ಐಡಿಯಾ ಸೆಲ್ಯುಲಾರ್ ನಿಂದ ಹೊಸ ಪ್ರೀಪೇಯ್ಡ್ ಆಫರ್

ಬೆಂಗಳೂರು, ನವೆಂಬರ್ 02: ರಿಲಯನ್ಸ್ ಜಿಯೋ ವಿರುದ್ಧ ಪೈಪೋಟಿ ನೀಡಲು ದೇಶದ ಟೆಲಿಕಾಂ ಕಂಪನಿಗಳು ಆಫರ್ ಗಳ ಮೇಲೆ ಆಫರ್ ನೀಡುತ್ತಿವೆ. ಏರ್ ಟೆಲ್, ವೋಡಾಫೋನ್ ನಂತರ ಐಡಿಯಾ ಸೆಲ್ಯುಲಾರ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಕೊಡುಗೆ ನೀಡುತ್ತಿದೆ.

ವೊಡಾಫೋನ್ ನ 159 ರೂಪಾಯಿ ಯೋಜನೆ ಘೋಷಿಸಿದ ಬಳಿಕ ಐಡಿಯಾ ಕೂಡ 159 ರೂಪಾಯಿ ರೀಚಾರ್ಜ್ ಯೋಜನೆ ನೀಡುತ್ತಿದೆ. ಎರಡೂ ಯೋಜನೆಗಳಲ್ಲಿ ಗ್ರಾಹಕರಿಗೆ ಒಂದೇ ರೀತಿಯ ಲಾಭ ಸಿಗಲಿದೆ. ವೋಡಾಫೋನ್ ಹಾಗೂ ಐಡಿಯಾ ಸಂಸ್ಥೆ ವಿಲೀನವಾದ ಬಳಿಕವೂ ಪ್ರತ್ಯೇಕ ರೀಚಾರ್ಜ್ ಯೋಜನೆಗಳು ಜಾರಿಯಲ್ಲಿವೆ.

ಕೆಲ ದಿನಗಳ ಹಿಂದೆ, ಏರ್ಟೆಲ್ ಹಾಗೂ ಜಿಯೋ ಕೂಡ 159 ರೂಪಾಯಿ ಪ್ಲಾನ್ ಶುರು ಮಾಡಿವೆ. ಏರ್ ಟೆಲ್ ಗೆ ಹೋಲಿಸಿದರೆ ಐಡಿಯಾದ ಅಸ್ತಿತ್ವ ದಕ್ಷಿಣ ಭಾರತದಲ್ಲೇ ಅಧಿಕವಾಗಿದೆ. ವೋಡಾಫೋನ್ ಗ್ರಾಹಕರು ಮೆಟ್ರೋ ನಗರಗಳಲ್ಲಿ ಅಧಿಕವಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಐಡಿಯಾ ನಾಲ್ಕನೇ ಸ್ಥಾನದಲ್ಲಿದೆ. ಐಡಿಯಾ ಸೆಲ್ಯುಲಾರ್ ನ ಹೊಸ 159ರು ಗಳ ಯೋಜನೆ ಹಾಗೂ ಇನ್ನಿತರ ರೀಚಾರ್ಜ್ ಗಳ ವಿವರ ಮುಂದಿದೆ..

ಐಡಿಯಾ 159 ರೂಪಾಯಿ ಪ್ಲಾನ್

ಐಡಿಯಾ 159 ರೂಪಾಯಿ ಪ್ಲಾನ್

ಐಡಿಯಾ 159 ರೂಪಾಯಿ ಪ್ಲಾನ್ ನಲ್ಲಿ ವೊಡಾಫೋನ್ ಪ್ಲಾನ್ ನಂತೆ 28 ಜಿಬಿ ಡೇಟಾ(2ಜಿ/3ಜಿ/4ಜಿ) ಹಾಗೂ ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ. ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿ ದಿನ ಗ್ರಾಹಕರು 1ಜಿಬಿ ಡೇಟಾದ ಲಾಭ ಪಡೆಯಲಿದ್ದಾರೆ. ಸದ್ಯಕ್ಕೆ ಕೆಲವು ಟೆಲಿಕಾಂ ಸರ್ಕಲ್ ಗಳಲ್ಲಿ ಮಾತ್ರ ಈ ಯೋಜನೆ ಲಭ್ಯವಿದೆ.

