ಐಷಾರಾಮಿ ಕಾರು ಜಾಗ್ವಾರ್ ಆನ್ಲೈನ್ ಮೂಲಕ ಬುಕ್ ಮಾಡಿ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 21: ಜಾಗ್ವಾರ್ ಅತ್ಯಂತ ಸಮರ್ಥವಾದ ಎಸ್ ಯುವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹೊಚ್ಚ ಹೊಸದಾದ ಎಫ್-ಪೇಸ್ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಎಸ್ ಯುವಿಯನ್ನು ಆನ್ ಲೈನ್ ಮೂಲಕ ಅಥವಾ ಭಾರತ ಎಲ್ಲಾ 23 ರೀಟೇಲರ್ ಮಳಿಗೆಗಳ ಮೂಲಕ ಬುಕ್ ಮಾಡಬಹುದು.

ಇದರ ಬೆಲೆ 68.4 ಲಕ್ಷ ರೂಪಾಯಿಗಳಿಂದ(ದೆಹಲಿ ಎಕ್ಸ್ ಶೋರೂಂ ಬೆಲೆ) ಆರಂಭವಾಗಲಿದೆ. ದೇಶದ ಖ್ಯಾತ ವಿನ್ಯಾಸಕಾರರಾದ ಅರ್ಝನ್‍ಖಂಬಟ್ಟಾ ವಿನ್ಯಾಸಗೊಳಿಸಿದ ಝಗಮಗಿಸುವ 18 ಮೀಟರ್ ಉದ್ದದ ಬೀಕಾನ್ ನಲ್ಲಿ ಜಾಗ್ವಾರ್ ಎಫ್-ಪೇಸ್ ಅನಾವರಣಗೊಂಡಿತು.

ನರೇನ್ ಕಾರ್ತಿಕೇಯನ್ ಉಪಸ್ಥಿತಿಯಲ್ಲಿ ಶಂಕರ್ ಮಹದೇವನ್ ಅವರ ಸಂಗೀತ ಕಾರಂಜಿ ಈ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಹಲವಾರು ಅತಿ ಗಣ್ಯ ವ್ಯಕ್ತಿಗಳು, ಜಾಗ್ವಾರ್ ಪ್ರೇಮಿಗಳು ಸೇರಿದಂತೆ ವಿವಿಧ ವಲಯದ ಗಣ್ಯರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಆನ್ ಲೈನ್ ಮೂಲಕ ಬುಕ್ ಮಾಡಲು ಈಗ www.findmeacar.in ವೆಬ್ ಸೈಟ್ ಬಳಸಬಹುದು.

ಭಾರತದ ಮಾರುಕಟ್ಟೆ ಇಂತಹ ವಾಹನಗಳನ್ನು ಎದುರು ನೋಡುತ್ತಿತ್ತು. ಎಫ್-ಪೇಸ್ ಬಿಡುಗಡೆಯಿಂದಾಗಿ ಜಾಗ್ವಾರ್ ಎಸ್‍ಯುವಿ ಮಾರುಕಟ್ಟೆ ಪ್ರವೇಶ ಮಾಡಿದಂತಾಗಿದೆ. ಈ ಮೂಲಕ ಭಾರತದಲ್ಲಿ ಜಾಗ್ವಾರ್ ಹೊಸ ಇತಿಹಾಸ ಸೃಷ್ಟಿ ಮಾಡಲಿದೆ'' ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ರೋಹಿತ್ ಸೂರಿ ಹೇಳಿದ್ದಾರೆ.

ಭಾರತದಲ್ಲಿ ಜಾಗ್ವಾರ್ ಬುಕ್ ಮಾಡಿ

ಭಾರತದಲ್ಲಿ ಜಾಗ್ವಾರ್ ಬುಕ್ ಮಾಡಿ

ಭಾರತದಲ್ಲಿ ಜಾಗ್ವಾರ್ ಶ್ರೇಣಿಗಳಾದ ಎಫ್-ಟೈಪ್(125 ಲಕ್ಷ ರೂಪಾಯಿಗಳಿಂದ ಆರಂಭ), ಎಕ್ಸ್‍ಎಫ್(49.50 ಲಕ್ಷ ರೂಪಾಯಿಯಿಂದ ಆರಂಭ), ಎಕ್ಸ್ ಜೇ(99.99 ಲಕ್ಷ ರೂಪಾಯಿಯಿಂದ ಆರಂಭ) ಮತ್ತು ಎಕ್ಸ್ ಇ (39.90 ಲಕ್ಷ ರೂಪಾಯಿಗಳಿಂದ ಆರಂಭ) ಮತ್ತು ಎಫ್-ಪೇಸ್ (68.40 ಲಕ್ಷ ರೂಪಾಯಿಯಿಂದ ಆರಂಭ). ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು.

