ಫೇಸ್ ಬುಕ್, ಗೂಗಲ್ ಕಚೇರಿಯಲ್ಲಿ ಮೋದಿ ಸಂಚಾರ
ಕ್ಯಾಲಿಫೋರ್ನಿಯಾ, ಸೆ. 28: ಸಿಲಿಕಾನ್ ವ್ಯಾಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗೂಗಲ್ ಹಾಗೂ ಫೇಸ್ ಬುಕ್ ಸಂಸ್ಥೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು ನಂತರ ಫೇಸ್ ಬುಕ್ ನಲ್ಲಿ ಎಲ್ಲರ ಪ್ರೊಫೈಲ್ ಪಿಕ್ಚರ್ ಗಳು ಸಮೂಹ ಸನ್ನಿಯಂತೆ ತ್ರಿವರ್ಣಕ್ಕೆ ತಿರುಗಿದ್ದು ತಿಳಿದಿರಬಹುದು.
ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝಕರ್ ಬರ್ಗ್ ಹಾಗೂ ಭಾರತದ ಪ್ರಧಾನಿ ಮೋದಿ ಅವರಂತೆ ತ್ರಿವರ್ಣದ ಹಿನ್ನಲೆಯುಳ್ಳ ಚಿತ್ರವನ್ನು ಹೊಂದಬಹುದು. ಇಂದೊಂಥರ ಫೇಸ್ ಬುಕ್ ಸಂಸ್ಥೆಗೆ ಮೋದಿ ಹಾಗೂ ಮೋದಿ ಸರ್ಕಾರವನ್ನು ಆಯ್ಕೆ ಮಾಡಿದವರು ಥ್ಯಾಂಕ್ಸ್ ಹೇಳಿದ್ದಂತೆ ಇದೆ. [ಸಿಲಿಕಾನ್ ವ್ಯಾಲಿಯಲ್ಲಿ ಮೋದಿ, ಡಿಜಿಟಲ್ ಇಂಡಿಯಾ ಮೋಡಿ]
ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಾದ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಇತ್ಯಾದಿಗಳಿಗೆ ಹೂಡಿಕೆ ಹಾಗೂ ಪ್ರಚಾರಕ್ಕಾಗಿ ಫೇಸ್ ಬುಕ್ ಅತ್ಯಗತ್ಯ. ಮೋದಿ ಅವರ ಆಹ್ವಾನ ಹಾಗೂ ಮನವಿಗೆ ಝುಕರ್ ಬರ್ಗ್ ಕೂಡಾ ಸ್ಪಂದಿಸಿದ್ದಾರೆ ಅದರೆ, ಇಂಟರ್ನೆಟ್.ಆರ್ಗ್ ವಿಶ್ವದೆಲ್ಲೆಡೆ ಪಸರಿಸುವ ಯೋಜನೆ ಅಳವಡಿಕೆಗೆ ನೆರವು ಕೇಳಿದ್ದಾರೆ. [ಮೋದಿ ಮಾಡಿದ ಸಿಡಿಲಿನಂಥ ಭಾಷಣ ಕೇಳಿ]
ಫೇಸ್ಬುಕ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಸುಮಾರು 40 ಪ್ರಶ್ನೆಗಳನ್ನು ಸ್ವೀಕರಿಸಿ ಉತ್ತರಿಸಿದ ಮೋದಿ ಅವರು ತಾಯಿಯನ್ನು ಸ್ಮರಿಸಿ ಕಣ್ಣೀರಿಟ್ಟಿದ್ದು ಮೋದಿ ಅಭಿಮಾನಿಗಳ ಕಣ್ಣು ಒದ್ದೆ ಮಾಡುವಂತಾಯಿತು. ಮಾರ್ಕ್ ಅವರ ಅಮೆರಿಕನ್ ಇಂಗ್ಲೀಷ್ ಹಾಗೂ ಮೋದಿ ಅವರ ಹಿಂದಿ ಉತ್ತರ ಸಂವಾದದ ಮುಖ್ಯಾಂಶವಾಗಿತ್ತು. ಫೇಸ್ ಬುಕ್ ಹಾಗೂ ಗೂಗಲ್ ಸಂಸ್ಥೆಯಲ್ಲಿ ಮೋದಿ ಸಂಚಾರ ಚಿತ್ರಗಳು ಇಲ್ಲಿವೆ.

