• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗುರಂಗಿನ ವಿನ್ಯಾಸದ ಉತ್ಪನ್ನಗಳಿಗೆ ಹೊಸ ನಿಲ್ದಾಣ 'ಇಕಿಕಾಯ್'

|

ಚೆಂದ ಚೆಂದದ ವಿನ್ಯಾಸದ ಉಡುಪುಗಳು, ಮನೆಯ ವಿನ್ಯಾಸ ಯಾರಿಗೆ ಇಷ್ಟವಾಗುವುದಿಲ್ಲ? ವಿನ್ಯಾಸ ಎನ್ನುವುದು ಒಂದು ಕಲೆ. ಕಲಾವಿದ ಶ್ರದ್ಧೆಯಿಂದ ಕಲಾಕೃತಿಯನ್ನು ರಚಿಸುವಷ್ಟೇ ಸೃಜನಶೀಲತೆ ಇದಕ್ಕೆ ಬೇಕು. ಇಂತಹ ಕಲಾಕೃತಿಗಳು ನಿಮ್ಮ ಮನೆಯನ್ನು ತುಂಬಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆಯಲ್ಲವೇ? ಹಾಗಾದರೆ ನೀವು 'ಇಕಿಕಾಯ್‌'ಗೆ ಒಮ್ಮೆ ಭೇಟಿ ನೀಡಲೇಬೇಕು.

ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಹಾಗೂ ಮನೆಯ ಅಲಂಕಾರಕ್ಕೆ ಬೇಕಾದ ಸುಂದರವಾದ ವಸ್ತುಗಳನ್ನು 'ಇಕಿಕಾಯ್'ಎಂಬ ವಿನೂತನ ಇ-ಕಾಮರ್ಸ್ ವೆಬ್‌ಸೈಟ್‌ನಿಂದ ತರಿಸಿಕೊಳ್ಳಬಹುದು. ಇಲ್ಲಿ 'ಸುಂದರ'ವಾದ ವಸ್ತುವನ್ನು ಹುಡುಕಲು ನಿಮಗೆ ಶ್ರಮವಿಲ್ಲ. ಏಕೆಂದರೆ ಇಲ್ಲಿ ಸಿಗುವುದೆಲ್ಲವೂ ಸುಂದರವಾಗಿರುವುದೇ. ನಿಮ್ಮ ಅಭಿರುಚಿ, ಆಸಕ್ತಿ, ಸೌಂದರ್ಯಪ್ರಜ್ಞೆಗೆ ಅನುಗುಣವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದಷ್ಟೇ ನಿಮಗಿರುವ ಜವಾಬ್ದಾರಿ.

ನಿಮಗೆ ಅಗತ್ಯವಾದ ವಸ್ತುಗಳು, ಉತ್ಪನ್ನಗಳನ್ನು ಖರೀದಿಸಲು ಹತ್ತಾರು ಇ-ಕಾಮರ್ಸ್ ತಾಣಗಳಿವೆ. ಆದರೆ 'ಇಕಿಕಾಯ್ಸ' ಸೌಂದರ್ಯೋಪಾಸನೆಗೆಂದೇ ಮೀಸಲಾಗಿರುವ ವಿಭಿನ್ನ ಹಾಗೂ ವಿಶಿಷ್ಟ ಇ-ಕಾಮರ್ಸ್ ತಾಣ. ಏಕೆಂದರೆ ಇಲ್ಲಿ ಲಭ್ಯವಾಗುವ ವಸ್ತುಗಳು ವೆಬ್‌ಸೈಟ್‌ನ ಪಾಲುದಾರ ಸಂಸ್ಥೆಗಳೇ ವಿಶೇಷವಾಗಿ ವಿನ್ಯಾಸಗೊಳಿಸಿರುವಂತಹವು. ಕಲಾವಿದರು, ಮಹಿಳೆಯರೇ ಮುನ್ನಡೆಸುವ ಸಣ್ಣ ಉದ್ದಿಮೆಗಳು ಮತ್ತು ಸಾಮಾಜಿಕ ಉದ್ಯಮಶೀಲರು ಹಾಗೂ ಎನ್‌ಜಿಒಗಳು 'ಇಕಿಕಾಯ್'ನ ಪಾಲುದಾರರು.