309ರು ಗಳ ರೀಚಾರ್ಜ್ ಯೋಜನೆ

309ರು ಗಳ ರೀಚಾರ್ಜ್ ಯೋಜನೆ

309ರು ಗಳ ರೀಚಾರ್ಜ್ ಯೋಜನೆ : 1ಜಿಬಿ 3ಜಿ ಡೇಟಾ ಪ್ರತಿದಿನ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, ರೋಮಿಂಗ್ ಹೊರ ಹೋಗುವ ಕರೆಗಳು, 100 ಎಸ್ಎಂಎಸ್ ಪ್ರತಿದಿನ ಉಚಿತ. ವ್ಯಾಲಿಡಿಟಿ ಅವಧಿಯಲ್ಲಿ ಅಧಿಕೃತ ವೆಬ್ ಸೈಟ್ ಅಥವಾ ಆಪ್ ಮೂಲಕ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ 1ಜಿಬಿ ಡೇಟಾ ಲಭಿಸಲಿದೆ. ಈ ಪ್ಲಾನ್ ಮಿತಿ 28 ದಿನ.

179 ರು ಯೋಜನೆ

179 ರು ಯೋಜನೆ

ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ವಾಯ್ಸ್ ಕಾಲಿಂಗ್. ಪ್ರತಿದಿನ ಇಂಟರ್ನೆಟ್ 1 ಜಿಬಿ ಡೇಟಾ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28 ದಿನಗಳ ವ್ಯಾಲಿಡಿಟಿ. ಪ್ರತಿ ದಿನ ಸ್ಥಳೀಯ ಹಾಗೂ ರಾಷ್ಟ್ರೀಯ 100 ಎಸ್ಎಂಎಸ್ ಉಚಿತ. ಈ ಯೋಜನೆಗೆ ಯಾವುದೇ ಕ್ಯಾಶ್ ಬ್ಯಾಕ್ ಆಫರ್ ಇಲ್ಲ.

189 ರು ಯೋಜನೆ

189 ರು ಯೋಜನೆ

ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ವಾಯ್ಸ್ ಕಾಲಿಂಗ್. ಪ್ರತಿದಿನ ಇಂಟರ್ನೆಟ್ 2 ಜಿಬಿ(2ಜಿ/4ಜಿ) ಡೇಟಾ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28 ದಿನಗಳ ವ್ಯಾಲಿಡಿಟಿ. ಪ್ರತಿ ದಿನ ಸ್ಥಳೀಯ ಹಾಗೂ ರಾಷ್ಟ್ರೀಯ 100 ಎಸ್ಎಂಎಸ್ ಉಚಿತ.

199 ರು ಯೋಜನೆ

199 ರು ಯೋಜನೆ

ಅನಿಯಮಿತ ಸ್ಥಳೀಯ, ರಾಷ್ಟ್ರೀಯ ಹಾಗೂ ರೋಮಿಂಗ್ ವಾಯ್ಸ್ ಕಾಲಿಂಗ್. ಪ್ರತಿದಿನ ಇಂಟರ್ನೆಟ್ 1.4 ಜಿಬಿ(2ಜಿ/4ಜಿ) ಡೇಟಾ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28 ದಿನಗಳ ವ್ಯಾಲಿಡಿಟಿ. ಪ್ರತಿ ದಿನ ಸ್ಥಳೀಯ ಹಾಗೂ ರಾಷ್ಟ್ರೀಯ 100 ಎಸ್ಎಂಎಸ್ ಉಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+