಳನ್ನು ಓದಬಹುದು. ತಕ್ಷಣದ- ಟ್ರೆಂಡಿಂಗ್ ವಿಡಿಯೋಗಳು, ಫೋಟೋಗಳನ್ನು ಜಿಯೋ ನ್ಯೂಸ್ ಒದಗಿಸುತ್ತದೆ.

350+ ಇ ಪೇಪರ್ ಗಳು, 800+ ನಿಯತಕಾಲಿಕೆಗಳು, ಲಕ್ಷಾಂತರ ಟ್ರೆಂಡಿಂಗ್ ವಿಡಿಯೋ ಹಾಗೂ ಫೋಟೋಗಳು ಜಿಯೋ ನ್ಯೂಸ್ ನಲ್ಲಿ ಲಭ್ಯ ಇವೆ. ಅಪ್ಲಿಕೇಷನ್ ನಲ್ಲಿ ಲಭ್ಯ ಇರುವ ಸುದ್ದಿ ಮೂಲಗಳು 12+ ಭಾಷೆಗಳಲ್ಲಿ ಲಭ್ಯ ಇವೆ. ಈ ಪೈಕಿ ಬಳಕೆದಾರರು ತಮಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಲು ಅವಕಾಶಗಳಿವೆ. ನಿಮಗೆ ಇಷ್ಟವಾದ ಹಾಗೂ ಟ್ರೆಂಡಿಂಗ್ ವಿಷಯದಿಂದ ಬೇಕಾದ್ದನ್ನು ಆರಿಸಿಕೊಳ್ಳುವುದಕ್ಕೆ ಸರ್ಚ್ ಫೀಚರ್ ಇದ್ದು, ಧ್ವನಿ (ವಾಯ್ಸ್ ಕಮ್ಯಾಂಡ್) ಮೂಲಕ ಕೂಡ ಸರ್ಚ್ ಮಾಡಬಹುದು.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications