ಭಾರತ-ಚೀನಾ ಗಡಿ ಉದ್ವಿಗ್ನತೆ: ಚೀನಾದ ಉತ್ಪನ್ನಗಳ ಬಹಿಷ್ಕಾರಕ್ಕೆ ಪಟ್ಟಿಯನ್ನು ಪ್ರಕಟಿಸಿದ CAIT

ನವ ದೆಹಲಿ, ಜೂನ್ 17: ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮೇಡ್ ಇನ್ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕರೆ ನೀಡಿದೆ. ಇದಕ್ಕಾಗಿ, ಸಿಎಐಟಿ 500 ಕ್ಕೂ ಹೆಚ್ಚು ಚೀನೀ ಉತ್ಪನ್ನಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

Recommended Video

      Virat , sachin and kapil are now also the names of streets in Melbourne | Oneindia Kannada

      ಸಿಎಐಟಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಆಟಿಕೆಗಳು, ಬಟ್ಟೆ, ಜವಳಿ, ಉಡುಪು, ಅಡಿಗೆ ವಸ್ತುಗಳು, ಪೀಠೋಪಕರಣಗಳು, ಯಂತ್ರಾಂಶ, ಪಾದರಕ್ಷೆಗಳು, ಕೈಚೀಲಗಳು, ಸಾಮಾನುಗಳು, ಎಲೆಕ್ಟ್ರಾನಿಕ್ಸ್, ಸೌಂದರ್ಯವರ್ಧಕಗಳು ಮತ್ತು ಉಡುಗೊರೆ ವಸ್ತುಗಳು, ಕೈಗಡಿಯಾರಗಳು, ರತ್ನಗಳು ಮತ್ತು ಆಭರಣಗಳು, ಲೇಖನ ಸಾಮಗ್ರಿಗಳು, ಕಾಗದ, ಆರೋಗ್ಯ ಉತ್ಪನ್ನಗಳು ಮತ್ತು ವಾಹನ ಭಾಗಗಳು ಸೇರಿವೆ.

      ಲಡಾಖ್ ಗಡಿಯಲ್ಲಿನ ಚೀನಾ-ಭಾರತ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಸಿಎಐಟಿ "ಚೀನಾದ ವರ್ತನೆ ದೇಶದ (ಭಾರತದ) ಹಿತಾಸಕ್ತಿಗೆ ವಿರುದ್ಧವಾಗಿದೆ" ಎಂದು ಹೇಳಿದೆ.

      India-China Border Dispute:CAIT Releases List Of 500 Chinese Itmes To Boycotted

      ಸಿಎಐಟಿ 500 ಕ್ಕೂ ಹೆಚ್ಚು ವಸ್ತುಗಳನ್ನು ಒಳಗೊಂಡ 'ಇಂಡಿಯನ್ ಗೂಡ್ಸ್ - ಅವರ್ ಪ್ರೈಡ್' ಅಭಿಯಾನದಡಿಯಲ್ಲಿ ಚೀನಾದ ಸರಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಸಿಎಐಟಿ ಪ್ರಕಾರ, ಭಾರತೀಯ ಸರಕುಗಳನ್ನು ಬಳಸಬೇಕು. ಸಿಎಐಟಿ ಇದಕ್ಕಾಗಿ ಗುರಿಗಳನ್ನು ನಿಗದಿಪಡಿಸಿದೆ. ಮೊದಲ ಹಂತದಲ್ಲಿ, ಸಿಎಐಟಿ 2021ರ ಡಿಸೆಂಬರ್ ವೇಳೆಗೆ ಚೀನಾದಿಂದ ಆಮದನ್ನು 13 ಬಿಲಿಯನ್ ಡಾಲರ್ (1 ಲಕ್ಷ ಕೋಟಿ ರೂ) ಕಡಿಮೆ ಮಾಡುವ ಗುರಿ ಹೊಂದಿದೆ. ಪ್ರಸ್ತುತ, ಚೀನಾದಿಂದ ಭಾರತದ ವಾರ್ಷಿಕ ಆಮದು 5.25 ಲಕ್ಷ ಕೋಟಿ ರೂಪಾಯಿ ಅಥವಾ 70 ಬಿಲಿಯನ್ ಡಾಲರ್‌ನಷ್ಟಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+