ಹೊಸ ವರ್ಷಕ್ಕೆ ಫುಲ್ ಕ್ಯಾಶ್ ಬ್ಯಾಕ್ ಆಫರ್ ನೀಡಿದ ಜಿಯೋ
ಬೆಂಗಳೂರು, ಡಿಸೆಂಬರ್ 29: ರಿಲಯನ್ಸ್ ಜಿಯೋ ಹೊಸ ವರ್ಷಕ್ಕಾಗೊ ತನ್ನ ಗ್ರಾಹಕರಿಗೆ ಜಿಯೋ ಹ್ಯಾಪಿ ನ್ಯೂ ಈಯರ್ ಎಂಬ ಆಫರ್ ಹೊರ ತಂದಿದೆ.
399 ರೂಪಾಯಿ ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ ಫುಲ್ ಕ್ಯಾಶ್ ಬ್ಯಾಕ್ ಸಿಗಲಿದೆ. ಗ್ರಾಹಕರು 399 ರೀ ಚಾರ್ಜ್ ಮಾಡಿಸಿದರೆ ಮೊಬೈಲ್ ಅಪ್ಲಿಕೇಷನ್ ಮೈಜಿಯೋನಲ್ಲಿರುವ ಮೈಕೂಪನ್ಸ್ ಗೆ 399 ರೂ. ಕ್ರೆಡಿಟ್ ಆಗುತ್ತದೆ. ಇದನ್ನು ಜಿಯೋ ಆ್ಯಪ್ ಅಥವಾ ವೆಬ್‍ಸೈಟ್‍ನಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿ ಮೊತ್ತದ ಖರೀದಿಗೆ ಬಳಕೆ ಮಾಡಿದಲ್ಲಿ 399 ಡಿಸ್ಕೌಂಟ್ ಸಿಗಲಿದೆ.

ಶುಕ್ರವಾರದಿಂದ ಈ ಆಫರ್ ಅರಂಭವಾಗಿದ್ದು, 2019ರ ಜನವರಿ 31ರ ವರೆಗೆ ಇರಲಿದೆ. ಮೈಜಿಯೋ ಆ್ಯಪ್ ಅಥವಾ ವೆಬ್‍ಸೈಟ್‍ನಲ್ಲಿ ಖರೀದಿಗೆ ಬಳಸಲು ಗ್ರಾಹಕರು ಮಾರ್ಚ್ 15ರ ವರೆಗೆ ಅವಕಾಶ ಇರಲಿದೆ. ಈ ಸೌಲಭ್ಯ ಹಾಲಿ ಗ್ರಾಹಕರು ಹಾಗೂ ಹೊಸ ಜಿಯೋ ಬಳಕೆದಾರರಿಬ್ಬರೂ ಲಭ್ಯವಿರಲಿಲ್ಲ. 399ರ ರೀಚಾರ್ಜ್ ಗೆ ಮಾತ್ರ ಈ ಆಫರ್ ಲಭ್ಯವಿರಲಿದೆ.












Click it and Unblock the Notifications