ಇಂಟೆಲ್ ನಿಂದ ಬೆಂಗಳೂರಲ್ಲಿ ಭಾರಿ ಹೂಡಿಕೆ, 3 ಸಾವಿರ ಉದ್ಯೋಗ ಭಾಗ್ಯ!

Posted By:
Subscribe to Oneindia Kannada

ಬೆಂಗಳೂರು, ಜೂನ್ 14: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಇಂಟೆಲ್ ಸಂಸ್ಥೆ ಜತೆ ಬಂಡವಾಳ ಹೂಡಿಕೆ ಸಂಬಂಧ ಕರ್ನಾಟಕ ಸರ್ಕಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದಂತೆ ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಲಿದೆ. ಒಟ್ಟಾರೆ, 1,100 ಕೋಟಿ ರು ಹೂಡಿಕೆಯಾಗಲಿದ್ದು, 3,000ಕ್ಕೂ ಅಧಿಕ ಉದ್ಯೋಗ ಭಾಗ್ಯ ಸಿಗಲಿದೆ. ಬೆಂಗಳೂರಿನ ಸರ್ಜಾಪುರ ರಿಂಗ್ ರಸ್ತೆಯಲ್ಲಿ 44 ಎಕರೆ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ವಿನ್ಯಾಸದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಿದೆ.

Amid IT sector layoffs, Intel to invest Rs 1,100 crore in India, generate 3,000 jobs

'ಐಟಿ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಹೆಚ್ಚು ಅವಕಾಶ ಇದೆ ಎನ್ನುವುದನ್ನು ಇಂಟೆಲ್ ಅರಿತಿದೆ. ತಂತ್ರಜ್ಞಾನ ಕ್ರಾಂತಿಗೆ ರಾಜ್ಯದಲ್ಲಿ ಯಾವತ್ತೂ ಉತ್ತಮ ಅವಕಾಶ ಇದೆ. ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಎಂಬ ಗೌರವ ಬೆಂಗಳೂರಿಗಿದೆ. ರಾಜ್ಯದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಐಟಿ ಕ್ಷೇತ್ರದವರಿಗೆ ಅತಿ ಹೆಚ್ಚು ಉದ್ಯೋಗ ಕಲ್ಪಿಸಿದ ಕೀರ್ತಿ ಇದೆ. ತಂತ್ರಜ್ಞಾನಗಳ ಆವಿಷ್ಕರಕ್ಕೆ ಇದು ನೆಚ್ಚಿನ ತಾಣ. ಅಲ್ಲದೇ ಸುರಕ್ಷಿತ ತಾಣ ಎಂದು ಗುರುತಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಸಚಿವರಾದ ಪ್ರಿಯಂಕ ಖರ್ಗೆ, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಇಂಟೆಲ್ ಇಂಡಿಯಾ ಪ್ರಧಾನ ವ್ಯವಸ್ಥಾಪಕಿ ನಿವೃತಿ ಗುಪ್ತಾ, ಐಟಿ ವಿಭಾಗದ ನಿರ್ದೇಶಕಿ ಸಲ್ಮಾ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
While reports of layoffs and job loss are making employees of IT sector jittery, Intel announced its plan to invest Rs 1,100 crores in Bengaluru. The move aimed at advancing Intel's Research and development and innovation is expected to create 3,000 jobs.
Please Wait while comments are loading...