ತೆರಿಗೆ ವಂಚಕರ ಪಟ್ಟಿಯಲ್ಲಿ ಗುಜರಾತಿಗಳೇ ಟಾಪ್!
ನವದೆಹಲಿ, ಮಾ.31: ತೆರಿಗೆ ವಂಚಕರ ಹೆಸರನ್ನು ಬಹಿರಂಗಗೊಳಿಸಿ ಮಾನ ಕಳೆಯುವ ಪ್ರಕ್ರಿಯೆಗೆ ಆದಾಯ ತೆರಿಗೆ ಚಾಲನೆ ನೀಡಿದೆ. 500ಕೋಟಿ ರು.ಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 18 ಕಂಪನಿಗಳನ್ನು ಇಲಾಖೆ ಹೆಸರಿಸಿದೆ.ಈ ಪೈಕಿ 11 ಕಂಪನಿಗಳು ಗುಜರಾತ್ ಮೂಲದ ಕಂಪನಿಗಳು ಬೊಕ್ಕಸಕ್ಕೆ ನಷ್ಟ ಉಂಟು ಮಾಡಿವೆ ಎಂಬುದು ಹುಬ್ಭೇರಿಸುವ ಸಂಗತಿ.
ತೆರಿಗೆ ಪಾವತಿ ಮಾಡದೇ ಇರುವ ಕಂಪನಿಗಳ ಹೆಸರನ್ನು ಈಗಾಗಲೇ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕವಾಗಿ ತೆರಿಗೆ ವಂಚಕರ ಹೆಸರನ್ನು ಪ್ರಕಟಿಸುವ ಮೂಲಕ ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸಲು ಸಾಧ್ಯ ಎಂದು ಇಲಾಖೆ ಹೇಳಿದೆ. [ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]

ಗುಜರಾತ್ ಮೂಲದ ಗೋಲ್ಡ್ ಸುಖ್ ಟ್ರೇಡ್, ಸೋಮಾನಿ ಸಿಮೆಂಟ್ಸ್, ಬ್ಲ್ಯೂ ಇನ್ ಫಾರ್ಮೆಶನ್ ಟೆಕ್ನಾಲಜಿ ಲಿಮಿಟೆಡ್ ಕಂಪನಿ ತೆರಿಗೆ ಬಾಕಿ ಉಳಿಸಿಕೊಂಡ ಪ್ರಮುಖ ಕಂಪನಿಗಳಾಗಿವೆ.. ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಕಂಪನಿಗಳ PAN ನಂಬರ್ ವಿಳಾಸಗಳನ್ನು ನೀಡಲಾಗಿದೆ.[ಬಜೆಟ್: ಆದಾಯ ತೆರಿಗೆ ವಿನಾಯಿತಿ, ಪಾವತಿ ಮಿತಿ]
* ಸೋಮಾನಿ ಸಿಮೆಂಟ್ಸ್: 27.47 ಕೋಟಿ ರು.
* ಬ್ಲೂ ಇನ್ಫಾರ್ಮೇಷನ್ ಟೆಕ್ನಾಲಜಿ : 75.11 ಕೋಟಿ ರು
* ಜುಪಿಟರ್ ಬಿಸಿನೆಸ್ : 21.31 ಕೋಟಿ ರು
* ಹಿರಾಕ್ ಬಯೋಟೆಕ್ : 18.54 ಕೋಟಿ ರು
* ಬಯೋ ಫಾರ್ಮಾ ಹಾಗೂ ಹೆಲ್ತ್ ಕೇರ್ ಲಿ : 17.69 ಕೋಟಿ ರು
* ಬಾನ್ಯಾಯ್ ಅಂಡ್ ಬೆರಿ ಅಲಾಯ್ಸ್ : 17.48 ಕೋಟಿ ರು.
* ಲಕ್ಷ್ಮಿನಾರಾಯಣ್ ಟಿ ಠಾಕೂರ್ : 12.49 ಕೋಟಿ ರು.
* ವಿರಾಗ್ ಡೈಯಿಂಗ್ ಅಂಡ್ ಪೈಯ್ಟಿಂಗ್ : 18.57 ಕೋಟಿ ರು.
* ಪೂನಮ್ ಇಂಡಸ್ಟ್ರೀಸ್ : 15.84 ಕೋಟಿ ರು
* ಕುವರ್ ಅಜಯ್ ಫುಡ್ ಪ್ರೈ ಲಿ: 15 ಕೋಟಿ ರು
* ಜೈಪುರ ಮೂಲದ ಗೋಲ್ಡ್ ಸುಖ್ ಟ್ರೇಡ್ ಇಂಡಿಯಾ : 75.47 ಕೋಟಿ ರು.
* ಕೋಲ್ಕತ್ತಾ ಮೂಲದ ವಿಕ್ಟರ್ ಕ್ರೆಡಿಟ್ ಅಂಡ್ ಕನ್ ಸ್ಟ್ರಕ್ಷನ್ : 13.81 ಕೋಟಿ ರು.
* ಮುಂಬೈ ಮೂಲದ ನೊಬ್ಲ್ ಮರ್ಚಂಡೈಸ್ : 11.93 ಕೋಟಿ ರು.
* ಪುಣೆ ಮೂಲದ ಜೆ.ಕೆ ಧಾರ್ನೆ : 38.31 ಕೋಟಿ ರು
ಈ ಸುದ್ದಿಯನ್ನು ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications