ನಾಲ್ಕೇ ವರ್ಷದಲ್ಲಿ 1 ಕೋಟಿ ಸೇವಿಂಗ್ಸ್ : ಮಿಸ್ಟೇಕ್ ಬಗ್ಗೆ ಅಂಕೂರ್ ವಾರಿಕೂ ಸಲಹೆ ಕೇಳಿ

Investment Plan: ನಾವು ದುಡಿದ್ರೆ ಮಾತ್ರ ಸಾಕಾಗೋದಿಲ್ಲ. ಉಳಿತಾಯ ಕೂಡಾ ಮಾಡಬೇಕು. ದುಡಿಯುವ ಹಣದಲ್ಲಿ ಇಂತಿಷ್ಟು ಅಂತ ಉಳಿತಾಯ ಮಾಡಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗುವುದು ಸಾಧ್ಯವಾಗುವುದು. ಕೆಲವರಿಗೆ ಸ್ವಂತ ಮನೆ ಕಟ್ಟುವ ಕನಸಾದರೆ, ಇನ್ನು ಕೆಲವರಿಗೆ ಲಕ್ಷಾಧೀಶ, ಕೋಟ್ಯಾಧೀಶರಾಗುವ ಆಸೆ. ಕೈ ತುಂಬಾ ಹಣ ಸೇರಿಸಿಕೊಂಡು ಆರಾಮಾಗಿ ಜೀವನ ಸಾಗಿಸುವ ಆಸೆ. ಆದರೆ ನಾವು ನಿರೀಕ್ಷೆ ಮಾಡುವಷ್ಟು ಅಥವಾ ಆಸೆ ಪಡುವಷ್ಟು ಹಣ ಕೂಡಿಡುವುದು ಸಾಧ್ಯವೇ? ಈ ಬಗ್ಗೆ ಉದ್ಯಮಿ ಮತ್ತು ಕಂಟೆಂಟ್ ಕ್ರಿಯೇಟರ್ ಅಂಕುರ್ ವಾರಿಕೂ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ.

Investment Plan Women Target To Save 1 Crore In 3 To 4 Month Ankur Warikoo Shares Compounding Advice On Social Media

Investment Plan: ಒಂದು ಕೋಟಿ ಉಳಿತಾಯ :

ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ 1 ಕೋಟಿ ರೂ.ಯ ದೊಡ್ಡ ನಿಧಿಯನ್ನು (treasure) ನಿರ್ಮಿಸುವ ಆಸೆ ಇದೆ ಎನ್ನುತ್ತಾ ಮಹಿಳೆಯೊಬ್ಬರು ಕಳುಹಿಸಿರುವ ಇಮೇಲ್ ಅನ್ನು ಶೇರ್ ಮಾಡಿದ್ದಾರೆ. ಇಲ್ಲಿ ವಿಶೇಷ ಅಂದ್ರೆ ಆ ಮಹಿಳೆಯ ಹತ್ತಿರ ಈಗಾಗಲೇ 25 ಲಕ್ಷ ಸೇವಿಂಗ್ಸ್ ಇದೆ. ತುಂಬಾ ವರ್ಷಗಳಿಂದ ಇನ್ವೆಸ್ಟ್ ಮಾಡ್ತಾ ಮಾಡ್ತಾ ಇಷ್ಟು ಸೇವಿಂಗ್ ಮಾಡಿದ್ದಾರೆ. ಈಗ ಅವರಿಗೆ ಒಂದು ಕೋಟಿ ಉಳಿತಾಯ ಮಾಡುವ ಆಸೆ.

25 ಲಕ್ಷ ಇದ್ದರೂ ಕೋಟ್ಯಾಧಿಪತಿಯಾಗುವ ಅವಸರ ?:

ಮಹಿಳೆಯ (women) ಇಮೇಲ್ ನೋಡಿದರೆ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎನ್ನುವು ಸ್ಪಷ್ಟ ಎನ್ನುವುದು ಅಂಕುರ್ ವಾರಿಕೂ ಅಭಿಪ್ರಾಯ. ಅವರು ಸ್ಥಿರವಾದ ಕೆಲಸ, ಉತ್ತಮ ಗಳಿಕೆ ಮತ್ತು ಹೂಡಿಕೆಯ ಅನುಭವ ಎಲ್ಲವೂ ಇದೆ. ಹಾಗಾಗಿಯೇ 25 ಲಕ್ಷ ಹಣವನ್ನು ಉಳಿಸುವುದು ಸಾಧ್ಯವಾಗಿದೆ. ಇದು ನಿಜಕ್ಕೂ ಉತ್ತಮ ಸಾಧನೆ ಎಂದಿದ್ದಾರೆ ವಾರಿಕೂ.

ಸಣ್ಣ ಅವಧಿಯಲ್ಲಿ ದೊಡ್ಡ ಸೇವಿಂಗ್ಸ್ :

ಇಷ್ಟಾದರೂ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಉಳಿತಾಯದ ಮೊತ್ತ 1 ಕೋಟಿ ರೂ. ಆಗಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ವಾರಿಕೂ ಪ್ರಕಾರ, ಇಂಥ ಆಸೆ ಮನುಷ್ಯರಿಗೆ ಇರುವುದು ಸಾಮಾನ್ಯ. ಆದರೆ ಇಷ್ಟು ಸಣ್ಣ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಸೇವಿಂಗ್ಸ್ ನಿರೀಕ್ಷೆ ಅಸಾಧ್ಯ. ಇಲ್ಲಿ ಅವರು ಹಣ ಉಳಿಸುವ ಟಾರ್ಗೆಟ್ ಅನ್ನು ತಪ್ಪು ಅಂತ ಹೇಳ್ತಾ ಇಲ್ಲ. ಆದರೆ ಹಣವನ್ನು ಡಬಲ್, ತ್ರಿಬಲ್ ಮಾಡುವ ಭರದಲ್ಲಿ ನಷ್ಟವಾಗುವ ಸಾಧ್ಯತೆ ಕೂಡಾ ಇದೆ.

ಇನ್ವೆಸ್ಟ್​ಮೆಂಟ್ ಮಾಡುವಾಗ ಈ ಬಗ್ಗೆ ಗಮನ ಇರಲಿ :

ಇನ್ವೆಸ್ಟ್​ಮೆಂಟ್ ನಲ್ಲಿ ಕಂಪೌಂಡಿಂಗ್ ಬಹಳ ಮುಖ್ಯ. ಕಂಪೌಂಡಿಂಗ್ ಅಂದರೆ ಹೂಡಿಕೆ ಮಾಡಿದ ಹಣದಿಂದ ಹಣ (money) ಗಳಿಸುವ ಪ್ರಕ್ರಿಯೆ. ಇದರಲ್ಲಿ, ಹೂಡಿಕೆಯ ಮೇಲೆ ಸಿಗುವ ಬಡ್ಡಿಯ ಮೇಲೆ ಬಡ್ಡಿ ಸಿಗುವ ಮೂಲಕ ಹಣ ಬೆಳೆಯುತ್ತಾ ಹೋಗುವುದು. ಈ ಪ್ರಕ್ರಿಯೆಯು ಉಳಿತಾಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಬರೀ ಟಾರ್ಗೆಟ್ ಇದ್ದರೆ ಸಾಲದು :

ಆದರೆ, ಇದರ ಪರಿಣಾಮ ಅಷ್ಟು ಬೇಗ ಕಾಣಿಸುವುದಿಲ್ಲ. ಇನ್ವೆಸ್ಟ್ ಮಾಡುವವರು ನಿಯಮಿತವಾಗಿ ಹಣ ಹಾಕುತ್ತಾರೆ. ನಿರೀಕ್ಷೆಯಂತೆ ಹಣದ ಗ್ರೋತ್ ಕಾಣಿಸುವುದಿಲ್ಲ. ಹೀಗಾಗಿ ತುಂಬಾ ಜನ ತಾಳ್ಮೆ ಕಳೆದುಕೊಳ್ತಾರೆ. ತಮ್ಮ ಟಾರ್ಗೆಟ್ ಅಥವಾ ಹೂಡಿಕೆ ತಂತ್ರದ ಬಗ್ಗೆ ಅಸಮಾಧಾನಗೊಳ್ಳಲು ಪ್ರಾರಂಭಿಸುತ್ತಾರೆ.ಕಂಪೌಂಡಿಂಗ್ ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಉಳಿತಾಯದ ಮೇಲೆ ಅದರ ನಿಜವಾದ ಪರಿಣಾಮ ಅನುಭವಿಸುವುದು ಎರಡು ಬೇರೆ ಬೇರೆ ವಿಷಯ ಎನ್ನುವುದು ವಾರಿಕೂ ವಾದ.

ವಾರಿಕೂ ಪ್ರಕಾರ, 20 ಅಥವಾ 30 ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡುವವರಿಗೆ 15 ರಿಂದ 20 ವರ್ಷಗಳವರೆಗೆ ಪರಿಣಾಮ ಕಾಣಿಸುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ, ನಿಯಮಿತ ಹೂಡಿಕೆ ಮತ್ತು ಸಮಯದ ಸಂಯೋಜನೆ ಹಣ ಸೇವ್ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಪ್ರತಿ ಹೂಡಿಕೆ ಸ್ಥಿರ ಆದಾಯ ಕೊಡುತ್ತದೆ ಎಂದಲ್ಲ. ಮಾರುಕಟ್ಟೆಯ ಕಾರ್ಯಕ್ಷಮತೆ, ಹೂಡಿಕೆಯ ಪ್ರಮಾಣ ರಿಸ್ಕ್ ಫ್ಯಾಕ್ಟರ್​ ಕೂಡಾ ಪ್ರಭಾವ ಬೀರುತ್ತದೆ.

ಕೋಟ್ಯಾಧಿಪತಿಯಾಗಲು ತಾಳ್ಮೆಯೂ ಬೇಕು :

ಈ ಇಡೀ ಘಟನೆಯಿಂದ ಕಲಿಯಬಹುದಾದ ಪಾಠ ಎಂದರೆ ಆರ್ಥಿಕ ಭದ್ರತೆಯ ಬಗ್ಗೆ ಯೋಚಿಸುವಾಗ ಗುರಿ ಮತ್ತು ಕಾಲಮಿತಿಯನ್ನು ವಾಸ್ತವದ ಆಧಾರದ ಮೇಲೆ ನಿರ್ಧರಿಸಬೇಕು. 1 ಕೋಟಿ ನಿಧಿಯನ್ನು ನಿರ್ಮಿಸುವುದು ಉತ್ತಮ ಆರ್ಥಿಕ ಗುರಿಯಾಗಬಹುದು. ಆದರೆ, ಅದನ್ನು ಸಾಧಿಸಲು ನಿಮ್ಮ ಆದಾಯ, ಅಸ್ತಿತ್ವದಲ್ಲಿರುವ ಉಳಿತಾಯ, ಹೂಡಿಕೆಗಳು ಮತ್ತು ರಿಸ್ಕ್ ಫ್ಯಾಕ್ಟರ್ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳುವುದು ಮುಖ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+