ಮೋದಿ ಅವರನ್ನು ಸ್ವಾಗತಿಸಿದ ಫೇಸ್ ಬುಕ್ ದಂಪತಿ
ಮೋದಿ ಅವರನ್ನು ಸ್ವಾಗತಿಸಿದ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝಕರ್ ಬರ್ಗ್ ಹಾಗೂ ಅವರ ಪತ್ನಿ ಪ್ರೆಸಿಲ್ಲಾ ಚಾನ್.[ಸ್ಯಾನ್ ಹೋಸೆಯಲ್ಲಿ ಮೋದಿ ಮಾತು]

ಫೇಸ್ ಬುಕ್ ಇಂಡಿಯಾ ಕನೆಕ್ಷನ್ ಹೀಗಿದೆ
ಫೇಸ್ ಬುಕ್ ಇಂಡಿಯಾ ಕನೆಕ್ಷನ್ ಹೀಗಿದೆ ನೋಡಿ ಎಂದು ಮೋದಿಗೆ ವಿವರಿಸುತ್ತಿರುವ ಮಾರ್ಕ್ ಝಕರ್ ಬರ್ಗ್.

ಫೇಸ್ ಬುಕ್ ಕಚೇರಿಯ ಟೌನ್ ಹಾಲ್ ನಲ್ಲಿ
ಫೇಸ್ ಬುಕ್ ಕಚೇರಿಯ ಟೌನ್ ಹಾಲ್ ನಲ್ಲಿ ಕಪ್ಪು ಸೂಟ್ ಹಾಗೂ ನೇರಳೆ ಟೈ ತೊಟ್ಟ ಮಾರ್ಕ್ ಹಾಗೂ ನೆಹರೂ ಕೋಟ್ ಧರಿಸಿದ ಮೋದಿ ಅವರು ಸಂವಾದ ಕಾರ್ಯಕ್ರಮಕ್ಕೂ ಮುನ್ನ ಕಂಡಿದ್ದು ಹೀಗೆ...

ಫೇಸ್ ಬುಕ್ ನ ಅತ್ಯಂತ ಜನಪ್ರಿಯ ವ್ಯಕ್ತಿ ಮೋದಿ
ಫೇಸ್ ಬುಕ್ ನ ಅತ್ಯಂತ ಜನಪ್ರಿಯ ವ್ಯಕ್ತಿ ಮೋದಿ ಅವರ ಅತಿ ಜನಪ್ರಿಯ ಪೋಸ್ಟ್ ಗಳನ್ನು ಪ್ರದರ್ಶನಕ್ಕಿಟ್ಟು ಮೋದಿ ಅವರನ್ನು ಸ್ವಾಗತಿಸಿದ ಫೇಸ್ ಬುಕ್.

ಭಾರತದ ಅಭಿವೃದ್ಧಿ ಕನಸನ್ನು ಬಿಚ್ಚಿಟ್ಟ ಮೋದಿ
ಭಾರತದ ಅಭಿವೃದ್ಧಿ ಕನಸನ್ನು ಬಿಚ್ಚಿಟ್ಟ ಮೋದಿ ಅವರು ದೇಶದ ಆರ್ಥಿಕತೆಯನ್ನು 8 ಟ್ರಿಲಿಯನ್ ಡಾಲರ್ (500 ಲಕ್ಷ ಕೋಟಿ ರೂ.) ಇರುವ ದೇಶದ ಆರ್ಥಿಕತೆಯನ್ನು 20 ಟ್ರಿಲಿಯನ್ ಡಾಲರ್ಗೆ (1250 ಲಕ್ಷ ಕೋಟಿ ರೂ.) ಹೆಚ್ಚಿಸುವುದೇ ಗುರಿ ಎಂದರು.

