ಇನ್ಫೋಸಿಸ್ Q4 ಪ್ರಕಟ, ಲಾಭವೂ ಇಲ್ಲ, ಆದಾಯವೂ ಇಳಿಕೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13:ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಗುರುವಾರ ಪ್ರಕಟಿಸಿದೆ. ಜನವರಿ -ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 2.8ರಷ್ಟು ಇಳಿಕೆ ಕಂಡು 3,603 ಕೋಟಿ ರು ಗಳಿಸಿದೆ. ಜತೆಗೆ ಆದಾಯವೂ ಶೇ0.88ರಷ್ಟು ಇಳಿಕೆಯಾಗಿದೆ.

ಕಳೆದ ತ್ರೈಮಾಸಿಕದಲ್ಲಿ 3,708 ನಿವ್ವಳ ಲಾಭ ಗಳಿಸಿದ್ದ ಇನ್ಫೋಸಿಸ್ ಈ ತ್ರೈಮಾಸಿಕದಲ್ಲಿ ಕೊಂಚ ಇಳಿಕೆ ಕಂಡಿದೆ. ಸುಮಾರು17, 235 ಕೋಟಿ ಆದಾಯ ಹೊಂದಿದ್ದ ಇನ್ಫೋಸಿಸ್ ಈ ತ್ರೈಮಾಸಿಕದಲ್ಲಿ 3,570 ಕೋಟಿ ರು ಲಾಭ ಗಳಿಸುವ ನಿರೀಕ್ಷೆಯಿತ್ತು. ನಿರೀಕ್ಷೆಯಂತೆ ಲಾಭ ಬಂದಿದೆ.

Infosys Q4 profit falls 2.8%,Revenue fell

ಆದಾಯ: ಕಳೆದ ತ್ರೈಮಾಸಿಕಕ್ಕೆ ಹೋಲಿಸಿದೆ ಈ ತ್ರೈಮಾಸಿಕದಲ್ಲಿ ಆದಾಯ ಶೇ 0.88ರಷ್ಟು ಇಳಿಮುಖವಾಗಿದೆ. 17,120 ಕೋಟಿ ರು ಗಳಿಸಿದೆ. ಕಳೆದ ತ್ರೈಮಾಸಿಕದಲ್ಲಿ 17,273 ಕೋಟಿ ರು ಗಳಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys Q4 report: IT major Infosys has reported profit at Rs 3,603 crore for January-March quarter, degrowth of 2.8 percent against Rs 3,708 crore in previous quarter.
Please Wait while comments are loading...