ಹೃತಿಕ್ ರೋಷನ್ ರಿಂದ ಸೆಂಡ್ ಮೈ ಗಿಫ್ಟ್ ಗೆ ಚಾಲನೆ
ಬೆಂಗಳೂರು, ಅ.20: ಸದಾ ಕಾಡುವ ಹಿಂದಿನ ಎಲ್ಲಾ ಸುಮಧುರ ನೆನಪುಗಳನ್ನೂ ಭದ್ರವಾಗಿ ಬಂಧಿಸಿ ಇಡಬಲ್ಲಂತಹ ಉಡುಗೊರೆಯೊಂದನ್ನು ಅಷ್ಟೇ ಮಧುರ ಹಾರೈಕೆಗಳೊಂದಿಗೆ ನೀಡಲು ಪ್ರತಿಯೊಬ್ಬರೂ ಬಯಸುತ್ತಾರೆ. ಶುಭ ಹಾರೈಕೆಗಳ ಉಡುಗೊರೆಗಳನ್ನು ಆಯ್ಕೆ ಮಾಡಿ ಖರೀದಿಸುವುದನ್ನು ಸುಲಭಗೊಳಿಸುವ ಸಲುವಾಗಿಯೇ ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ಮೈದಳೆದಿದೆ.
ಟಿಜಿಎಸ್-ಇ ರೂಪುಗೊಳಿಸಿರುವ 'ಸೆಂಡ್ ಮೈ ಗಿಫ್ಟ್' ಮೂಲಕ ಕೇವಲ ಬೆರಳ ತುದಿಯಲ್ಲಿಯೇ ಕಂಪ್ಯೂಟರ್ ಅಥವಾ ಸ್ಮಾರ್ಟ್‍ಫೋನ್ ಬಳಸಿ ಬೇಕಾದ ಗಿಫ್ಟ್ ಆಯ್ಕೆ ಮಾಡಬಹುದಾಗಿದ್ದು, ಈ ಬಹುನಿರೀಕ್ಷಿತ ಇ-ವಾಣಿಜ್ಯ ವಹಿವಾಟು ಕೇಂದ್ರವನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಇದೇ 21 ರಿಂದ ಉದ್ಘಾಟಿಸಲಿದ್ದಾರೆ.
ಉಡುಗೊರೆಗಳ ಹೊಸಲೋಕವನ್ನೇ ಅನಾವರಣಗೊಳಿಸುವ ಸೆಂಡ್ ಮೈ ಗಿಫ್ಟ್' ಪೋರ್ಟಲ್, ಉಡುಗೊರೆ ಖರೀದಿ-ನೀಡುವ ವಾಡಿಕೆಗೇ ಹೊಸ ಭಾಷ್ಯವನ್ನು ಬರೆಯಲಿದೆ.

ಉಡುಗೊರೆಗಳನ್ನೇ ಖರೀದಿಸಲು ಮರೆಯುವವರಿಗೂ ಇದು ವರದಾನವಾಗಲಿದೆ. ಲಕ್ಷಕ್ಕೂ ಹೆಚ್ಚು ಬಗೆಯ ಉಡುಗೊರೆಗಳ ವಿಶಾಲ ಶ್ರೇಣಿಯನ್ನೇ 'ಸೆಂಡ್ ಮೈ ಗಿಫ್ಟ್' ಗ್ರಾಹಕರ ಮುಂದಿಡಲಿದೆ. ಪರಿಣಾಮ, ಇನ್ನು ಉಡುಗೊರೆಗಳ ಆಯ್ಕೆ ಮತ್ತು ಖರೀದಿಗಾಗಿ ವಿಶಾಲ ಶಾಪಿಂಗ್ ಮಾಲ್‍ಗಳಿಗೆ ಎಡೆತಾಕಬೇಕಾದ ಅಗತ್ಯವಿಲ್ಲ, ಟ್ರಾಫಿಕ್‍ನಲ್ಲಿ ಒದ್ದಾಡಬೇಕಾದ ಅಗತ್ಯವಿಲ್ಲ.