ಭಾರತದಲ್ಲಿ ಜಾಗ್ವಾರ್ ರೀಟೇಲರ್

ಭಾರತದಲ್ಲಿ ಜಾಗ್ವಾರ್ ರೀಟೇಲರ್

ಅಹ್ಮದಾಬಾರ್, ಔರಂಗಾಬಾದ್, ಬೆಂಗಳೂರು, ಭುವನೇಶ್ವರ್, ಚಂಡೀಘಡ, ಚೆನ್ನೈ, ಕೊಯಮತ್ತೂರು, ದೆಹಲಿ, ಗುರ್‍ಗಾಂ, ಹೈದ್ರಾಬಾದ್, ಇಂದೋರ್, ಜೈಪುರ, ಕೊಲ್ಕತ್ತಾ, ಕೊಚ್ಚಿ, ಕರ್ನಾಲ್, ಲಕ್ನೋ, ಲೂಧಿಯಾನ, ಮಂಗಳೂರು, ಮುಂಬೈ, ನಾಗ್ಪುರ, ಪುಣೆ ಮತ್ತು ರಾಯಪುರದ 23 ಅಧಿಕೃತ ಔಟ್‍ಲೆಟ್ ಗಳಲ್ಲಿ ಜಾಗ್ವಾರ್ ವಾಹನಗಳು ಲಭ್ಯವಿವೆ.

ಶಂಕರ್ ಮಹದೇವನ್ ಅವರ ಸಂಗೀತ ಕಾರಂಜಿ

ಶಂಕರ್ ಮಹದೇವನ್ ಅವರ ಸಂಗೀತ ಕಾರಂಜಿ

ಇದರ ಬೆಲೆ 68.4 ಲಕ್ಷ ರೂಪಾಯಿಗಳಿಂದ(ದೆಹಲಿ ಎಕ್ಸ್ ಶೋರೂಂ ಬೆಲೆ) ಆರಂಭವಾಗಲಿದೆ. ದೇಶದ ಖ್ಯಾತ ವಿನ್ಯಾಸಕಾರರಾದ ಅರ್ಝನ್‍ಖಂಬಟ್ಟಾ ವಿನ್ಯಾಸಗೊಳಿಸಿದ ಝಗಮಗಿಸುವ 18 ಮೀಟರ್ ಉದ್ದದ ಬೀಕಾನ್ ನಲ್ಲಿ ಜಾಗ್ವಾರ್ ಎಫ್-ಪೇಸ್ ಅನಾವರಣಗೊಂಡಿತು.

ನರೇನ್ ಕಾರ್ತಿಕೇಯನ್ ಉಪಸ್ಥಿತಿಯಲ್ಲಿ ಶಂಕರ್ ಮಹದೇವನ್ ಅವರ ಸಂಗೀತ ಕಾರಂಜಿ ಈ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಹಲವಾರು ಅತಿ ಗಣ್ಯ ವ್ಯಕ್ತಿಗಳು, ಜಾಗ್ವಾರ್ ಪ್ರೇಮಿಗಳು ಸೇರಿದಂತೆ ವಿವಿಧ ವಲಯದ ಗಣ್ಯರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.

ಐಷಾರಾಮಿ ಕಾರು ಜಾಗ್ವಾರ್ ಬಗ್ಗೆ ವಿಡಿಯೋ

ಎಫ್-ಟೈಪ್ ನಿಂದ ಪ್ರೇರೇಪಿತವಾಗಿರುವ ಜಾಗ್ವಾರ್ ಎಫ್-ಪೇಸ್ ಸ್ಪೋರ್ಟ್ ಕಾರಿನ ಡಿಎನ್‍ಎಯಾಗಿದೆ. ಅತ್ಯುತ್ತಮವಾದ ಗೋಚರತೆ, ಸ್ಥಿರತೆ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಆಕರ್ಷಕವಾದ ವಿನ್ಯಾಸದೊಂದಿಗೆ ಎಲ್ಲರನ್ನೂ ಮುದಗೊಳಿಸಲಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ರೋಹಿತ್ ಸೂರಿ

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ರೋಹಿತ್ ಸೂರಿ

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ರೋಹಿತ್ ಸೂರಿ ಅವರು ಈ ವಿನೂತನವಾದ ಮತ್ತು ಆಕರ್ಷಕವಾದ ಕಾರಿನ ಬಗ್ಗೆ ಮಾತನಾಡಿ,: ಈ ಜಾಗ್ವಾರ್ ಎಫ್-ಪೇಸ್ ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ವಿಶ್ವದಾದ್ಯಂತ ಈ ಕಾರಿನ ಬಗ್ಗೆ ನಿರೀಕ್ಷೆಗೂ ಮೀರಿದ ಅತ್ಯುತ್ತಮ ಪ್ರತಿಕ್ರಿಯೆಗಳು ಬಂದಿವೆ. ಇದೇ ರೀತಿಯ ಪ್ರತಿಕ್ರಿಯೆ ಭಾರತದಲ್ಲಿ ಬರಲಿದೆ ಎಂಬ ವಿಶ್ವಾಸವಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JLR has announced the prices of its first ever Jaguar SUV, the F-Pace, with prices starting at Rs 68.40 lakh, ex-showroom, Delhi. Interested customers can book their’s at any JLR outlets near them or by visiting Jag’s new online booking platform at www.findmeacar.in
Please Wait while comments are loading...