ಕೋಟಿಗಳಲ್ಲಿ ಎಣಿಸುತ್ತಿರುವ Flipkart ಸಂಸ್ಥಾಪಕರು
ಬೆಂಗಳೂರು, ಅಕ್ಟೋಬರ್ 15: ಈ ಮಾಹಿತಿ ತಂತ್ರಜ್ಞಾನ ಯುಗ ನಿಜಕ್ಕೂ ಯಾರುಯಾರನ್ನೋ ಎಲ್ಲೆಲ್ಲಿಗೋ ಕರೆದೊಯ್ಯುತ್ತಿದೆ. ನಮ್ಮದೇ ಸಿಲಿಕಾನ್ ಕಣಿವೆಯಲ್ಲಿ ಇದಕ್ಕೆ ಹೆಚ್ಚೆಹೆಚ್ಚು ನಿದರ್ಶನಗಳು ಗೋಚರಿಸುತ್ತವೆ. ತಾಜಾ ನಿದರ್ಶನವೆಂದರೆ ದೇಶದ ವಿದ್ಯುನ್ಮಾನ ವಾಣಿಜ್ಯ ಕ್ಷೇತ್ರಕ್ಕೆ ಹೊಸ ಸ್ವರೂಪ ತೊಡಿಸಿದ ಯುವ ಜೋಡಿಯ ಯಶೋಗಾಥೆ.
ಭಾರತದ e-commerce ಕ್ಷೇತ್ರದ ಹರಿಕಾರರೆಂದೇ ಗುರುತಿಸಲ್ಪಡುವ. ದೇಶದ ಮುಂಚೂಣಿ ಕಂಪನಿಯಾದ Flipkart ಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಇಂದು e-commerceನಲ್ಲಿ ಹಿಮಾಲಯ ಶಿಖರವೇರಿ ಕುಳಿತಿದ್ದಾರೆ.
6 ವರ್ಷಗಳ ಹಿಂದೆ Amazon India ಕಂಪನಿಯನ್ನು ಬಿಟ್ಟು ಸಣ್ಣ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ Flipkart ಕಂಪನಿಗೆ ಚಾಲನೆ ನೀಡಿದ ಇವರಿಬ್ಬರೂ ಇಂದು ಕೋಟಿ ಕೋಟಿಗಳಲ್ಲಿ ದುಡಿಯುತ್ತಿದ್ದಾರೆ. ಐಐಟಿ ಶಿಕ್ಷಣ ಪಡೆದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಆರು ತಿಂಗಳ ಅವಧಿಯಲ್ಲಿ (2011ರ ಸೆಪ್ಟೆಂಬರ್ ರಿಂದ 2012ರ ಮಾರ್ಚ್) ತಲಾ 10.25 ಕೋಟಿ ರೂ ಗಳಿಸಿದ್ದಾರೆ.

ಅಮೆರಿಕದ e-commerce ಗಳಿಕೆ ಪೇಲವ
2012ರ ಆರ್ಥಿಕ ವರ್ಷದಲ್ಲಿ ಸಿಂಗಪುರ ಮೂಲದ ಕಂಪನಿಗೆ ಹಸ್ತಾಂತರವಾದ ನಂತರ Flipkart ಕಂಪನಿ ಮಾಲೀಕತ್ವದ ಗಳಿಕೆ ಇದಾಗಿದೆ. ಇದು ದೇಶದಲ್ಲಿನ e-commerceಗೆ ಸಾಣೆ ಹಿಡಿದಂತಿದೆ. ಇದರ ಅಮೆರಿಕದ e-commerce ಗಳಿಕೆಯೂ ಪೇಲವವಾಗಿ ಕಂಡುಬರುತ್ತದೆ. ತಾಯಂದಿರಿಗೆ ಶಾಪಿಂಗ್ ಮಾಡುವ ಅವಕಾಶ ಕಲ್ಪಿಸುವ ಅಮೆರಿಕದ Zulily ಸಹಸ್ಥಾಪಕ ಡರೇಲ್ ಕೆವೆನ್ಸ್ ಕಳೆದ ವರ್ಷ ಬೋನಸ್ ಸೇರಿದಂತೆ ಜೇಬಿಳಿಸಿದ್ದು ಕೇವಲ 1.74 ಕೋಟಿ ರೂ. ಅಷ್ಟೇ.

