ಬಜೆಟ್ ನಂತರ ಸಿಗರೇಟು ದರ ಏರಿಕೆ ಮಾಡಿದ ಐಟಿಸಿ
ನವದೆಹಲಿ, ಫೆಬ್ರವರಿ 20: ಕೇಂದ್ರ ಬಜೆಟ್ ನಂತರ ಇದೇ ಮೊದಲ ಬಾರಿಗೆ ಐಟಿಸಿ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡಿದೆ. ಎನ್ ಸಿಸಿಡಿ ದರ ಏರಿಕೆ ಅನ್ವಯದಂತೆ ಶೇ 10 ರಿಂದ 20 ರಷ್ಟು ಸಿಗರೇಟು ದರ ಏರಿಕೆ ಮಾಡಲಾಗುವುದು ಎಂದು ಐಟಿಸಿ ಈ ಹಿಂದೆಯೇ ಪ್ರಕಟಿಸಿತ್ತು.
ಕೇಂದ್ರ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?
ಆದರೆ, ಎನ್ ಸಿಸಿಡಿ ದರ ಏರಿಕೆಯನ್ನು ತಂಬಾಕು ಉತ್ಪನ್ನ ಸಂಸ್ಥೆಗಳು ನೇರವಾಗಿ ಗ್ರಾಹಕರ ಮೇಲೆ ಹಾಕಬಹುದು ಅಥವಾ ಬೆಲೆ ಏರಿಕೆ ಮಾಡದೆ ಇರಬಹುದು.
ಯಾವುದರ ಬೆಲೆ ಎಷ್ಟಾಗಿದೆ?
* ಅಮೆರಿಕನ್ ಕ್ಲಬ್ ಕೂಲ್ ಫ್ರೆಶ್ ಟೆಸ್ಟ್: ಶೇ10, 200 ರಿಂದ 220 ರು(20 ಸಿಗರೇಟಿನ ಪ್ಯಾಕ್)
* ನೇವಿ ಕಟ್ ಫಿಲ್ಟರ್ : ಶೇ 16ರಷ್ಟು ಏರಿಕೆ, 10ಕ್ಕೆ 80 ರು.
* ಫ್ಲೇಕ್ ಫಿಲ್ಟರ್: ಶೇ 14ರಷ್ಟು ಏರಿಕೆ, 80 ರು.
* ಫ್ಲೇಕ್ ಸ್ಪೆಷಲ್ ಫಿಲ್ಟರ್, ಫ್ಲೇಕ್ ಬ್ಲೂ ಸ್ಪೆಷಲ್ ಫಿಲ್ಟರ್, ವೇವ್ ಕೂಲ್ ಮಿಂಟ್: ಶೇ 20ರಷ್ಟು ಏರಿಕೆ.
ಇದಲ್ಲದೆ, ಗೋಲ್ಡ್ ಫ್ಲೇಕ್ ಸೂಪರ್ ಸ್ಟಾರ್ ಹಾಗೂ ಡ್ಯೂಕ್ ಸ್ಪೆಷಲ್ ಫಿಲ್ಟರ್ ಬೆಲೆ ಕೂಡಾ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಿಂಗ್ 10ಕ್ಕೆ 170 ರುಪಾಯಿ, ಸ್ಮಾಲ್ 8 ರಿಂದ 10 ರು ಒಂದಕ್ಕೆ ಮಾರಾಟವಾಗುತ್ತಿದೆ.
ಕಳೆದ ವರ್ಷ ಬ್ರಿಸ್ಟೋಲ್, ಕಾಪ್ಸ್ಟನ್ ಹಾಗೂ ಫ್ಲೇಕ್ ಎಕ್ಸೆಲ್ ಬೆಲೆ ಶೇ 7 ರಿಂದ 14ರಷ್ಟು ಏರಿಕೆಯಾಗಿತ್ತು. 2016ರಲ್ಲಿ ಗೋಲ್ಡ್ ಫ್ಲೇಕ್ ಬೆಲೆ ಶೇ 13ರಷ್ಟು ಏರಿಕೆಯಾಗಿತ್ತು.
ಡಿಸೆಂಬರ್ 31, 2019 ರ ಅಂತ್ಯಕ್ಕೆ ಐಟಿಸಿ ಸಂಸ್ಥೆ ಆದಾಯದಲ್ಲಿ 6.31% ಏರಿಕೆ ಕಂಡು ಬಂದಿದ್ದು, 17, 928.69 ಕೋಟಿ ರು ನಷ್ಟಿತ್ತು. ಸಿಗರೇಟು ಮಾರಾಟದಿಂದ ಲಾಭದಲ್ಲಿ ಶೇ 7.59ರಷ್ಟು ಏರಿಕೆಯಾಗಿದೆ.