'ನಾವು ಸಾಮಾಜಿಕ ಬದಲಾವಣೆ ಹಾಗೂ ಜೀವನಕ್ರಮದ ಮೇಲೆ ಪ್ರಭಾವ ಬೀರುವತ್ತ ಸಾಗುವುದಕ್ಕೆ ಬದ್ಧರಾಗಿದ್ದೇವೆ. ಗ್ರಾಹಕರಿಗೆ ಪರಿಸರಸ್ನೇಹಿ, ಸಾವಯವ, ಕರಕುಶಲ ಮತ್ತು ಸಾಮಾಜಿಕ ಹೆಜ್ಜೆಗುರುತನ್ನು ಹೊಂದಿರುವ ಗುಣಮಟ್ಟದ ಜೀವನಶೈಲಿ ಉತ್ಪನ್ನಗಳನ್ನು ಒದಗಿಸುತ್ತಿದ್ದೇವೆ' ಎಂದು ಇಕಿಕಾಯ್ ತಾಣ ತಿಳಿಸಿದೆ.

'ಇಕಿಕಾಯ್' ಒಳಹೊಕ್ಕರೆ ನಿಮಗೆ ಭವ್ಯವಾದ ಲೋಕ ತೆರೆದುಕೊಳ್ಳುತ್ತದೆ. ಆಕರ್ಷಕ ವಿನ್ಯಾಸದ ಕಿವಿಯೋಲೆ, ಮೂಗುತಿ, ಸರಗಳು, ಕೈಚೀಲಗಳು, ಸ್ಟೋಲ್ ಇನ್ನಿತರ ಉಡುಪುಗಳು ಮನಸೂರೆಗೊಳ್ಳುತ್ತವೆ. ಇಷ್ಟೇ ಅಲ್ಲ, ಮಹಿಳೆಯರು ಹಾಗೂ ಮಕ್ಕಳಿಗೆ ಎಲ್ಲಾ ಬಗೆಯ ತರಹೇವಾರಿ ದಿರಿಸುಗಳು ಲಭ್ಯ.

ಹಾಗೆಯೇ ಇಲ್ಲಿನ ಹೋಮ್ ಡೆಕೋರ್ ಕಿಟಕಿಯೊಳಗೆ ಇಣುಕಿದರೆ ವಿಸ್ಮಯಕಾರಿ ಉತ್ಪನ್ನಗಳು ಕಣ್ಮನ ಸೆಳೆಯುತ್ತವೆ. ಮನೆಯ ಶೋಕೇಸ್, ಬೆಡ್‌ರೂಂ, ಕಿಚನ್, ಬಾತ್‌ರೂಮ್ ಹೀಗೆ ಎಲ್ಲೆಲ್ಲಿ ಅಲಂಕರಿಸಲು ಜಾಗವಿದೆಯೋ ಅಲ್ಲೆಲ್ಲ ಈ ವಸ್ತುಗಳನ್ನು ಇರಿಸಿ ಮನೆಯ ಅಂದವನ್ನು ಹೆಚ್ಚಿಸಬಹುದು. ಜತೆಗೆ, ಆರ್ಟ್ ವಿಂಡೋ ತೆರೆದರೆ ವರ್ಣರಂಜಿತ ಕಲಾಕೃತಿಗಳ ರಾಶಿಯೇ ಕಾಣಿಸುತ್ತದೆ. ಮನೆ, ಕಚೇರಿಯ ಗೋಡೆಗಳ ಸೊಬಗನ್ನು ಈ ಕಲಾಕೃತಿಗಳು ಹೆಚ್ಚಿಸಬಲ್ಲವು.

ಅಂದಹಾಗೆ, ಈ ಎಲ್ಲ ಉತ್ಪನ್ನಗಳನ್ನು ವಿವಿಧ ಸಹಕಾರಿ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸಾಮಾಜಿಕ ಕೂಟಗಳು ಸ್ವತಃ ತಯಾರಿಸುತ್ತಿವೆ. ತಾಣದಲ್ಲಿ ಇನ್ನೂ ಏನೇನಿದೆ? ಆಸಕ್ತಿ ಇದ್ದರೆ ikikai.co ತಾಣಕ್ಕೆ ಭೇಟಿ ನೀಡಬಹುದು.

English summary
Ikikai- a new E Commerce website brings you shopping for women fashion, kids clothing, art and home decor products with creating social impact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X