ಸೆಲೊನಿಸ್ ಜೊತೆ ಕೈ ಜೋಡಿಸಿದ ಇನ್ಫೋಸಿಸ್
ಬೆಂಗಳೂರು, ಜೂನ್ 08: ದೇಶದ ಬೃಹತ್ ಐಟಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್, ಕೃತಕ ಬುದ್ಧಿಮತೆ ವಲಯದಲ್ಲಿ(ಎಐ) ಮುಂಚೂಣಿಯಲ್ಲಿರುವ ಸೆಲೊನಿಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯ ಉದ್ಯಮ ಗ್ರಾಹಕರ ಡಿಜಿಟಲ್ ಅಗತ್ಯಗಳನ್ನು ಒದಗಿಸಲು ಈ ಪಾಲುದಾರಿಕೆಯು ಎರಡೂ ಕಂಪನಿಗಳಿಗೆ ನೆರವಾಗಲಿದೆ.
ಈ ಕುರಿತು ಸೋಮವಾರ ಪ್ರಕಟಿಸಿರುವ ಇನ್ಫೋಸಿಸ್'' ಈ ಸಹಭಾಗಿತ್ವವು ಗ್ರಾಹಕರಿಗೆ ಗಮನಾರ್ಹವಾದ ಕಾರ್ಯಾಚರಣೆಯ ಉಳಿತಾಯದೊಂದಿಗೆ ದೀರ್ಘಾವಧಿಯ ಪರಿವರ್ತನೆ ಯೋಜನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನ ಸವಾಲುಗಳ ನಿರ್ವಹಣೆ ಮತ್ತು ಡಿಜಿಟಲ್ ಬದಲಾವಣೆಗೆ ಎದುರಾಗುವ ಸವಾಲುಗಳನ್ನು ನಿರ್ವಹಿಸಲು ಈ ಪಾಲುದಾರಿಕೆ ನೆರವಾಗಲಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯಮದ ಸಂಪನ್ಮೂಲವನ್ನು ಯೋಜಿತ ರೀತಿಯಲ್ಲಿ ನಿರ್ವಹಿಸುವ ಸಾಫ್ಟ್‌ವೇರ್ (ಇಆರ್‌ಪಿ) ಆಧುನೀಕರಣ ಮತ್ತು ವಹಿವಾಟಿನ ಗರಿಷ್ಟ ಸದ್ಬಳಕೆಯೂ ಇದರಿಂದ ಸಾಧ್ಯವಾಗುತ್ತದೆ.

ಒಟ್ಟಾರೆಯಾಗಿ, ಇನ್ಫೋಸಿಸ್ ಮತ್ತು ಸೆಲೋನಿಸ್ ಉದ್ಯಮ ಗ್ರಾಹಕರಿಗೆ ತಮ್ಮ ಡಿಜಿಟಲ್ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.











Click it and Unblock the Notifications