ಸಾಮಾಜಿಕ ಜಾಲತಾಣಗಳು ಜಗತ್ತನ್ನೇ ಬೆಸೆಯುತ್ತಿವೆ
ಸಾಮಾಜಿಕ ಜಾಲತಾಣಗಳು ಇಂದು ಜಗತ್ತನ್ನೇ ಬೆಸೆಯುತ್ತಿವೆ. ಇಲ್ಲಿನ ನೌಕರರು ಕೇವಲ ಕಂಪನಿಯ ಆದಾಯ ಹೆಚ್ಚಳಕ್ಕಾಗಿ ಕೆಲಸ ಮಾಡುತ್ತಿಲ್ಲ. ಜಗತ್ತಿನ ಲಕ್ಷಾಂತರ ಜನರಿಗೆ ಪ್ರೇರೇಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೋದಿ ಹೊಗಳಿದರು.

ಮೋದಿ ಆಗಮನಕ್ಕೆ ಬಾಲಿವುಡ್ ಸಂಗೀತದ ಹಿಮ್ಮೇಳ
ಫೇಸ್ ಬುಕ್ ಕಚೇರಿಯಲ್ಲಿ ಸಂವಾದಕ್ಕೆ ಬಂದ ಮೋದಿ ಅವರ ಬರುತ್ತಿದ್ದಂತೆ 'ದೇಶ್ ರಂಗೀಲ ರಂಗೀಲ' ಹಾಗೂ ಧೂಮ್ ಮಚಾಲೆ ' ಹಾಡುಗಳ ಹಿಮ್ಮೇಳ ಕೇಳಿ ಬಂದಿತು.

ತಾಯಿಯ ನೆನೆದು ಭಾವುಕರಾದ ಮೋದಿ
ನಾನು ಬಡ ಕುಟುಂಬದಿಂದ ಬಂದವನು. ನನ್ನ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಕುಟುಂಬ ವಹಿಸಿದೆ. ನನ್ನ ತಾಯಿ ಅನಕ್ಷರಸ್ಥೆ. ತಂದೆ ಈಗ ನಮ್ಮ ಜತೆ ಇಲ್ಲ. ಮಾಧ್ಯಮಗಳ ಮೂಲಕವೇ ನನ್ನ ತಾಯಿ ನನ್ನ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಮೋದಿ ಸಂವಾದದ ಸಂದರ್ಭದಲ್ಲಿ ಹೇಳಿದರು.

ಅಹಿಂಸೋ ಪರಮೋ ಧರ್ಮಃ
ಫೇಸ್ ಬುಕ್ ನ ರಿಯಲ್ ವಾಲ್ ನಲ್ಲಿ 'ಅಹಿಂಸೋ ಪರಮೋ ಧರ್ಮಃ, ಸತ್ಯಮೇವ ಜಯತೇ' ಎಂದು ಗುಜರಾತಿ ಭಾಷೆಯಲ್ಲಿ ಬರೆದ ಪ್ರಧಾನಿ ಮೋದಿ.

ಜ್ಞಾನ ವೃದ್ಧಿಗೆ ಅಂತರ್ಜಾಲ ಸರಳ ಪಠ್ಯವಾಗಿದೆ
ಈ ಹಿಂದೆ ಸರ್ಕಾರ ಹಾಗೂ ಜನರ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿತ್ತು. ಸಾಮಾಜಿಕ ಜಾಲತಾಣಗಳಿಂದ ಈಗ ಜನರು ನೇರವಾಗಿ ಸರ್ಕಾರದೊಂದಿಗೆ ಸಂವಹನ ನಡೆಸಬಹುದು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೆ

ಆಡಳಿತದ ಮೇಲೆ ಇದು ಪ್ರಭಾವ ಬೀರಿದೆಯೇ
ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನಾನು ಪ್ರಧಾನಿಯಾಗುತ್ತೇನೆ ಎಂದು ಊಹಿಸಿಯೂ ಇರಲಿಲ್ಲ. ಸಾಮಾಜಿಕ ಜಾಲತಾಣದಿಂದಾಗಿಯೇ ಜನರು ನನ್ನನ್ನು ಗುರುತಿಸಿ, ಒಪ್ಪಿಕೊಂಡರು












Click it and Unblock the Notifications