mobiles, stationery, perfumes ಮಾರಾಟ ವೇದಿಕೆ
mobiles phones, stationery ಮತ್ತು perfumesಗಳಿಂದ ಹಿಡಿದು ಅನೇಕ ರೀತಿಯ ಗ್ರಾಹಕ ಉತ್ಪನ್ನಗಳನ್ನು ಯಶಸ್ವಿಯಾಗಿ online ಮೂಲಕ ಮಾರಾಟ ಮಾಡುತ್ತಿರುವ Flipkart ಕಂಪನಿಯು South African media giant Naspers, Tiger Global, Accel Partners, Dragoneer, Morgan Stanley, Sofina and Vulcan Capital ಮೂಲಕ ಸ್ಥಾಪನೆಯಾದಾಗನಿಂದಲೂ ಇದುವರೆಗೂ 3,315 ಕೋಟಿ ರೂ. ಬಂಡವಾಳ ಎತ್ತಿದೆ. ತಾಜಾ ಆಗಿ 360 ಶತಕೋಟಿ ಡಾಲರ್ ನಿಧಿ ಕ್ರೋಡೀಕರಿಸಿದ Flipkart ಕಂಪನಿಯ ಇಂದಿನ ಮಾರುಕಟ್ಟೆ ಮೌಲ್ಯ 9,200 ಕೋಟಿ ರೂ.

ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್
ಕಳೆದ 18 ತಿಂಗಳಿಂದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ತಮ್ಮದೇ Flipkart ಕಂಪನಿಯಲ್ಲಿ ತಮ್ಮ ಷೇರು ಹೂಡಿಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಕಂಪನಿಯಲ್ಲಿ ಅವರ ಪಾಲು ಶೇ. 25ಕ್ಕೆ ಜಿಗಿದಿದ್ದು ಅದರ ಮಾರುಕಟ್ಟೆ ಮೌಲ್ಯ 2,250 ಕೋಟಿ ರೂ. ಬಂದು ನಿಂತಿದೆ.

ವಾರ್ಷಿಕ 3,680 ಕೋಟಿ ರೂ. ವಸ್ತು ಮಾರಾಟ
ಕಂಪನಿಯು ವಾರ್ಷಿಕ 3,680 ಕೋಟಿ ರೂ. ವಸ್ತುಗಳ ಮಾರಾಟಕ್ಕೆ ವೇದಿಕೆಯಾಗಿದೆ. ಮುಂದಿನ ಒಂದು ವರ್ಷದಲ್ಲಿ ಇದನ್ನು ದ್ವಿಗುಣಗೊಳಿಸುವ ಗುರಿ ಕಂಪನಿಯದ್ದಾಗಿದೆ. ಅಂದಹಾಗೆ, 2016 ವೇಳೆಗೆ ಭಾರತದಲ್ಲಿ e-commerce ಮಾರುಕಟ್ಟೆ ಗಾತ್ರ 54,000 ಕೋಟಿ ರೂ. ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಸಚಿನ್ -ಬಿನ್ನಿ ಬನ್ಸಾಲ್ ಕಂಪನಿ ಬಿಡ್ತಾರಾ?
ವಾಸ್ತವವಾಗಿ ಭಾರತದಲ್ಲಿ e-commerce ಮಾರುಕಟ್ಟೆಯ ವಹಿವಾಟು ಮೂಲಾಧಾರಗಳು ಪೆಡುಸಾಗಿವೆ. e-commerce industry ವ್ಯವಸ್ಥಿತವಾಗಿಲ್ಲ ಎಂಬ ದೂರು ಇದೆ. ಈ ಮಧ್ಯೆ, Flipkart ಕಂಪನಿ ಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಕಂಪನಿಯನ್ನು ತೊರೆಯುವ ಆಲೋಚನೆಯಲ್ಲಿದ್ದಾರೆ. ಹಾಗೇನಾದರೂ ಆದರೆ ಕಂಪನಿಯು ಭಾರಿ ಗಾತ್ರ ಪರಿಹಾರ ಮೊತ್ತವನ್ನು ಅವರ ಕೈಗಿಡಬೇಕಾಗುತ್ತದೆ. (ಚಿತ್ರ ಕೃಪೆ- www.livemint.com)












Click it and Unblock the Notifications