FD ಮೇಲಿನ ಬಡ್ಡಿ ದರ ಇಳಿಕೆ ಮಾಡಿದ ಐಸಿಐಸಿಐ ಬ್ಯಾಂಕ್: ಎಷ್ಟು ಪರ್ಸೆಂಟ್ ಕಮ್ಮಿ ಆಗಿದೆ?
ನವದೆಹಲಿ,
ಸೆಪ್ಟೆಂಬರ್ 08: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಕೆಲವು ಅವಧಿಯ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. 91 ದಿನಗಳಲ್ಲಿ ಮುಕ್ತಾಯಗೊಳ್ಳುವ ಠೇವಣಿಗಳ ಬಡ್ಡಿದರವನ್ನು ಬ್ಯಾಂಕ್ ತೀವ್ರವಾಗಿ ಕಡಿತಗೊಳಿಸಿದೆ. id="toptextpromo"> id='are-slot-1' class='oiad oi-axt oiadv'>ಐಸಿಐಸಿಐ
ಬ್ಯಾಂಕ್‌ನಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗೆ ನಿಶ್ಚಿತ ಠೇವಣಿ ಯೋಜನೆಗಳಿವೆ. ಆದರೆ ಇತ್ತೀಚಿನ ಬಡ್ಡಿ ದರ ಪರಿಷ್ಕರಣೆ ನಂತರ 7 ದಿನಗಳಿಂದ 29 ದಿನಗಳವರೆಗಿನ ಎಫ್‌ಡಿ ಠೇವಣಿಗಳ ಮೇಲೆ ಶೇಕಡಾ 2.5ರಷ್ಟು ಬಡ್ಡಿಯನ್ನು ನೀಡುತ್ತವೆ. ಠೇವಣಿಗಳ ಮೇಲೆ 30 ದಿನಗಳಿಂದ 90 ದಿನಗಳಲ್ಲಿ ಶೇಕಡಾ 3ರಷ್ಟು ನಿಗದಿಯಾಗಿದೆ. id='are-slot-2' class='oiad oi-axt oiadv'>
50 ಬೇಸಿಸ್ ಪಾಯಿಂಟ್ ಬಡ್ಡಿದರ ಕಡಿತ
91 ದಿನಗಳಿಂದ 184 ದಿನಗಳವರೆಗಿನ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ತೀವ್ರವಾಗಿ ಕಡಿತಗೊಳಿಸಿದೆ. ಈ ಠೇವಣಿಗಳು ಈಗ ಶೇಕಡಾ 3.5ರಷ್ಟು ಪಡೆಯುತ್ತವೆ.

1 ವರ್ಷದೊಳಗಿನ ಎಫ್‌ಡಿ ಬಡ್ಡಿದರ ಶೇಕಡಾ 0.10ರಷ್ಟು ಕಡಿತ
ಇನ್ನು 185 ದಿನಗಳಿಂದ 289 ದಿನಗಳವರೆಗಿನ ಅವಧಿಯ ಠೇವಣಿಗಳ ಮೇಲೆ, ಐಸಿಐಸಿಐ ಬ್ಯಾಂಕ್ ಶೇಕಡಾ 4.40ರಷ್ಟು ಬಡ್ಡಿದರವನ್ನು ನೀಡುತ್ತದೆ. 290 ದಿನಗಳಲ್ಲಿ ಪಕ್ವವಾಗುವ ಒಂದು ವರ್ಷದೊಳಗಿನ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಬ್ಯಾಂಕ್ 10 ಬಿಪಿಎಸ್ ಪಾಯಿಂಟ್ ಕಡಿತಗೊಳಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಐಸಿಐಸಿಐ ಬ್ಯಾಂಕ್ 290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಲ್ಲಿ ಶೇಕಡಾ 4.4ರಷ್ಟು ನೀಡುತ್ತಿದೆ.

ದೀರ್ಘಾವಧಿ ಯೋಜನೆಗಳ ಬಡ್ಡಿದರ ಎಷ್ಟು?
1 ವರ್ಷದಿಂದ 18 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳು ಶೇಕಡಾ 5ರ ಬಡ್ಡಿದರವನ್ನು ಪಡೆಯುತ್ತವೆ. ಈಗ, 18 ತಿಂಗಳಿನಿಂದ 3 ವರ್ಷಗಳ ಅವಧಿಯ ಎಫ್‌ಡಿಗಳು ನಿಮಗೆ ಶೇಕಡಾ 5.10ರಷ್ಟು ಬಡ್ಡಿಯನ್ನು ನೀಡುತ್ತದೆ. ಇತ್ತೀಚಿನ ಪರಿಷ್ಕರಣೆಯ ಪ್ರಕಾರ, 5 ರಿಂದ 10 ವರ್ಷಗಳ ಅವಧಿಯ ಎಫ್‌ಡಿಗಳು ಶೇಕಡಾ 5.50ರಷ್ಟು ಬಡ್ಡಿಯನ್ನು ನೀಡುತ್ತದೆ.

ವಿವಿಧ ಅವಧಿಯ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರಗಳು
7 ರಿಂದ 14 ದಿನಗಳು- 2.50%
15 ರಿಂದ 29 ದಿನಗಳು - 2.50%
30 ರಿಂದ 45 ದಿನಗಳು - 3%
46 ರಿಂದ 60 ದಿನಗಳು - 3%
61 ರಿಂದ 90 ದಿನಗಳು- 3%
91 ರಿಂದ 120 ದಿನಗಳು - 4% (3.5)
121 ರಿಂದ 184 ದಿನಗಳು - 4% (3.5)
185 ರಿಂದ 210 ದಿನಗಳು - 4.40%
211 ರಿಂದ 270 ದಿನಗಳು - 4.40%
271 ರಿಂದ 289 ದಿನಗಳು- 4.40%
290 ದಿನಗಳು ಮತ್ತು 1 ವರ್ಷದೊಳಗೆ - 4.50% (4.4)
1 ವರ್ಷದಿಂದ 389 ದಿನಗಳು - 5%
390 ದಿನಗಳಿಂದ 18 ತಿಂಗಳು - 5%
18 ತಿಂಗಳಿಂದ 2 ವರ್ಷ - 5.1%
2 ವರ್ಷ 1 ದಿನದಿಂದ 3 ವರ್ಷ - 5.1%
3 ವರ್ಷ 1 ದಿನದಿಂದ 5 ವರ್ಷ - 5.35%
5 ವರ್ಷ 1 ದಿನದಿಂದ 10 ವರ್ಷ - 5.50%
ಹಿರಿಯ ನಾಗರಿಕರಿಗೆ ಪ್ರತಿ ಅವಧಿಯ ನಿಶ್ಚಿತ ಠೇವಣಿಯ ಬಡ್ಡಿಯ ಮೇಲೆ ಹೆಚ್ಚುವರಿ 0.50 ಬಡ್ಡಿಯನ್ನು ನೀಡಲಾಗುವುದು












Click it and Unblock the Notifications