ಆರಿಸಿದ ಗಿಫ್ಟ್ ಅನ್ನು 'ಸೆಂಡ್ ಮೈ ಗಿಫ್ಟ್' ಒಪ್ಪ-ಓರಣವಾಗಿ ಪ್ಯಾಕ್ ಮಾಡಿ ನೀವಿಷ್ಟಪಟ್ಟವರಿಗೆ ತಲುಪಿಸಿ ಅವರಲ್ಲಿ ಅಚ್ಚರಿ ಮೂಡಿಸುತ್ತದೆ, ಮಂದಹಾಸ ಮೂಡಿಸುತ್ತದೆ. 'ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ಡಾ. ಮನ್‍ದೀಪ್ ಕೌರ್‍ನ ಕನಸು.
7,000 ಮಾರಾಟಗಾರರು: 'ಡೆಲಿವರಿಂಗ್ ಎಮೋಷನ್ಸ್' ಎನ್ನುವ ಟ್ಯಾಗ್‍ಲೈನ್ ಹೊಂದಿರುವ 'ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ನಿಜಕ್ಕೂ ಭಾವನೆಗಳನ್ನೇ ರವಾನಿಸಿ ಆಚರಣೆಗಳನ್ನು ಸ್ಮರಣೀಯವಾಗಿಸಲಿದೆ ಎನ್ನುತ್ತಾರೆ ಪೋರ್ಟಲ್‍ನ ಸಹಸಂಸ್ಥಾಪಕರಾದ ಚಿಂಟಾ ಶ್ಯಾಮ್‍ಸುಂದರ್.
ರಾಷ್ಟ್ರದಾದ್ಯಂತದ 7,000 ಕ್ಕೂ ಹೆಚ್ಚು ಮಾರಾಟಗಾರು 'ಸೆಂಡ್ ಮೈ ಗಿಫ್ಟ್' ಧ್ಯೇಯೋದ್ದೇಶಗಳನ್ನು ಒಪ್ಪ-ಓರಣವಾಗಿ ಪಾಲಿಸಲಿದ್ದು, ಗ್ರಾಹಕರನ್ನು ಸಂತೃಪ್ತಗೊಳಿಸಲಿದ್ದಾರೆ.
ಪ್ರತಿಯೊಂದೂ ಸಂದರ್ಭಗಳನ್ನೂ ಸ್ಮರಣೀಯವಾಗಿಸಬಲ್ಲ ವಿಶಾಲ ಶ್ರೇಣಿಯ ಉತ್ಪನ್ನಗಳು, ಒಂದೇ ದಿನದಲ್ಲಿ ಡೆಲಿವರಿ, ಉತ್ತಮ ಪ್ಯಾಕಿಂಗ್, ಗುಣಮಟ್ಟದ ಉತ್ಪನ್ನಗಳು ಮತ್ತು ಅತ್ಯುತ್ತಮ ಸೇವೆ 'ಸೆಂಡ್ ಮೈ ಗಿಫ್ಟ್'ನ ವಿಶಿಷ್ಠ ಗುಣಲಕ್ಷಣಗಳು, ಎನ್ನುತ್ತಾರೆ ಚಿಂಟಾ ಶ್ಯಾಮ್‍ಸುಂದರ್.
ಚಾಕಲೇಟ್‍ನಿಂದ ಆರಂಭಿಸಿ ದುಬಾರಿ ಕರಕುಶಲವಸ್ತುಗಳವರೆಗೆ, ಕೇಕ್‍ನಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ ತರಹೇವಾರಿ ಉಡುಗೊರೆಗಳ ಹೊಸಲೋಕವನ್ನೇ ಇದೇ 22ರಿಂದ 'ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ನಿಮಗಾಗಿ ತೆರೆದಿಡಲಿದೆ.












Click it and Unblock the Notifications