ಅಭಿವೃದ್ಧಿ ರೇಸ್ ನಲ್ಲಿ ಚೀನಾ ಹಿಂದಿಕ್ಕಿದ ಭಾರತ

ವಾಷಿಂಗ್ಟನ್, ಜೂ. 12 : ಪ್ರಸಕ್ತ ವರ್ಷ ಭಾರತದ ಆರ್ಥಿಕ ಅಭಿವೃದ್ಧಿ ದರ ಚೀನಾವನ್ನು ಹಿಂದಿಕ್ಕಿದೆ. ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಗೆ ಬರಲಿದ್ದು ಈ ಶೇ 7.5ರಷ್ಟು ಜಿಡಿಪಿ ಸಾಧನೆಯಾಗಲಿದೆ.

ಈ ವರ್ಷದ ಅಂತ್ಯಕ್ಕೆ ಭಾರತ ವಿಶ್ವ ಬ್ಯಾಂಕ್‌ನ ಪ್ರಮುಖ ಅರ್ಥ ವ್ಯವಸ್ಥೆಗಳ ಪ್ರಗತಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ತಿಳಿಸಿದ್ದಾರೆ.[ಚೀನಾ ಹಿಂದಕ್ಕೆ ಹಾಕಿದ್ದು ಹೇಗೆ]

gdp

ವಿಶ್ವಬ್ಯಾಂಕ್ ನ ಜಾಗತಿಕ ಆರ್ಥಿಕ ಮುನ್ನೋಟದ (ಜಿಇಪಿ) ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಶೇ. 4.4ರಷ್ಟು ಪ್ರಮಾಣದಲ್ಲಿ ಪ್ರಗತಿ ಕಾಣುವ ಅಂದಾಜಿದೆ. 2016ರಲ್ಲಿ ಇದು ಶೇ. 5.2 ಕ್ಕೆ ಏರಲಿದೆ ಎಂದು ಹೇಳಿದರು.

ಚೀನಾದ ಆರ್ಥಿಕತೆಗೆ ಹೋಲಿಸಿದರೆ ಭಾರತ ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ಕಚ್ಚಾತೈಲ ಬೆಲೆ ಇಳಿಮುಖ, ಕೇಂದ್ರ ಸರ್ಕಾರದ ಉತ್ತೇಜನಕಾರಿ ನೀತಿಗಳು ಆರ್ಥಿಕ ಅಭಿವೃದ್ಧಿಗೆ ನೆರವಾಗಿದೆ. ದಕ್ಷಿಣ ಏಷ್ಯಾದ ಪ್ರಗತಿ ಉತ್ತಮವಾಗಿದೆ ಎಂದು ತಿಳಿಸಿದರು. [ಎರಡು ವರ್ಷದಲ್ಲೇ ಅತಿಹೆಚ್ಚಿನ ಜಿಡಿಪಿ ಸಾಧನೆ]

ಆದರೆ ವಿವಿಧ ರಾಷ್ಟ್ರಗಳು ಆರ್ಥಿಕ ಕುಸಿತದ ಭೀತಿಯನ್ನು ಎದುರಿಸುತ್ತಿವೆ. ಕಚ್ಚಾ ತೈಲದ ಬೆಲೆ ಇಳಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚಳ ಮಾಡಲಾಗುತ್ತದೆ. ಇದು ಹಿನ್ನಡೆಗೆ ಕಾರಣವಾಗಬಹುದು. ಕೆಲ ದೇಶಗಳಲ್ಲಿ ಬಯಲಿಗೆ ಬಂದಿರುವ ಹಗರಣಗಳು ಆರ್ಥಿಕ ಕುಸಿತ ಉಂಟುಮಾಡಲಿವೆ ಎಂದು ವಿಶ್ಲೇಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+