ಭವಿಷ್ಯ ನಿಧಿ ನಗದೀಕರಣ, ವರ್ಗಾವಣೆಗೆ ಹೆಲ್ಪ್ ಡೆಸ್ಕ್

ನವದೆಹಲಿ, ಫೆ. 19: ಭವಿಷ್ಯ ನಿಧಿ ಎಂಬುದು ಕಂಪನಿಗಳು ತಮ್ಮ ಉದ್ಯೋಗಿಗಳ ಹಿತರಕ್ಷಣೆಗಾಗಿ ಜಾರಿಗೆ ತಂದಿರುವ ಸೌಲಭ್ಯ. ಆದರೆ, ಉದ್ಯೋಗ ತೊರೆದ ಹಲವು ಕಂಪನಿಗಳು ಹಣವನ್ನು ವಿತ್ ಡ್ರಾ ಮಾಡದೆ ಹಾಗೆಯೇ ಬಿಡುತ್ತಿದ್ದಾರೆ. ಇಂತಹ ಸುಮಾರು ಎಂಟು ಕೋಟಿ ಖಾತೆಗಳು ಉಳಿದಿದ್ದು, ಇವುಗಳ ಮೊತ್ತ ಸುಮಾರು 27 ಸಾವಿರ ಕೋಟಿ ರು. ಎಂದು ಅಂದಾಜಿಸಲಾಗಿದೆ.

ಈ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಸಿಗುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ, ಮೂರು ವರ್ಷಗಳಿಂದ ಯಾವುದೇ ವ್ಯವಹಾರ ನಡೆಸದ ಖಾತೆಗಳಲ್ಲಿರುವ ಹಣಕ್ಕೆ ಬಡ್ಡಿ ನೀಡಿಕೆಯನ್ನು ಉದ್ಯೋಗಿಗಳ ಪ್ರೊವಿಡೆಂಟ್ ಫಂಡ್ ಆರ್ಗನೈಜೇಶನ್ (ಇಪಿಎಫ್ಓ) ಸಂಸ್ಥೆಯು ಕೆಲವು ವರ್ಷಗಳ ಹಿಂದೆಯೇ ನಿಲ್ಲಿಸಿದೆ. [ಪಿಎಫ್ ವಯೋಮಿತಿ 58 ರಿಂದ 60ಕ್ಕೆ ಏರಿಸಲು ಚಿಂತನೆ]

ಆದ್ದರಿಂದ ಇಂತಹ ಭವಿಷ್ಯ ನಿಧಿ ಖಾತೆಯಲ್ಲಿರುವ ಹಣವನ್ನು ನಗದೀಕರಣ ಮಾಡಿಕೊಳ್ಳಲು ಕೋರಿ ಇಪಿಎಫ್ಓ ಸಂಸ್ಥೆ ವಿಶೇಷ ಅಭಿಯಾನ ಆರಂಭಿಸಿದೆ ಎಂದು ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಕೆ.ಕೆ. ಜಲಾನ್ ತಿಳಿಸಿದ್ದಾರೆ. ಈ ಕುರಿತು ಆರಂಭಿಸಿರುವ ಆನ್ ಲೈನ್ ಹೆಲ್ಪ್ ಡೆಸ್ಕ್‌ಗೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಚಾಲನೆ ನೀಡಿದ್ದಾರೆ. [ಡಿಸೆಂಬರ್ ನಿಂದ ಪಿಎ‍ಫ್ ವಿಥ್ ಡ್ರಾ ಬಹಳ ಸುಲಭ]

pf

ಏಳು ಭಾಷೆಯಗಳಲ್ಲಿ ಹೆಲ್ಪ್ ಡೆಸ್ಕ್ ಸಹಾಯ ನೀಡಲಿದೆ. ನಿಷ್ಕ್ರಿಯ ಖಾತೆ ಹೊಂದಿರುವವರು ಹಣ ನಗದೀಕರಿಸಿಕೊಳ್ಳಬಹುದು ಅಥವಾ ತಮ್ಮ ಈಗಿನ ಖಾತೆಗೆ ವರ್ಗಾವಣೆಯನ್ನೂ ಮಾಡಿಕೊಳ್ಳಬಹುದು. [ಪಿಎಫ್‌ ಬಗ್ಗೆ ಎಲ್ಲಾ ಮಾಹಿತಿ ಆನ್‌ಲೈನ್‌ನಲ್ಲಿ]

ಏನು ಮಾಡಬೇಕು? : ಈ ಸೇವೆ ಪಡೆಯಲು ಬಯಸುವವರು ನಿಗದಿತ ಫಾರ್ಮ್‌ನಲ್ಲಿ ಕಂಪನಿಯ ಕೋಡ್, ಪಿಎಫ್ ಖಾತೆ ಸಂಖ್ಯೆ, ವಿಳಾಸ, ರಾಜ್ಯ, ನಗರ, ಕೆಲಸಕ್ಕೆ ಸೇರಿದ ದಿನಾಂಕ ಇತರ ವಿವರಗಳನ್ನು ನೀಡಬೇಕು. ಅಂತೆಯೇ ವೈಯಕ್ತಿಕ ಮಾಹಿತಿಗಳಾದ ಹೆಸರು, ಮೊಬೈಲ್ ಸಂಖ್ಯೆ ಅಥವಾ ಜನ್ಮದಿನಾಂಕಗಳನ್ನೂ ನೀಡಬೇಕು. [PF ಹಿಂಪಾವತಿ ಇನ್ನು ಆನ್‌ ಲೈನ್ ಮೂಲಕ]

ಇವರಿಗೆ ಭವಿಷ್ಯದ ಪರಾಮರ್ಶೆಗಾಗಿ ಐಡಿ ನೀಡಲಾಗುತ್ತದೆ. ಇದರ ಆಧಾರದ ಮೇಲೆ ಸಂಬಂಧಪಟ್ಟ ಕಚೇರಿಯು ಸದಸ್ಯರನ್ನು ಸಂಪರ್ಕಿಸುತ್ತದೆ. ಅವರು ಭವಿಷ್ಯ ನಿಧಿ ನಗದೀಕರಿಸಿಕೊಳ್ಳುವುದು ಅಥವಾ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+